Sandalwood: ಅನಿತಾ ಭಟ್ ಅವರು ಕರ್ನಾಟಕ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದು, ಸಿನಿಮಾ ಕ್ಷೇತ್ರದಲ್ಲಿ ಆದ ಕೆಲವು ಕಹಿ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ಅನಿತಾ ಭಟ್ ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರೂ, ಇನ್‌ಕಮ್‌ಗಾಗಿ ಬೇರೆ ದಾರಿ ಹುಡುಕಬೇಕು ಎಂದುಕೊಂಡವರು. ಆದರೆ ಅನಿತಾ ಯಾವ ಕೆಲಸ ಮಾಡಿದರೂ, ಸಿನಿಮಾ ಕ್ಷೇತ್ರ ಮಾತ್ರ ಅವರನ್ನು ಬಿಡಲು ತಯಾರಿರಲಿಲ್ಲ. ಬೇರೆ ಕೆಲಸ ಮಾಡಲು ಶುರು ಮಾಡಿದಾಗ, ಸಿನಿಮಾ ಅವಕಾಶ ಬರುತ್ತಿತ್ತಂತೆ. ಹೀಗಿಗಾ ಅನಿತಾ ಅವರು ಸಿನಿಮಾ ಕ್ಷೇತ್ರದಲ್ಲೇ ಉಳಿಯುವ ಮನಸ್ಸು ಮಾಡಿದರು.
ಇನ್ನು ಸಿನಿಮಾ ಆಯ್ಕೆ ಮಾಡುವಾಗ ನಾನು ಎಡವಿದೆ ಎಂದು ಹೇಳಿರುವ ಅನಿತಾ, ಕೆಲ ಸಿನಿಮಾದಲ್ಲಿ ನಾವೇ ಮೇನ್ ಅನ್ನೋ ರೀತಿ ಶೂಟಿಂಗ್ ಮಾಡಿರುತ್ತಾರೆ. ೆಆದರೆ ಸಿನಿಮಾ ನೋಡುವಾಗ, ಹಲವು ಸೀನ್‌ಗಳಿಗೆ ಕತ್ತರಿ ಬಿದ್ದಿರುತ್ತದೆ. ಕೆಲವೇ ಕೆಲವು ದೃಶ್ಯಗಳಲ್ಲಿ ನಾವು ಕಾಣಿಸುತ್ತೇವೆ ಎಂದು ಅನಿತಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನು ಸಿನಿಮಾದಲ್ಲಿ ನಟಿಸುವ ನಟಿಯರಿಗೆ ಇರಬೇಕಾದ ಗುಣಗಳ ಬಗ್ಗೆ ಟಿಪ್ಸ್ ನೀಡಿರುವ ಅನಿತಾ, ಹೆಣ್ಣು ಮಕ್ಕಳಿಗೆ ನಟಿಸುವ ಆಸೆ ಇದ್ದರೆ, ಅವರಿಗೆ ಎಲ್ಲಕ್ಕಿಂತ ಮುಂಚೆ ಇರಬೇಕಾದ ಅರ್ಹತೆ ಎಂದರೆ, ಅದು ತಾಳ್ಮೆ. ದೇಹ, ಸೌಂದರ್ಯ ಎಲ್ಲವೂ ಚೆನ್ನಾಗಿರಬೇಕು ಅನ್ನೋದು ಒಂದು ಕಡೆಯಾದರೆ, ಚೆನ್ನಾಗಿ ಕಾಣುವವರನ್ನೂ ಕುರೂಪಿ ಮಾಡಿ, ನಟಿಸುವ ಅವಕಾಶ ನೀಡಲಾಗುತ್ತದೆ. ಹಾಗಾಗಿ ಎಲ್ಲಕ್ಕಿಂತ ಮುಖ್ಯವಾಗಿ ನಾವು ತಾಳ್ಮೆಯಿಂದ ನಟಿಸುವುದನ್ನು ಕಲಿಯಬೇಕು ಅಂತಾರೆ ಅನಿತಾ. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.

