Sandalwood News: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಶವ ಸಾಗಿಸಿದ್ದ ಸ್ಕಾರ್ಪಿಯೋ ಮಾಲೀಕ ಪುನೀತ್‌ನನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸರು, ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ.
ಈತ ಬರೀ ಸ್ಕಾರ್ಪಿಯೋ ಮಾಲೀಕನಷ್ಟೇ ಅಲ್ಲದೇ, ದರ್ಶನ್ ಸೋಶಿಯಲ್ ಮೀಡಿಯಾ ಹ್ಯಾಂಡಲ್ ಮಾಡುತ್ತಿದ್ದ. ಈ ಹಿನ್ನೆಲೆ ಪೊಲೀಸರು ಪುನೀತ್‌ನನ್ನು ಠಾಣೆಗೆ ಕರೆಸಿ, ವಿಚಾರಣೆಗೆ ಒಳಪಡಿಸಿದ್ದಾರೆ.
ಇನ್ನು ಅನ್ನಪೂರ್ಣೆಶ್ವರಿ ಠಾಣೆಯ ಸುತ್ತಮುತ್ತಲು 144 ಸೆಕ್ಷನ್ ಜಾರಿ ಮಾಡಲಾಗಿದ್ದು, ದರ್ಶನ್ ಫ್ಯಾನ್ಸ್ ಯಾರೂ ಠಾಣೆಗೆ ಬರಬಾರದೆಂದು, ಈ ನಿರ್ಧಾರ ಕೈಗೊಳ್ಳಲಾಗಿದೆ. ಕಳೆದ ಎರರಡು ದಿನಗಳಿಂದ ದರ್ಶನ್ ಫ್ಯಾನ್ಸ್ ಠಾಣೆ ಬಳಿ ಜಮಾಯಿಸುತ್ತಿದ್ದರು. ಹಾಗಾಗಿ ಸ್ಟೇಶನ್ ಸುತ್ತಮುತ್ತ 144 ಸೆಕ್ಷನ್ ಜಾರಿ ಮಾಡಲಾಗಿದೆ. ಸ್ಟೇಷನ್ ಒಳಭಾಗದಲ್ಲಿ ಏನೂ ಕಾಣದಂತೆ ಶಾಮಿಯಾನ ಹಾಕಿದ್ದು, ಮಾಧ್ಯಮಗಳಿಗೂ ಯಾವುದೇ ವಿಶ್ಯುವಲ್ಸ್ ಕಾಣದಂತೆ, ಕವರ್ ಮಾಡಲಾಗಿದೆ.
ಇನ್ನು ಓರ್ವ ಅಭಿಮಾನಿ, ದರ್ಶನ್ ಅರೆಸ್ಟ್ ಆಗಿದ್ದಕ್ಕೆ, 144 ಸೆಕ್ಷನ್ ಜಾರಿಯಾಗಿದ್ದಕ್ಕೆಲ್ಲ ಮಾಧ್ಯಮದವರೇ ಕಾರಣವೆಂದು ಪುಂಡಾಟಿಕೆ ಮೆರೆದಿದ್ದಾನೆ. ಮಾಧ್ಯಮದವರು ಈ ಬಗ್ಗೆ ವಿಚಾರಿಸಲು ಹೋದಾಗ, ಅಲ್ಲಿಂದ ಕಾಲ್ಕಿತ್ತಲು ಪ್ರಯತ್ನಿಸಿದ್ದಾನೆ. ಆದರೆ ಆ ಪುಂಡನನ್ನು ಪೊಲೀಸರು ಹಿಡಿದಿದ್ದು, ಆತ ಕುಡಿದ ನಶೆಯಲ್ಲಿ ಏನೇನೋ ಮಾತನಾಡಿದ್ದಾನೆಂದು ಗೊತ್ತಾಗಿದೆ.
ಯಡಿಯೂರಪ್ಪ ವಿರುದ್ಧ ಪೋಕ್ಸೋ ಕೇಸ್: ವಿಚಾರಣೆಗೆ ಹಾಜರಾಗುವಂತೆ ಸಿಐಡಿ ನೋಟಿಸ್
Sandalwood News: ಪವಿತ್ರಾ ಮೊಬೈಲ್‌ಗೆ ಮರ್ಮಾಂಗದ ಚಿತ್ರ ಕಳಿಸಿದ್ದ ರೇಣುಕಾಸ್ವಾಮಿ!