Spiritual: ಇಂದು ಶನಿ ಅಮಾವಾಸ್ಯೆ ಶ್ರೀ ಶನೈಶ್ಚರನು ಕುಂಭ ರಾಶಿಯಿಂದ ಮೀನ ರಾಶಿಗೆ ಸ್ಥಾನ ಪಲ್ಲಟ ಮಾಡ್ತಿದ್ದಾನೆ, ಶನಿ ಸ್ಥಾನ ಪಲ್ಲಟ ಪ್ರಯುಕ್ತ ಇಂದು ಲೋಕಾ ಕಲ್ಯಾಣಕ್ಕಾಗಿ ಶ್ರೀ ಶನೈಶ್ಚರ ಸಹಸ್ರನಾಮದೊಂದಿಗೆ ಮಹಾಯಾಗವನ್ನು ಶ್ರದ್ಧೆ ಭಕ್ತಿಯಿಂದ ಪೂಜೆಯನ್ನ ಸಲ್ಲಿಸಲಾಯಿತು.
ಹೌದು ಇಂದು ಶನಿ ಅಮಾವಾಸ್ಯೆ ಹಾಗೂ ಶನಿ ಸ್ಥಾನ ಪಲ್ಲಟ. ಲೋಕಾ ಕಲ್ಯಾಣಕ್ಕಾಗಿ ಇಪ್ಪತ್ತೇಳು ನಕ್ಷತ್ರಗಳ ಇಪ್ಪತ್ತೇಳು ಹೋಮ ಕುಂಡಗಳ, ಶ್ರೀ ಶನೈಶ್ಚರ ಸಹಸ್ರನಾಮ ಹೋಮ ಹಾಗೂ ವಿಸ್ಮಯ ಹನುಮ ಗಾಯಿತ್ರಿ ಹೋಮಾ ಮಹಾಯಾಗವನ್ನು ಬೆಂಗಳೂರಿನ ಬನಶಂಕರಿಯ 6ನೇ ಹಂತದಲ್ಲಿರುವ ವಿಸ್ಮಯ ಶ್ರೀ ಬಯಲು ಬಸವೇಶ್ವರ ಸ್ವಾಮಿ ಹಾಗೂ ಶ್ರೀ ಕಾಶಿ ವಿಶ್ವನಾಥ ಸ್ವಾಮಿ ದೇವಾಲಯದಲ್ಲಿ ಶ್ರದ್ಧೆ ಭಕ್ತಿಯಿಂದ ನಡೆಸಲಾಯಿತು.ಶ್ರೀ ಶನೈಶ್ಚರ ಮಹಾಯಾಗದಲ್ಲಿಡಾ.ಶ್ರೀ ಶ್ರೀ ಭಗವಾನ್ ವಿಷ್ಟುದತ್ತ ಸ್ವಾಮೀಜಿ ಚಾಲನೆಯನ್ನು ನೀಡಿದ್ರು.ಇನ್ನೂ ಆಗಮ ಪ್ರವೀಣ ಶ್ತೀ ಮಧುಸೂದನ್ ಗುರುಗಳು ಕೂಡಾ ಮಹಾಯಾಗದಲ್ಲಿ ಭಾಗವಹಿಸಿ, ಹೋಮ ಮಹಾಯಾಗ ಪೂಜೆಯನ್ನು ನೆರವೇರಿಸಿದರು. ಶ್ರೀ ಶನೈಶ್ಚರ ಮಹಾಯಾಗದಲ್ಲಿ ಸಾವಿರಾರು ಭಕ್ತರು ಭಾಗವಹಿಸಿದ್ದು, ಇಪ್ಪತ್ತೇಳು ಹೋಮ ಕುಂಡಗಳ ಮುಂದೆ ಕೂತು ಪೂಜೆಯಲ್ಲಿ ಭಾಗಿಯಾಗಿ ಪುನೀತರಾದ್ರು.
ಶ್ರೀ ಶನೈಶ್ಚರ ಮಹಾಯಾಗ ಕಾರ್ಯಕ್ರಮಕ್ಕೆ ಆಗಮಿಸಿದ್ದ ಡಾ.ಶ್ರೀ ಶ್ತೀ ಭಗವಾನ್ ವುಷ್ಣುದತ್ತ ಸ್ವಾಮಿಜೀ ಮಹಾಯಾಗ ಪೂಜೆಯಲ್ಲಿ ಭಾಗವಹಿಸಿದ್ದ ಭಕ್ತರಿಗೆ ಶನೈಶ್ಚರನ ಸ್ಥಾನ ಪಲ್ಲಟದ ಹಾಗೂ ಪೂಜೆ ಬಗ್ಗೆ ಪ್ರವಚನ ಮಾಡಿದ್ರು.ನಂತನ ಮಾತನಾಡಿದ ಡಾ.ಶ್ರೀ ಶ್ರೀ ಭಗವಾನ್ ವಿಷ್ಣುದತ್ತ ಸ್ವಾಮೀಜಿ ಶನಿ ಕುಂಭ ರಾಶಿಯಿಂದ ಮೀನ ರಾಶಿಗೆ ಸ್ಥಾನ ಪಲ್ಲಟ ಪ್ರಯುಕ್ತ ಲೋಕಾ ಕಲ್ಯಾಣಕ್ಕಾಗಿ ಇಪ್ಪತ್ತೇಳು ಹೋಮ ಕುಂಡಗಳ ಮಹಾಯಾಗವನ್ನು ಇಂದು ಶ್ರೀ ಶನೈಶ್ಚರ ಸಹಸ್ರನಾಮ ಹೋಮದೊಂದಿಗೆ ಮಹಾ ಗಣಪತಿ ಹೋಮ ಹಾಗೂ ನವಗ್ರಹ ಹೋಮ ಪೂಜೆಯನ್ನು ನೆರವೇರಿಸಲಾಯಿತು ಎಂದು ಮಾತನಾಡಿದ್ರು.
ಒಟ್ಟಾರೆಯಾಗಿ ಇಂದು ಶನೇಶ್ವರನು ಕುಂಭ ರಾಶಿಯಿಂದ ಮೀನ ರಾಶಿಗೆ ಸ್ಥಾನ ಪಲ್ಲಟ ಮಾಡಿದ್ದು, ಬಯಲು ಬಸವೇಶ್ವರ ದೇವಾಲಯದಲ್ಲಿ ನಡೆದ ಶ್ರೀ ಶನೈಶ್ಚರ ಮಹಾಯಾಗ ಪೂಜಾ ಕಾರ್ಯಕ್ರಮವೂ ಅರ್ಥಪೂರ್ಣವಾಗಿ ನಡೆದಿದೆ. ಮಹಾಯಾಗ ಪೂಜೆಯಲ್ಲಿ ಭಕ್ತರು ಭಾಗಿಯಾಗಿ ಶ್ರೀ ಶನೈಶ್ಚರ ದೇವರ ಕೃಪೆಗೆ ಪಾತ್ರರಾಗಿದ್ದಾರೆ.