Friday, April 25, 2025

Latest Posts

ಸಿಎಂ ಸಿದ್ದರಾಮಯ್ಯ ಮಂಡಿಸಿದ ಬಜೆಟ್‌ನ್ನು ಹಾಡಿಹೊಗಳಿದ ಸತೀಶ್ ಜಾರಕಿಹೊಳಿ, ಕೋನರೆಡ್ಡಿ

- Advertisement -

Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಪಿಡಬ್ಲ್ಯೂಡಿ ಸತೀಶ್ ಜಾರಕಿಹೊಳಿ ಮಾತನಾಡಿದ್ದು, ಸಿದ್ದರಾಮಯ್ಯ ದಾಖಲೆ ಬಜೆಟ್ ಮಂಡಿಸಿದ್ದಾರೆ. ನಮಗೆ ಸಂತೋಷ ಆಗಿದೆ. ಇನ್ನು ಬಜೆಟ್ ಇಂಪ್ಲಿಮೆಂಟ್ ಆಗಬೇಕು. ರಾಜ್ಯದ ಪರ ಬಜೆಟ್ ಎಂದು ಸತೀಶ್ ಜಾರಕಿಹೊಳಿ ಮಾತನಾಡಿದ್ದಾರೆ.

ಅಲ್ಪ ಸಂಖ್ಯಾತ ಅಂದ್ರೆ ಐದಾರು ಸಮುದಾಯ ಜನ ಬರ್ತಾರೆ. ಹೀಗಾಗಿ ಅವರಿಗೆ ಸ್ವಲ್ಪ ಬಜೆಟ್ ಕೊಟ್ಟಿರಬಹುದು. ಪಾಕಿಸ್ತಾನ ಮುಸ್ಲಿಂ ಅಂದ್ರೆ ಬಿಜೆಪಿಯವರಿಗೆ ಸಂಜೀವಿನಿ. ಅವರ ಪಾಕಿಸ್ತಾನದ ಬಗ್ಗೆ ಮಾತಾಡೋದು ಸಹಜ. ಅದನ್ನು ಬಿಟ್ಟು ಅವರಿಗೆ ಏನಿದೆ..? ಪಾಕಿಸ್ತಾನದವರು ಇಲ್ಲೆ ಎಲ್ಲಿಯಾದರೂ ಇರಬೇಕು ನೋಡಿ. ಸಾಲ ಅನಿವಾರ್ಯ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಇನ್ನು ಶಾಸಕ ಕೋನರೆಡ್ಡಿ ಕೂಡ ಬಜೆಟ್ ಬಗ್ಗೆ ಹೇಳಿಕೆ ಕೊಟ್ಟಿದ್ದು, ರಾಜ್ಯದ ಬಜೆಟ್ ದೂರದೃಷ್ಟಿಯ ಬಜೆಟ್. ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಮಂಡಿಸಿದ ಬಜೆಟ್ ದೂರದೃಷ್ಟಿಯ ಬಜೆಟ್. ಎಲ್ಲ ರಂಗದ ಜನರಿಗೆ ಉಪಯೋಗವಾಗುವ ಬಜೆಟ್ ಇದಾಗಿದೆ. ಕೃಷಿ, ಕೈಗಾರಿಕಾ, ಮೂಲಭೂತ ಸೌಕರ್ಯ ಹೀಗೆ ಎಲ್ಲಾ ವಲಯದಲ್ಲಿಯೂ ಕೂಡ ಆದ್ಯತೆ ನೀಡಲಾಗಿದೆ. ದೂರದೃಷ್ಟಿಯ ಬಜೆಟ್ ಮಂಡಿಸಿದ್ದಾರೆ. ಇದರಿಂದ ರಾಜ್ಯದ ಜನರಿಗೆ ಉಪಯೋಗ ಆಗಲಿದೆ ಎಂದು ಕೋನರೆಡ್ಡಿ ಹೇಳಿದ್ದಾರೆ.

- Advertisement -

Latest Posts

Don't Miss