Thursday, November 27, 2025

Latest Posts

ಕ್ರಿಕೇಟ್ ಜಗತ್ತಿಗೆ ವಿದಾಯ ಹೇಳಿದ ಆಟಗಾರ ಸೌರಭ್ ತಿವಾರಿ

- Advertisement -

Sports News: 2006ರಲ್ಲಿ ಕ್ರಿಕೇಟ್ ಜಗತ್ತಿಗೆ ಕಾಲಿಟ್ಟು, ಕೊಹ್ಲಿ ಟೀಂನಲ್ಲಿ ಆಡಿ ವಿಶ್ವಕಪ್ ಗೆಲುವಿಗೆ ಸಾಕ್ಷಿಯಾಗಿದ್ದ ಆಟಗಾರ ಸೌರಭ್ ತಿವಾರಿ, ಕ್ರಿಕೇಟ್ ಜಗತ್ತಿಗೆ ವಿದಾಯ ಹೇಳಿದ್ದಾರೆ.

ಪ್ರಸ್ತುತ ಸೌರಭ್ ರಣಜಿ ಪಂದ್ಯ ಆಡುತ್ತಿದ್ದು, ತಮ್ಮ ಕೊನೆಯ ಪಂದ್ಯವನ್ನು ಜಾರ್ಖಂಡ್‌ನಲ್ಲಿ ಆಡುತ್ತಿದ್ದಾರೆ. ಬಳಿಕ ನಿವೃತ್ತಿ ತೆಗೆದುಕೊಳ್ಳಲಿದ್ದಾರೆ. 2006ರಿಂದ ಇಲ್ಲಿಯವರೆಗೂ ಸೌರಭ್ ಜಾರ್ಖಂಡ್ ಪರವೇ ರಣಜಿ ಪಂದ್ಯ ಆಡುತ್‌ತ ಬಂದಿದ್ದಾರೆ. ಆಟ ಎಲ್ಲಿಂದ ಶುರು ಮಾಡಿದ್ದರೋ, ಅಲ್ಲೇ ವಿದಾಯ ಹೇಳಲು ಸೌರಭ್ ನಿರ್ಧರಿಸಿದ್ದಾರೆ.

ಆದರೆ ರಣಜಿ ಪಂದ್ಯದಲ್ಲಿ ಇವರ ತಂಡ ಅಷ್ಟು ಉತ್ತಮವಾದ ಪರ್ಫಾಮೆನ್ಸ್ ನೀಡಿಲ್ಲ. ಹಾಗಾಗಿ ಕಾರ್ಟರ್ ಫೈನಲ್ ಸ್ಪರ್ಧೆಯಿಂದ ಈ ತಂಡ ದೂರ ಉಳಿದಿದೆ. 34 ವರ್ಷದ ಸೌರಭ್ ನಿವೃತ್ತಿ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ್ದು, ಇದು ಕಷ್ಟಕರ ವಿದಾಯ. ಆದರೆ ನಿವೃತ್ತಿ ಘೋಷಣೆ ಮಾಡಲು ಇದು ಸರಿಯಾದ ಸಮಯ ಎಂದು ನನಗನ್ನಿಸುತ್ತಿದೆ. ನಾನು ಐಪಿಎಲ್ ಮತ್ತು ರಾಷ್ಟ್ರೀಯ ತಂಡಗಳಲ್ಲಿ ಆಡುತ್ತಿಲ್ಲ. ಹಾಗಾಗಿ ಯುವ ಆಟಗಾರರಿಗೂ ಅವಕಾಶ ಸಿಗಲಿ ಎಂಬ ಕಾರಣಕ್ಕೆ, ಈ ನಿರ್ಧಾರ ಕೈಗೊಂಡಿದ್ದೇನೆ ಎಂದು ಸೌರಭ್ ಹೇಳಿದ್ದಾರೆ.

ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಮನೆಯಿಂದ ದುಬಾರಿ ಮೊಬೈಲ್ ಕಳ್ಳತನ

ಇನ್ನೆಂದೂ ಭಾರತಕ್ಕೆ ಭೇಟಿ ನೀಡುವುದಿಲ್ಲವೆಂದ ಟೆನ್ನಿಸ್ ತಾರೆ.. ಕಾರಣವೇನು..?

ವಿರಾಟ್ ಕೊಹ್ಲಿ ಬಗ್ಗೆ ನಾನು ಕೊಟ್ಟ ಹೇಳಿಕೆ ಸುಳ್ಳು: ಯೂಟರ್ನ್ ಹೊಡೆದ ಎಬಿಡಿ

- Advertisement -

Latest Posts

Don't Miss