Hubli News: ಹುಬ್ಬಳ್ಳಿ: ಇಂದು ಸಿಎಂ ಸಿದ್ದರಾಮಯ್ಯ ತಮ್ಮ 16ನೇ ಬಜೆಟ್ ಮಂಡನೆ ಮಾಡಿದ್ದು, ಈ ಬಜೆಟ್‌ನ್ನು ಬಿಜೆಪಿ ನಾಯಕರು ವ್ಯಂಗ್ಯವಾಡಿದ್ದಾರೆ.
ರಾಜ್ಯ ಬಜೆಟ್ ಬಗ್ಗೆ ಮಾತನಾಡಿರುವ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ, ಈ ಬಜೆಟ್ ಕರ್ನಾಟಕವನ್ನ ಸಾಲದ ಕೂಪಕ್ಕೆ ತಳ್ಳಿದೆ. ಕರ್ನಾಟಕ ಆರ್ಥಿಕ ಸಂಕಷ್ಟಕ್ಕೆ ಸಿಲುಕಲು ದೊಡ್ಡ ಕೊಡುಗೆ ಈ ಬಜೆಟ್ ಕೊಟ್ಟಿದೆ. ಇದು ಜನ ವಿರೋಧಿ, ಅಭಿವೃದ್ಧಿ ವಿರೋಧಿ ಬಜೆಟ್. ಕೇವಲ ಬೆಂಗಳೂರು-ಮೈಸೂರು ಸೀಮಿತವಾದಂತ ಬಜೆಟ್ ಎಂದು ಕಿಡಿಕಾರಿದ್ದಾರೆ.
ಅತ್ಯಂತ ನಿರಾಶದಾಯಕ ಬಜೆಟ್. ಹಣಕಾಸಿನ ಸ್ಥಿತಿ ಸುಧಾರಿಸುವಂತ ಯಾವುದೇ ಕ್ರಮ ಇಲ್ಲಾ. ಕಳೆದ ವರ್ಷ ಕೊಟ್ಟ ಬಜೆಟ್ ನ ಹಣ ಖರ್ಚು ಮಾಡಿಲ್ಲ. 5 ಸಾವಿರ ಕೋಟಿ ಕಲ್ಯಾಣ ಕರ್ನಾಟಕಕ್ಕೆ ಕೊಡಬೇಕು ಅಂತ ಕೇಳಿದ್ವಿ. ನೈಯಾ ಪೈಸಾ ಕೊಡಲಿಲ್ಲ ಕಳೆದ ವರ್ಷ ರೆವೆನ್ಯು ಕಲೆಕ್ಟ್ ಮಾಡಬೇಕು, ಅದನ್ನು ಮಾಡಿಲ್ಲ. 10 ಸಾವಿರ ಕೋಟಿ ಕಡಿಮೆ ಮಾಡಿದ್ದಾರೆ, ವೆಚ್ಚ ಕೂಡ ಕಡಿಮೆ ಮಾಡಿದ್ದಾರೆ. ಹೆಚ್ಚಿನ ಸಾಲ ತೆಗೆದುಕೊಳ್ಳೋದೇ ಇದರ ಸಾಧನೆ ಎಂದು ಬೊಮ್ಮಾಯಿ ವ್ಯಂಗ್ಯವಾಡಿದ್ದಾರೆ.
ಮೈಸೂರು ಹಾಗೂ ಬೆಂಗಳೂರಿಗೆ ಹೆಚ್ಚಿನ ಒತ್ತು ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ಉತ್ತರ ಕರ್ನಾಟಕಕ್ಕೆ ಪ್ರಾದೇಶಿಕ ಸಮತೋಲನ ಮಾಡೋಕೆ ಯಾವುದು ಕ್ರಮ ಆಗಿಲ್ಲ. ಕಲ್ಯಾಣ ಕರ್ನಾಟಕಕ್ಕೆ 5 ಸಾವಿರ ಕೋಟಿ ಕೊಟ್ಟು, ಖರ್ಚು ಮಾಡಿಲ್ಲ. ಎಸ್ ಸಿ ಪಿ, ಟಿ ಎಸ್ ಪಿ ಗೂ ಸಹ ಖರ್ಚು ಮಾಡಲ್ಲ.ಕಿತ್ತೂರ ಕರ್ನಾಟಕಕ್ಕೆ ಶೂನ್ಯ ಕೊಡುಗೆ ಎಂದು ಬೊಮ್ಮಾಯಿ ಅಸಮಾಧಾನ ಹೊರಹಾಕಿದ್ದಾರೆ.
ಇನ್ನು ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಬಜೆಟ್ ಬಗ್ಗೆ ಮಾತನಾಡಿದ್ದು, ಸಿದ್ದರಾಮಯ್ಯ ಬಜೆಟ್ ಬಗ್ಗೆ ನೀರಿಕ್ಷೆ ಇಲ್ಲ ಅಂತಾ ಹೇಳಿದ್ದೆ. ಹಾಗೆ ಆಯ್ತು. ಉತ್ತರ ಕರ್ನಾಟಕಕ್ಕೆ ಏನೂ ಉಪಯೋಗ ಆಗಿಲ್ಲ. ಕೃಷ್ಣ ಯೋಜನೆಗೆ ಹತ್ತು ಸಾವಿರ ಕೋಟಿ ಅಂದಿದ್ರು. ಹಣ ಕೊಡಲಿಲ್ಲ. ನೀರಾವರಿಗೂ ಹಣ ಕೊಟ್ಟಿಲ್ಲ. ಇವರ ಮೂಲ ಉದ್ದೇಶ ಸಾಲ ಮಾಡೋದು. ಇಷ್ಟು ದೊಡ್ಡ ಸಾಲ ಮಾಡಿರೋ ಮುಖ್ಯಮಂತ್ರಿ ಯಾರಾದರೂ ಇದ್ರೆ ಅದು ಸಿದ್ದರಾಮಯ್ಯ. ಏಳವರೆ ಲಕ್ಷ ಕೋಟಿ ಸಾಲ ಇದೆ. ಅಲ್ಪ ಸಂಖ್ಯಾತರ ತುಷ್ಟೀಕರಣ ಲಿಮಿಟ್ ಕ್ರಾಸ್ ಆಗಿದೆ. KIADB ಯಲ್ಲಿ ಮೀಸಲಾತಿ ಕೊಡತೀದಾರೆ. ಇದು ಹಿಂದೂಗಳಿಗೆ ದ್ರೋಹ ಮಾಡೋ ಬಜೆಟ್ ಮುಸ್ಲಿಂ ಪರ ಬಜೆಟ್. ಈ ಬಜೆಟ್ ನಿಂದ ಹಿಂದೂಗಳಿಗೆ ಏನೂ ಉಪಯೋಗ ಇಲ್ಲ. ಬೆಂಗಳೂರಿಗೆ ಹಣ ನೀಡಿದ್ದು ನೋಡಿದ್ರೆ ಡಿಕೆ ಶಿವಕುಮಾರ್ ಅವರನ್ನು ಪ್ಲೀಸ್ ಮಾಡೋಕೆ ಎಂದು ಶೆಟ್ಟರ್ ಹೇಳಿದ್ದಾರೆ.