ಬೆಂಗಳೂರು:ಬಿಗ್ ಬಾಸ್ ಸೀಸನ್-4 ರಲ್ಲಿ ಸ್ಪರ್ಧಿಸಿ ಕನ್ನಡಿಗರ ಮನಗೆದ್ದಿದ್ದ ಕಿರಿಕ್ ಕೀರ್ತಿ ಇದೀಗ ‘ಸಿಲಿಂಡರ್ ಸತೀಶ’ನಾಗಿ ತೆರೆ ಮೇಲೆ ಸಿನಿರಸಿಕರನ್ನು ರಂಜಿಸಲು ಬರ್ತಿದ್ದಾರೆ.
ಈಗಾಗಲೇ ದೇವ್ರಂಥಾ ಮನುಷ್ಯ, ಎರಡನೇ ಸಲ ಸಿನಿಮಾದಲ್ಲಿ ನಟಿಸಿರೋ ಕಿರಿಕ್ ಕೀರ್ತಿ ಇದೀಗ ‘ಸಿಲಿಂಡರ್ ಸತೀಶ, ಕೇರ್ ಆಫ್ ಶಾಲೂ’ ಎಂಬ ಸಿನಿಮಾದಲ್ಲಿ ನಟಿಸಿದ್ದಾರೆ. ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ಸಖತ್ ಎಂಟರ್ಟೈನಿಂಗ್ ಆಗಿದೆ. ಚಿತ್ರದಲ್ಲಿ ಕಿರಿಕ್ ಕೀರ್ತಿ, ಪಾಪ ಪಾಂಡು ಖ್ಯಾತಿಯ ಶಾಲಿನಿ ಮತ್ತು ಸಂಗೀತಾ ನಟಿಸಿದ್ದಾರೆ. ಮಧುಸೂದನ್ ಶ್ರೀಕಾರ್ ನಿರ್ದೇಶನದ ಈ ಚಿತ್ರದಲ್ಲಿ ಕೀರ್ತಿ, ಮನೆಮನೆಗೂ ಸಿಲಿಂಡರ್ ಡೆಲಿವರಿ ಮಾಡೋ ಸಿಲಿಂಡರ್ ಸತೀಶನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಇನ್ನು ಕಿರಿಕ್ ಕೀರ್ತಿ ನಟನೆಯ ಟೈರು ಮತ್ತು ತಿರುಮಲ ವೈನ್ ಸ್ಟೋರ್ ಚಿತ್ರಗಳು ಕೂಡ ಬಿಡುಗಡೆಯ ಹೊಸ್ತಿನಲ್ಲಿವೆ.
ರಾಬರ್ಟ್ ಗೆ ನಾಯಕಿ ಯಾರು ಗೊತ್ತಾ…??ಮಿಸ್ ಮಾಡದೇ ಈ ವಿಡಿಯೋ ನೋಡಿ