Friday, November 22, 2024

Latest Posts

Senior actress ಭಾರ್ಗವಿ ನಾರಾಯಣ್ ವಿಧಿವಶ..!

- Advertisement -

ಕನ್ನಡ ಚಿತ್ರರಂಗದ ಹಿರಿಯ ನಟಿ ಭಾರ್ಗವಿ ನಾರಾಯಣ್ (Bhargavi Narayan) ಇಂದು ಬೆಂಗಳೂರಿನಲ್ಲಿ 7:30ಕ್ಕೆ ಸಾವನ್ನಪ್ಪಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ವಿಧಿವಶರಾಗಿದ್ದಾರೆ. ಭಾರ್ಗವಿ ನಾರಾಯಣ್ ರಂಗಭೂಮಿ ಕಲಾವಿದೆ (theater artist) ಯಾಗಿದ್ದು, ಹಲವಾರು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಅವರು ನಟಿಸಿರುವ ಚಿತ್ರಗಳೆಂದರೆ, ಎರಡು ಕನಸು, ಅನುಪಲ್ಲವಿ, ಬಾನಲ್ಲಿ ಮಧುಚಂದ್ರಕ್ಕೆ, ಪ್ರೊಫೆಸರ್ ಹುಚ್ಚೂರಾಯ, ಪಲ್ಲವಿ, ಮುಯ್ಯಿ, ಅಂತಿಮ ಘಟ್ಟ, ಜಂಬೂಸವಾರಿ, ಕಾದ ಬೆಳದಿಂಗಳು, ಇದೊಳ್ಳೆ ರಾಮಾಯಣ, ಪುನೀತ್ ರಾಜಕುಮಾರ್ ಅವರ ರಾಜಕುಮಾರ ಸಿನಿಮಾದಲ್ಲಿಯೂ ನಟಿಸಿದ್ದಾರೆ. ದೂರದರ್ಶನದ ಮಂಥನ ಮತ್ತು ಮುಕ್ತ ಸರಣಿಗಳಲ್ಲಿ ಸೇರಿದಂತೆ ಕನ್ನಡದ ಅನೇಕ ನಾಟಕಗಳಲ್ಲಿ ನಡೆಸಿದ್ದಾರೆ. ಮಹಿಳಾ ಸಂಘದ ಮಕ್ಕಳಿಗಾಗಿ ಕರ್ನಾಟಕ ನಾಟಕಗಳನ್ನು ಬರೆದಿದ್ದಾರೆ. ಕನ್ನಡ ನಾಟಕ ಅಕಾಡೆಮಿಯ ಸದಸ್ಯರಾಗಿ ಕೆಲಸ ಮಾಡಿದ್ದಾರೆ. “ನಾ ಕಂಡ ನಮ್ಮವರ” ಎಂಬ ಪುಸ್ತಕವನ್ನು ಸಹ ಬರೆದಿದ್ದಾರೆ. ಭಾರ್ಗವಿಯವರು ಫೆಬ್ರವರಿ 1938 ರಂದು ಜನಿಸಿದರು. ಕನ್ನಡ ಚಲನಚಿತ್ರದ ನಟ ಮತ್ತು ಸೌಂದರ್ಯವರ್ಧಕ ಕಲಾವಿದ ಬೆಳವಾಡಿ ನಂಜುಂಡಯ್ಯ ನಾರಾಯಣ ಅವರನ್ನು ಮದುವೆಯಾದರು. 2002ರಲ್ಲಿ ನಾನು ಭಾರ್ಗವಿ ಎಂಬ ಆತ್ಮಚರಿತ್ರೆಯ ಸಹ ಬಿಡುಗಡೆಗೊಂಡಿದೆ. ಇವರಿಗೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು, ಅತ್ಯುತ್ತಮ ಪೋಷಕ ನಟಿ, ಕರ್ನಾಟಕ ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿ, ಮಂಗಳೂರು ಪ್ರತಿಷ್ಠಿತ ಸಂದೇಶ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ, ಕರ್ನಾಟಕ ರಾಜ್ಯ ನಾಟಕ ಸ್ಪರ್ಧೆ ಅತ್ಯುತ್ತಮ ನಟಿ ಪ್ರಶಸ್ತಿ ಎರಡು ಬಾರಿ, ಕರ್ನಾಟಕ ರಾಜ್ಯ ಮಕ್ಕಳ ನಾಟಕ ಸ್ಪರ್ಧೆ ರಾಜ್ಯಮಟ್ಟದ ಪ್ರಶಸ್ತಿ, ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಇನ್ನೂ ಅನೇಕ ಪ್ರಶಸ್ತಿಗಳನ್ನು ಇವರು ಪಡೆದಿದ್ದಾರೆ.

- Advertisement -

Latest Posts

Don't Miss