Tuesday, April 15, 2025

Latest Posts

Secondary Pu ಪರೀಕ್ಷೆಯ ವೇಳಾಪಟ್ಟಿ ಪ್ರಕಟ..!

- Advertisement -

ಪದವಿಪೂರ್ವ ಶಿಕ್ಷಣ ಇಲಾಖೆ (Department of Undergraduate Education) ಯಿಂದ ದ್ವಿತೀಯ ಪಿಯುಸಿ (secondary PUC) ಪರೀಕ್ಷೆಯ  ವೇಳಾಪಟ್ಟಿಯನ್ನು ಇಂದು ಬಿಡುಗಡೆ ಮಾಡಲಾಗಿದೆ. ಏಪ್ರಿಲ್ 16ರಿಂದ  ಮೇ ತಿಂಗಳ 6 ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆಯಲಿವೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ. ಪ್ರಕಟಣೆಯಂತೆ ಏಪ್ರಿಲ್​ 16 ರಂದು ಗಣಿತ (Mathematics) ವಿಷಯದ ಪರೀಕ್ಷೆ, ಏಪ್ರಿಲ್ 18 ರಂದು ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ ಪರೀಕ್ಷೆ ನಡೆಯಲಿದೆ. ಏಪ್ರಿಲ್ 20 ರಂದು ಇತಿಹಾಸ, ಭೌತಶಾಸ್ತ್ರ ಪರೀಕ್ಷೆ, ಏಪ್ರಿಲ್ 22 ರಂದು ತರ್ಕಶಾಸ್ತ್ರ ಪರೀಕ್ಷೆ, ಏಪ್ರಿಲ್ 23 ರಂದು ಮನಃಶಾಸ್ತ್ರ, ಕೆಮಿಸ್ಟ್ರಿ , ಏಪ್ರಿಲ್ 25 ರಂದು ಅರ್ಥಶಾಸ್ತ್ರ ಪರೀಕ್ಷೆ, ಏಪ್ರಿಲ್ 26 ರಂದು ಹಿಂದಿ ಭಾಷಾ ಪರೀಕ್ಷೆ, ಏಪ್ರಿಲ್​​ 28 ರಂದು ಕನ್ನಡ ಭಾಷಾ ಪರೀಕ್ಷೆ, ಏಪ್ರಿಲ್​​ 30 ರಂದು ಸಮಾಜಶಾಸ್ತ್ರ, ಕಂಪ್ಯೂಟರ್​​ ಸೈನ್ಸ್​ ಪರೀಕ್ಷೆ ನಡೆಯಲಿದೆ. ಮೇ 2 ರಂದು ಭೂಗೋಳ ಶಾಸ್ತ್ರ, ಜೀವಶಾಸ್ತ್ರ ಪರೀಕ್ಷೆ, ಮೇ 4 ರಂದು ಇಂಗ್ಲಿಷ್​​ ಭಾಷಾ ಪರೀಕ್ಷೆ, ಮೇ 6 ರಂದು ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಭೂಗರ್ಭ ಶಾಸ್ತ್ರ ಪರೀಕ್ಷೆ ನಡೆಯಲಿದೆ ಎಂದು  ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ವೇಳಾಪಟ್ಟಿ ಪ್ರಕಟ ಮಾಡಲಾಗಿದೆ.

- Advertisement -

Latest Posts

Don't Miss