Political News: ಬೆಂಗಳೂರಿನಲ್ಲಿ ಆರ್‌ಸಿಬಿ ಕಪ್ ಗೆದ್ದ ಸಂಭ್ರಮಾಚರಣೆ ವೇಳೆ ಕಾಲ್ತುಳಿತ ಸಂಭವಿಸಿ, 11 ಮಂದಿ ಮೃತರಾಗಿದ್ದು, ಇನ್ನೂ ಹಲವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ದುರಂತಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಮಾಜಿ ಸಂಸದ ಪ್ರತಾಪ್ ಸಿಂಹ, ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಆರ್‌ಸಿಬಿಯವರು ರೋಚಕವಾಗಿ ಗೆಲುವು ಸಾಧಿಸಿ, ನಮ್ಮ ಸಂಭ್ರಮಾಚರಣೆಗೆ ಕಾರಣರಾಗಿದ್ದರು. ಅಲ್ಲದೇ, ನಿನ್ನೆ ವಿಜಯೋತ್ಸವ ಆಚರಣೆಗಾಗಿ ಬೆಂಗಳೂರಿಗೆ ಬಂದಿದ್ರೆ, ಸರ್ಕಾರದ ಬೇಜವಾಬ್ದಾರಿತನದಿಂದಾಗಿ ಸಂಭ್ರಮಾಚರಣೆ ಶೋಕಾಚರಣೆಯಾಗಿ ಪರಿವರ್ತನೆಯಾಗಿದೆ.
ಸಿಎಂ ಸಿದ್ದರಾಮಯ್ಯನವರು Tweet ಮಾಡುವ ಮೂಲಕ ಓಪನ್ ಆಗಿ, ವಿಧಾನಸೌಧದ ಎದುರು ನಡೆಯುವ ಸನ್ಮಾನ ಕಾರ್ಯಕ್ರಮದಲ್ಲಿ ನೀವೆಲ್ಲರೂ ಭಾಗಿಯಾಗಿ ಅಂತಾ ಕರೆ ನೀಡಿದ್ದರು. ಹಾಗಾಗಿ ಹಲವರು ಇದಕ್ಕೆ ಬೇಕಾದ ರೀತಿಯಲ್ಲಿ ಸೂಕ್ತವಾದ ಅರೆಂಜ್‌ಮೆಂಟ್ ಮಾಡಿದ್ದಾರೆ ಅಂತಾ ನಾವು ಅಂದುಕ“ಂಡಿದ್ವಿ. ಅಲ್ಲದೇ ಪೋಲೀಸ್ ಇಲಾಖೆ ಈ ಕಾರ್ಯಕ್ರಮ ಮಾಡಲು ನಿರಾಕರಿಸಿದ್ದರೂ ಕೂಡ, ನಿನ್ನೆಯೇ ಕಾರ್ಯಕ್ರಮ ಮಾಡಬೇಕು ಎಂದು ಪೋಲೀಸರ ಮೇಲೆ ಒತ್ತಡ ಹೇರಿದೆ ಎಂದು ಪ್ರತಾಪ್ ಸಿಂಹ ಆರೋಪಿಸಿದ್ದಾರೆ.
ಈ ದುರಂತದ ಬಳಿಕ ಸಿಎಂ ಸಿದ್ದರಾಮಯ್ಯ ,ಕಾಂಗ್ರೆಸ್ ನಾಯಕರು ನೀಡಿದಂಥ ಹೇಳಿಕೆಯನ್ನು ನೋಡಿದರೆ, ಮಾನ್ಯ ಸಿದ್ದರಾಮಯ್ಯ ಸಾಹೇಬ್ರೇ ನಿಮ್ಮನ್ನು ಓರ್ವ ಒರಟು ವ್ಯಕ್ತಿ ಅಷ್ಟೇ ಅಂತ ಅಂದುಕ“ಂಡಿದ್ದೆ ನಾನು. ಆದರೆ ನಿಮ್ಮ ಹೇಳಿಕೆ, ನಿಮ್ಮ ಪಕ್ಷದ ನಿಲುವು, ನಿಮ್ಮ ಸಮರ್ಥನೆ ನೋಡಿದರೆ, ನೀವೋಬ್ಬ ಒರಟು ವ್ಯಕ್ತಿ ಮಾತ್ರವಲ್ಲ, ಸಂವೇದನೆಯೇ ಇಲ್ಲದ ನಿರ್ಭಾವುಕ ವ್ಯಕ್ತಿ ಅಂತಾ ಅನ್ನಿಸಿದೆ ಎಂದು ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ.
ಅಲ್ಲದೇ ಮ್ಯಾಚ್ ಮುಗಿದ ಮರುದಿನವೇ ನೀವು ಸನ್ಮಾನ ಇರಿಸಿಕ“ಂಡು, ಸಾಮಾಜಿಕ ಜಾಲತಾಣದಲ್ಲಿ ನೀವೂ ಕಾರ್ಯಕ್ರಮದಲ್ಲಿ ಭಾಗವಹಿಸಿ ಎಂದು ಕರೆ ನೀಡಿ, ಘಟನೆ ಬಳಿಕ, ಹೀಗೆ ಜನಸಾಗರ ಬಂದಾಗ ನಾವು ಹೇಗೆ ನಿಭಾಯಿಸಬೇಕು ಅಂತಾ ಹೇಳ್ತೀರಲ್ಲ, ನಿರ್ಭಾವುಕ, ನಿರ್ಲಜ್ಜವಾಗಿ ಮಾತನಾಡುತ್ತಿದ್ದೀರಲ್ಲ. ವಿಧಾನಸೌಧದ ಮುಂದೆ ನಿಮ್ಮ ಮಕ್ಕಳು, ಮಮ್ಮಕ್ಕಳಿಗೆ Stage ಹಾಕಿಸಿ, ಸೆಲ್ಫಿ, ಆಟೋಗ್ರಾಫ್. ಬೇರೆಯವರ ಮಕ್ಕಳಿಗೆ ಸಾವಿನ ಬಳುವಳಿ ಅಂತಾ ಪ್ರತಾಪ್ ಸಿಂಹ ಸಿಎಂ ವಿರುದ್ಧ ಕಿಡಿಕಾರಿದ್ದಾರೆ.