Friday, July 4, 2025

Latest Posts

ಹಿರಿಯ ನಟ ಶಿವರಾಂ ಸ್ಥಿತಿ ಗಂಭೀರ..!

- Advertisement -

ಬೆಂಗಳೂರು: ಹಿರಿಯ ನಟ ಶಿವರಾಂ ಮನೆಯಲ್ಲಿ ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೆಂಗಳೂರಿನ ಹೊಸಕೆರೆಹಳ್ಳಿ ಮನೆಯಲ್ಲಿ 3 ದಿನಗಳ ಹಿಂದೆ  ಅಯ್ಯಪ್ಪ ಸ್ವಾಮಿಗೆ ಪೂಜೆ ಮಾಡುವಾಗ ಆಯತಪ್ಪಿ ಕೆಳಗೆ ಬಿದ್ದಿದ್ದು  ಮೆದುಳಿಗೆ ಪೆಟ್ಟು ಬಿದ್ದಿದೆ. ಇದರಿಂದ ಸೀತಾ ಸರ್ಕಲ್ ಬಳಿ ಇರುವ ಪ್ರಶಾಂತ್ ಆಸ್ಪತ್ರೆಗೆ ದಾಖಲಿಸಿದ್ದು ಮೂರು ದಿನದಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ. ವೈದ್ಯರು ಸರ್ಜರಿ ಮಾಡಬೇಕೆಂದು ಹೇಳಿದ್ದಾರೆ. ತಲೆಯನ್ನು ಸ್ಕ್ಯಾನಿಂಗ್ ಮಾಡಿದಾಗ ಮೆದುಳಿನಲ್ಲಿ ರಕ್ತಸ್ರಾವ ಆಗಿರುವುದು ಕಂಡುಬಂದಿದ್ದು ತಂದೆಗೆ ವಯಸ್ಸಾದ ಕಾರಣ  ಸರ್ಜರಿ ಮಾಡಲು ಆಗದ ಇರುವ ಕಾರಣ ಐಸಿಯು ನಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದ್ದು ಅವರ ಸ್ಥಿತಿ ಈಗ ಗಂಭೀರವಾಗಿದೆ ಎಂದು ಅವರ ಹಿರಿಯ ಮಗ ರವಿಶಂಕರ್ ಮಾಧ್ಯಮಗಳಿಗೆ ಮಾಹಿತಿಯನ್ನು ನೀಡಿದ್ದಾರೆ.

- Advertisement -

Latest Posts

Don't Miss