Tuesday, September 16, 2025

Latest Posts

ಪ್ರತ್ಯೇಕ ಘಟನೆ: ಅಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ: ತರಕಾರಿ ವಾಹನ ಪಲ್ಟಿ, ರಸ್ತೆ ತುಂಬ ವೆಜಿಟೇಬಲ್ಸ್

- Advertisement -

Bidar News: ಬೀದರ್: ಬೀದರ್‌ನಲ್ಲಿ ಲೋಕಾಯುಕ್ತ ಅಧಿಕಾರಿಗಳು  ಬೆಳ್ಳಂ ಬೆಳಿಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಚಳಿ ಬಿಡಿಸಿದ್ದಾರೆ. ಬಸವಕಲ್ಯಾಣದ ಸಣ್ಣ ನೀರಾವರಿ ಇಲಾಖೆ  ಸಹಾಯ ಅಭಿಯಂತರು ಆಗಿರುವ ರವೀಂದ್ರ ಹಣಮಂತಪ್ಪಾ ಮೇತ್ರೆ ಅವರಿಗೆ ಸಂಬಂಧಿಸಿದ ಮೂರು ಕಡೆ ಅಧಿಕಾರಿಗಳು ರೇಡ್ ಮಾಡಿದ್ದಾರೆ.

ಸ್ವ ಗ್ರಾಮ ಭಾಲ್ಕಿ ತಾಲುಕಿನ ಡೋಣಗಾಪು ಗ್ರಾಮದ ಮನೆಯ ಮೇಲೆ ಹಾಗು ಸಣ್ಣ ನೀರಾವರಿ ಇಲಾಖೆ ಕಚೇರಿ ಬಸವಕಲ್ಯಾಣ ಬೀದರ ನಗರದ ಚಿಕ್ಕ ಪೇಟ್‌ನಲ್ಲಿರುವ ಮನೆಯ ಮೇಲೆ ದಾಳಿ ನಡೆಸಿದ್ದು, ಮಹತ್ತರ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಆದಾಯಕ್ಕಿಂತ ಹೆಚ್ಚಿನ ಗಳಿಕೆ ಹಿನ್ನೆಲೆಯಲ್ಲಿ ಪೊಲೀಸರು ರೇಡ್ ಮಾಡಿದ್ದಾರೆ.

Dharwad News: ಧಾರವಾಡ: ತರಕಾರಿ ಸಾಗಿಸುತ್ತಿದ್ದ ವಾಹನ ಪಲ್ಟಿಯಾಗಿದ್ದು, ರಸ್ತೆ ತುಂಬಾ ತರಕಾರಿ ಚೆಲ್ಲಾಪಿಲ್ಲಿಯಾದ ಘಟನೆ ಧಾರವಾಡದ ನವನಗರ ಆರ್‌.ಟಿ.ಓ ಆಫೀಸ್ ಬಳಿ ನಡೆದಿದೆ.

ರಾತ್ರಿ 12 ಗಂಟೆಗೆ ಈ ಘಟನೆ ನಡೆದಿದ್ದು, ಚಾಲಕನ ನಿಯಂತ್ರಣ ತಪ್ಪಿ ಆರ್ ಟಿ ಓ ಆಫೀಸ್ ಬಳಿ ಮಹೀಂದ್ರ ಪಿಕಪ್ ವಾಹನ ಪಲ್ಟಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ತಕ್ಷಣ ಸ್ಥಳಕ್ಕೆ ಸಂಚಾರಿ ಪೊಲೀಸರು ಭೇಟಿ ನೀಡಿದ್ದು, ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

- Advertisement -

Latest Posts

Don't Miss