Saturday, April 19, 2025

Latest Posts

ಹೈದರಾಬಾದ್ ನ ಸಿನಿಫೆಡರೇಶನ್ ವಿರುದ್ದ ಗಂಭೀರ ಆರೋಪ; ತ್ರಿಶೂಲಂ ಶೂಟಿಂಗ್ ಗೆ ಅಡ್ಡಿ

- Advertisement -

www.karnatakatv.net: ರವಿಚಂದ್ರನ್ ಮತ್ತು ಉಪೇಂದ್ರ ನಟಿಸುತ್ತಿರುವ ‘ತ್ರಿಶೂಲಂ’ ಚಿತ್ರೀಕರಣಕ್ಕೆ ಇಂದು ಅಡ್ಡಿಯಾಗಿದ್ದು, ಈ ಚಿತ್ರಕ್ಕೆ ಪ್ರಕಾಶ್ ರಾವ್ ಆಕ್ಷನ್ ಹೇಳುತ್ತಿರುವ ಈ ಚಿತ್ರ ಹೈದರಾಬಾದ್ ನಲ್ಲಿ ಶೂಟಿಂಗ್ ಗೆ ತೆರಳಿದ್ದರು, ಆದರೆ ಈಗ ಚಿತ್ರದ ನಿರ್ಮಾಪಕ ಕನಕಪುರ ಶ್ರೀನಿವಾಸ್ ಹೈದರಾಬಾದ್ ನ ಸಿನಿಫೆಡರೇಶನ್ ವಿರುದ್ದ ಗಂಭೀರ ಆರೋಪ ಮಾಡಿದ್ದಾರೆ.

ಹಣಕ್ಕಾಗಿ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿ, ಇಂದು ಬೆಳಗ್ಗೆ 7 ಘಂಟೆಗೆ ಶೂಟಿಂಗ್ ಆರಂಭ ಆಗಬೇಕಿತ್ತು. ಆದರೆ ಇನ್ನೂ ಕೂಡ ಕ್ಯಾಮರಾ ಯೂನಿಟ್ ಸೇರಿದಂತೆ ಕೆಲವು ಕೆಲಸಗಾರರು ಆಗಮಿಸಿಲ್ಲ ಎಂದು ಶ್ರೀನಿವಾಸ್ ಆರೋಪಿಸಿದ್ದಾರೆ. ಬಿಲ್ ಕೊಡದೇ ಹಣ ಕೇಳುತ್ತಿದ್ದಾರೆ. 6 ಲಕ್ಷ ಹಣಕಟ್ಟಬೇಕಿತ್ತು. 1 ಲಕ್ಷ ಹಣ ಕಟ್ಟಿದ್ದೇನೆ. ಅವರು 7 ಲಕ್ಷ ಪಾವತಿಸಿದರೆ ಮಾತ್ರ ಯುನಿಟ್ ಕಳುಹಿಸುವುದಾಗಿ ಹೇಳುತ್ತಿದ್ದಾರೆ. ಇನ್ನುಳಿದ ಹಣ ಪಾವತಿಗೆ ರಶೀತಿ ಬೇಕು ಎಂದು ಶ್ರೀನಿವಾಸ್ ಹೇಳಿದ್ದಾರೆ. ಈ ಕಾರಣಕ್ಕೆ ಶೂಟಿಂಗ್ ಗೆ ತೊಂದರೆಯಾಗುತ್ತಿದೆ. ಸದ್ಯ ಒಂದು ದಿನ ಶೂಟಿಂಗ್ ನಿಂತ್ರೆ 20 ಲಕ್ಷ ಲಾಸ್ ಆಗುತ್ತೆ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.

ಚಿತ್ರೀಕಣಕ್ಕೆ ತೊಂದರೆಯಾಗುತ್ತಿರುವ ಕುರಿತಂತೆ ಚಿತ್ರತಂಡ ಹೈದರಾಬಾದ್ ಸಿನಿಫೆಡರೇಶನ್ ವಿರುದ್ಧ ಗಂಭೀರ ಆರೋಪ ಮಾಡಿದೆ. ಸ್ಯಾಂಡಲ್ ವುಡ್ ನ ಖ್ಯಾತ ಕಲಾವಿದರು ಈ ಚಿತ್ರದಲ್ಲಿ ತೆರೆ ಹಂಚಿಕೊಳ್ಳುತ್ತಿದ್ದಾರೆ. ರವಿಚಂದ್ರನ್ ಹಾಗೂ ಉಪೇಂದ್ರ ಕಾಂಬಿನೇಷನ್ ತೆರೆ ಮೇಲೆ ಕಾಣಿಸಿಕೊಳ್ಳಲಿದೆ. ಸಾನ್ವಿ ಶ್ರೀವಾಸ್ತವ್, ಸಾಧು ಕೋಕಿಲ, ನಿಮಿಕಾ ರತ್ನಾಕರ್, ರಂಗಾಯಣ ರಘು, ಅಚ್ಯುತ್ ಕುಮಾರ್, ಸುಧಾ ಬೆಳವಾಡಿ ಸೇರಿದಂತೆ ಅನೇಕ ಕಲಾವಿದರು ಚಿತ್ರದಲ್ಲಿ ಬಣ್ಣ ಹಚ್ಚುತ್ತಿದ್ದಾರೆ.

- Advertisement -

Latest Posts

Don't Miss