ಸಾತ್ವಿಕ ಆಹಾರ ಅಂದ್ರೆ ಈರುಳ್ಳಿ, ಬೆಳ್ಳುಳ್ಳಿ, ಮಾಂಸ, ಮೊಟ್ಟೆ ಬಳಸದೇ ಮಾಡಿದ ಶುದ್ಧ ಸಸ್ಯಾಹಾರ. ಇಂಥ ಆಹಾರವನ್ನು ಸೇವಿಸುವುದರಿಂದ ಸುಂದರ ತ್ವಚೆ ಮತ್ತು ನೀಳ ಕೇಶರಾಶಿಯನ್ನು ನೀವು ಪಡೆಯಬಹುದು. ಹಾಗಾದ್ರೆ ಬನ್ನಿ ಸಾತ್ವಿಕ ಆಹಾರದ ಬಗ್ಗೆ ತಿಳಿಯೋಣ..
ಆಹಾರಗಳಲ್ಲಿ ಹಲವು ಆಹಾಗಳಿದೆ. ಅವುಗಳಲ್ಲಿ ನೀವು ಜೀವಿತವಾದ ಆಹಾರವನ್ನು ತಿನ್ನುವುದರಿಂದ, ನಿಮ್ಮ ಆರೋಗ್ಯದ ಜೊತೆ, ಸೌಂದರ್ಯವನ್ನೂ ಕಾಪಾಡಿಕೊಳ್ಳಬಹುದು. ಅಂದ್ರೆ ಹಣ್ಣು, ತರಕಾರಿ, ತೆಂಗಿನಕಾಯಿ, ಮೊಳಕೆ ಕಾಳು, ಸೊಪ್ಪು ಇತ್ಯಾದಿ. ಇನ್ನು ಜೀವವಿರದ ತಿಂಡಿ ಅಂದ್ರೆ, ಪ್ಯಾಕೆಟ್‌ನಲ್ಲಿ ಬರುವ ಆಹಾರ, ಅಂಗಡಿಯಲ್ಲಿ ಸಿಗುವ ಪ್ರಿಸರ್ವೇಟಿವ್ಸ್ ಬಳಸಿದ ಜ್ಯೂಸ್, ಜಂಕ್ ಫುಡ್ ಇತ್ಯಾದಿ.
ಇಂಥ ಆಹಾರವನ್ನು ತಿನ್ನುವುದರಿಂದ ನಿಮ್ಮ ಹೊಟ್ಟೆ ತುಂಬುತ್ತದೆ. ಆದ್ರೆ ನಿಮ್ಮ ಕೂದಲು ಉದುರುತ್ತದೆ. ಸೌಂದರ್ಯ ಕುಂದುತ್ತದೆ. ಆರೋಗ್ಯ ಹಾಳಾಗುತ್ತದೆ. ಹಾಗಾಗಿ ನೀವು ಜೀವಿತವಾದ ಆಹಾರವನ್ನೇ ಸೇವಿಸಬೇಕು. ಇದರಿಂದ ನಿಮ್ಮ ರಕ್ತ ಶುದ್ಧವಾಗುತ್ತದೆ. ರಕ್ತ ಸಂಚಾರ ಸರಾಗಿವಾಗುತ್ತದೆ. ಇದರಿಂದ ಆರೋಗ್ಯ, ಸೌಂದರ್ಯ ಅಭಿವೃದ್ಧಿಯಾಗುತ್ತದೆ.
ಇನ್ನು ನೀವು ತ್ಯಜಿಸಬೇಕಾದ ಆಹಾರಗಳಂದ್ರೆ, ಬಿಳಿ ಅಕ್ಕಿ, ಸಕ್ಕರೆ, ಮೈದಾ, ಎಣ್ಣೆ, ಇವುಗಳನ್ನ ತಿನ್ನಬಾರದು. ಇದರ ಬದಲು ಬ್ರೌನ್ ರೈಸ್, ಬೆಲ್ಲ, ಖರ್ಜೂರ, ಕೊಬ್ಬರಿಯನ್ನ ಬಳಸಿ. ಎಣ್ಣೆಯ ಬದಲು ಮಿತವಾಗಿ ತುಪ್ಪವನ್ನು ಬಳಸಿ. ಇನ್ನು ನೀರಿನಂಶ ಇರುವ ಆಹಾರವನ್ನು ಬಳಸಿ. ಅಂದ್ರೆ ತರಕಾರಿ ಮತ್ತು ಹಣ್ಣು. ಸೌತೇಕಾಯಿ, ಕಲ್ಲಂಗಡಿ ಹಣ್ಣು, ಕರ್ಬೂಜ ಹಣ್ಣು, ಇತ್ಯಾದಿ. ನೀವು ಬೆಳಿಗ್ಗೆ ಎದದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಎಳನೀರು, ಅಥವಾ ಯಾವುದಾದರೂ ಜ್ಯೂಸ್ ಕುಡಿಯಿರಿ. ಅದಕ್ಕೆ ಸಕ್ಕರೆ ಮತ್ತು ನೀರು ಬಳಸಬೇಡಿ.
ನಿಮ್ಮ ಸೌಂದರ್ಯ ಮತ್ತು ಆರೋಗ್ಯಾಭಿವೃದ್ಧಿಗಾಗಿ ಮಾಡಬಹುದಾದ ಬೆಸ್ಟ್ ಡಯಟ್ ಅಂದ್ರೆ, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಜ್ಯೂಸ್ ಕುಡಿಯಿರಿ. ಅರ್ಧ ಗಂಟೆ ಬಳಿಕ ಒಂದು ದೊಡ್ಡ ಬೌಲ್ ಹಣ್ಣು ತಿನ್ನಿರಿ. ಮಧ್ಯೆಹ್ನ ಊಟದಲ್ಲಿ ಹಸಿ ಮತ್ತು ಬೇಯಿಸಿದ ತರಕಾರಿ, ಮತತ್ತು ಚಪಾತಿ ಅಥವಾ ರೊಟ್ಟಿ ತಿನ್ನಿರಿ. ಅನ್ನ ಬೇಡ. ಇನ್ನು ಸಂಜೆ ಹೊತ್ತು ಮೊಳಕೆ ಕಾಳಿನ ಉಸುಳಿ ಅಥವಾ ಕಾರ್ನ್ ಬೇಯಿಸಿ ತಿನ್ನಿ,. ಕರಿದ ತಿಂಡಿ, ಟೀ, ಕಾಫಿ ಬೇಡ. ಬಿಸಿ ನೀರು ಕುಡಿದರೆ ಸಾಕು. ಇಲ್ಲವಾದರೆ ಜ್ಯೂಸ್ ಕುಡಿಯಿರಿ. ಇನ್ನು ರಾತ್ರಿ ಲೈಟ್ ಆಹಾರ ಸೇವಿಸಿ. ಸೂಪ್ ಅಥವಾ ಎರಡು ರಾಗಿ ದೋಸೆ ಸಾಕು. ಇದಿಷ್ಟು ಸಾತ್ವಿಕ ಆಹಾರವನ್ನ ಪ್ರತಿದಿನ ಸೇವಿಸಿದರೆ ನಿಮ್ಮ ಸೌಂದರ್ಯ ಮತ್ತು ಆರೋಗ್ಯಾಭಿವೃದ್ಧಿ ಗ್ಯಾರಂಟಿ. ಇನ್ನು ಈ ಮೇಲೆ ಹೇಳಿದ ಆಹಾರ ಸೇವಿಸಿದ್ದಲ್ಲಿ, ನಿಮಗೆ ಅಲರ್ಜಿ ಎಂದಾದ್ದಲ್ಲಿ, ಈ ಬಗ್ಗೆ ವೈದ್ಯರ ಬಳಿ ವಿಚಾರಿಸಿ, ನಂತರ ಸೇವಿಸುವುದು ಉತ್ತಮ.