Tech News: ಉತ್ತರಪ್ರದೇಶದ ಅಲಹಾಬಾದ್‌ನ ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭ ಮೇಳ ನಡೆಯುತ್ತಿದೆ. ಸಂಕ್ರಾಂತಿ ಸಂದರ್ಭದಲ್ಲಿ ಈ ಕುಂಭ ಮೇಳ ಶುರುವಾಗಿದ್ದು, ಬರೀ ಭಾರತದಿಂದ ಅಷ್ಟೇ ಅಲ್ಲದೇ, ದೇಶ ವಿದೇಶಗಳಿಂದಲೂ ಜನ ಕುಂಭ ಮೇಳವನ್ನು ಕಣ್ತುಂಬಿಕೊಳ್ಳಲು ಬರುತ್ತಿದ್ದಾರೆ.
144 ವರ್ಷಕ್ಕೆ ಈ ಮಹಾ ಕುಂಭ ಮೇಳ ಬರುವ ಕಾರಣಕ್ಕೆ, ಈ ಜನ್ಮದಲ್ಲಿ ಕುಂಭ ಮೇಳವನ್ನು ನೋಡಿಬಿಡಬೇಕು. ತ್ರಿವೇಣಿ ಸಂಗಮದಲ್ಲಿ ಮುಳುಗಿ ಅಮೃತ ಸ್ನಾನ ಮಾಡಬೇಕು ಎಂದು ಹಲವರು ಕುಂಭ ಮೇಳಕ್ಕೆ ಹೋಗುತ್ತಿದ್ದಾರೆ. ಹಾಗಾಗಿ ಕುಂಭ ಮೇಳ ಮುಗಿಯುವರೆಗೂ 40ರಿಂದ 45 ಕೋಟಿ ಜನ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆಂದು ಅಂದಾಜಿಸಲಾಗಿದೆ.
ಇದಕ್ಕಿಂತಲೂ ಹೆಚ್ಚಿನ ಜನ ಸೇರುವ ಸಾಧ್ಯತೆ ಇದೆ. ಹಾಗಾಗಿಯೇ ವಿಮಾನ ಮತ್ತು ರೈಲು, ಬಸ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ವಾಹನ ಸಂಚಾರ ಹೆಚ್ಚಿಸಿದೆ. ಇನ್ನು ಕೋಟಿ ಕೋಟಿ ಜನ ಬರುವ ಕಡೆ ಪೊಲೀಸ್ ಬಂದೋಬಸ್ತ್, ಆರ್ಮಿಯ ಭದ್ರತೆ ಎಲ್ಲವೂ ಇರಲೇಬೇಕು. ಹಾಗಾಗಿ ಸಾವಿರ ಸಾವಿರ ಜನ ಸೈನಿಕರು ಕುಂಭ ಮೇಳದ ರಕ್ಷಣೆಗಾಗಿ ತೊಡೆ ತಟ್ಟಿನಿಂತಿದ್ದಾರೆ.
ಇಂದಿನ ಕಾಲದಲ್ಲಿ ಬರೀ ಮನುಷ್ಯರಷ್ಟೇ ಅಲ್ಲದೇ, ಕೆಲವು ಗ್ಯಾಜೆಟ್ಸ್‌ಗಳು ರಕ್ಷಣಾ ಕಾರ್ಯ ಮಾಡುತ್ತಿದೆ. ಹಾಗಾಗಿ ಕುಂಭ ಮೇಳದಲ್ಲಿಯೂ ಅಂಥ ಗ್ಯಾಜೇಟ್‌ಗಳನ್ನು ರಕ್ಷಣಾ ಕಾರ್ಯಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ. ಕುಂಭ ಮೇಳ ಸೇರಿ ದೊಡ್ಡ ದೊಡ್ಡ ಕಾರ್ಯಕ್ರಮದಲ್ಲಿ ಮಕ್ಕಳು ಕಳೆದು ಹೋಗುವುದು ಕಾಮನ್. ಹಾಗಾಗಿ ಈ ಬಾರಿ ಅಂಥ ಘಟನೆ ನಡೆದರೆ, ಬೇಗ ಮಕ್ಕಳು ಸಿಗಬೇಕು ಎಂದು ಗ್ಯಾಜೇಟ್‌ಗಳನ್ನು ಬಳಸಲಾಗಿದೆ.
2,700ಕ್ಕೂ ಹೆಚ್ಚು ಎಐ ಕ್ಯಾಮೆರಾ ಬಳಸಲಾಗಿದೆ. ಈ ಕ್ಯಾಮೆರಾ ಕುಂಭ ಮೇಳಕ್ಕೆ ಬರುವ ಎಲ್ಲರ ಮುಖವನ್ನು ಕ್ಯಾಚ್ ಮಾಡುತ್ತದೆ. ಹೀಗಾಗಿ ಕಳೆದು ಹೋದರೆ, ಬೇಗ ಸಿಗುವಂತೆ ಮಾಡುತ್ತದೆ. ಇನ್ನು ನೀರಿನಲ್ಲಿ ಮುಳುಗಿ ಹೋದವರ ರಕ್ಷಣೆ ಮಾಡಲು ಕೂಡ, ಕೆಲವು ವಾಟರ್ ಫ್ರೂಫ್ ಕ್ಯಾಮೆರಾಗಳನ್ನು ಸಹ ಬಳಸಲಾಗುತ್ತಿದೆ. ಅಲ್ಲದೇ, ಗೂಗಲ್ ಮ್ಯಾಪ್ ಜೊತೆ ಒಡಗೂಡಿ ಮಹಾ ಕುಂಭ ಆ್ಯಪ್ ಕೂಡ ಬಿಡುಗಡೆ ಮಾಡಲಾಗಿದೆ. 2 ಸಾವಿರ ಡ್ರೋನ್ ಶೋ ಮಾಡಲಾಗಿದೆ.