Wednesday, April 16, 2025

Latest Posts

Karnatakaದ ಕರಕುಶಲ ಕಲೆಯ ಸ್ತಬ್ಧಚಿತ್ರಕ್ಕೆ ಎರಡನೇ ಸ್ಥಾನ..!

- Advertisement -

ನವದೆಹಲಿ : ಜನವರಿ 26ರಂದು ಗಣರಾಜ್ಯೋತ್ಸವದ (Republic Day) ಅಂಗವಾಗಿ ದೆಹಲಿಯ ಇಂಡಿಯಾ ಗೇಟ್ ಇಂದ ರಾಜಪಥದವರಿಗೆ ನಡೆದ ಪೆರೇಡ್ (Parade) ನಲ್ಲಿ ನಮ್ಮ ಕರ್ನಾಟಕದಿಂದ ಆಯ್ಕೆಯಾಗಿದ್ದ ಕರಕುಶಲ ಕಲೆಯ (Art of Handicrafts) ವೈಭವವನ್ನು ಸೂಚಿಸುವ ಸ್ತಬ್ಧಚಿತ್ರ ಎರಡನೇ ಸ್ಥಾನವನ್ನು (second award) ಪಡೆದುಕೊಂಡಿದೆ . ಕೇಂದ್ರ ಸರ್ಕಾರದ ರಕ್ಷಣಾ ಇಲಾಖೆಯ ಸಮಿತಿಗೆ ಅತ್ಯುತ್ತಮ ಸ್ತಬ್ಧಚಿತ್ರ ವಿಭಾಗದಲ್ಲಿ ನಮ್ಮ ರಾಜ್ಯದ ಕರಕುಶಲ ವೈಭವವನ್ನು ಬಿಂಬಿಸುವ ಸ್ತಬ್ಧಚಿತ್ರಕ್ಕೆ ಎರಡನೇ ಪ್ರಶಸ್ತಿಯನ್ನು ಘೋಷಣೆ ಮಾಡಿದ್ದಾರೆ. ಮೊದಲ ಸ್ಥಾನದಲ್ಲಿ ಉತ್ತರಪ್ರದೇಶದ ಕಾಶಿ ವಿಶ್ವನಾಥ ಕಾರಿಡಾರ್ (Kashi Vishwanath Corridor of Uttar Pradesh) ಕುರಿತ ಸ್ತಬ್ಧಚಿತ್ರ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ. ಅದೇ ರೀತಿ ಮೂರನೆಯ ಸ್ಥಾನವನ್ನು ಮೇಘಾಲಯದ ಮಹಿಳೆಯರ ಸಹಕಾರ ಸಂಘ ಹಾಗೂ ರಾಜ್ಯದ ಸುವರ್ಣ ಮಹೋತ್ಸವ ಸಂಭ್ರಮ ಬಿಂಬಿಸುವ ಸ್ತಬ್ಧಚಿತ್ರ ಪಡೆದುಕೊಂಡಿದೆ. ಇನ್ನು ಕೇಂದ್ರದ ಲೋಕೋಪಯೋಗಿ ಇಲಾಖೆಯ ಸುಭಾಷ್ ಚಂದ್ರ ಬೋಸ್ – 125 ಸ್ತಬ್ಧಚಿತ್ರಕ್ಕೆ ವಿಶೇಷ ಬಹುಮಾನ ದೊರೆತಿದೆ.ಅಂತೆಯೇ ‘ವಂದೇ ಭಾರತಮ್’ ನೃತ್ಯ ತಂಡವು ವಿಶೇಷ ಬಹುಮಾನ ಪಡೆದಿದ್ದು, ಹುಬ್ಬಳ್ಳಿಯ ಮಯೂರ ಭರತ ನೃತ್ಯ ಅಕಾಡೆಮಿಯ ನೃತ್ಯಪಟುಗಳು ಈ ತಂಡದಲ್ಲಿ ಭಾಗವಹಿಸಿದ್ದರು.

- Advertisement -

Latest Posts

Don't Miss