ಬೆಂಗಳೂರು: ಜ್ಞಾನಪೀಠ ಪುರಸ್ಕೃತ ಸಾಹಿತಿ, ನಟ, ನಿರ್ದೇಶಕ ಗಿರೀಶ್ ಕಾರ್ನಾಡ್ ವಿಧಿವಶರಾಗಿದ್ದು, ಸಾಹಿತ್ಯ ಲೋಕಕ ಮತ್ತೊಂದು ಕೊಂಡಿ ಕಳಚಿದೆ.
ಬಹುಅಂಗಾಂಗ ವೈಫಲ್ಯದಿಂದ ತೀವ್ರ ಅನಾರೋಗ್ಯದಿಂದ ಜ್ಞಾನ ಪೀಠಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್(81) ನಿಧನರಾಗಿದ್ದಾರೆ. ಬೆಂಗಳೂರಿನ ತಮ್ಮ ಲ್ಯಾವೆಲ್ಲೇ ರೋಡ್ ನಿವಾಸದಲ್ಲಿ ಇಂದು ಬೆಳಗ್ಗೆ 8.50ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ.
ನಟನೆ, ರಂಗಭೂಮಿ, ನಿರ್ದೇಶನದಲ್ಲಿ ಅಪಾರ ಆಸಕ್ತಿ ಹೊಂದಿದ್ದ ಗಿರೀಶ್ ಕಾರ್ನಾಡ್ ಸಾಹಿತ್ಯ ಲೋಕಕ್ಕೆ ತಮ್ಮ ಕೊಡುಗೆಗಾಗಿ ಪ್ರದ್ಮಶ್ರೀ, ಪದ್ಮಭೂಷಣ, ಜ್ಞಾನಪೀಠ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಗಳಿಸಿದ್ದರು. ಅಲ್ಲದೆ ಕನ್ನಡ, ಹಿಂದಿ, ತೆಲುಗು, ಮಳಯಾಳಂ ಚಿತ್ರಗಳಲ್ಲೂ ನಟಿಸಿದ್ದರು. ನಾಗಮಂಡಲ, ಯಯಾತಿ, ತುಘಲಕ್, ಹಯವದನ, ಅಂಜುಮಲ್ಲಿಗೆ ಇವರು ರಚಿಸಿದ ಅನೇಕ ನಾಟಗಳಲ್ಲಿ ಸುಪ್ರಸಿದ್ಧವಾಗಿವೆ.
ಪ್ರಗತಿಶೀಲ, ಸಮತಾವಾದ, ಜಾತ್ಯತೀತತೆಯನ್ನು ಪ್ರತಿಪಾದಿಸುತ್ತಿದ್ದ ಕಾರ್ನಾಡ್ ತಮ್ಮ ನೇರ ನುಡಿಯಿಂದಾಗಿ ಸಾಕಷ್ಟು ಸುದ್ದಿಗೆ ಗ್ರಾಸವಾಗುತ್ತಿದ್ದರು.
ಇವತ್ತು ರಾಜ್ಯದ 8 ಹೈವೇ ಗಳು ಬಂದ್…! ಮಿಸ್ ಮಾಡದೇ ಈ ವಿಡಿಯೋ ನೋಡಿ