Friday, May 9, 2025

Latest Posts

ಅಕ್ರಮ ನುಸುಳಲು ಯತ್ನಿಸಿದ 7 ಉಗ್ರರು ಮಟ್ಯಾಶ್‌..! : ರಾಕ್ಷಸರ ಬೇಟೆಯಾಡಿದ ಬಿಎಸ್‌ಎಫ್‌ ಯೋಧರು..

- Advertisement -

ಆಪರೇಷನ್‌ ಸಿಂಧೂರ್‌ ವಿಶೇಷ :

ನವದೆಹಲಿ : ಆಪರೇಷನ್‌ ಸಿಂಧೂರ್‌ಗೆ ಪೂರ್ತಿ ಕಂಗಾಲಾಗಿರುವ ಪಾಕಿಸ್ತಾನ ಭಾರತದ ಮೇಲೆ ಹತಾಶೆಯಿಂದ ವಿಫಲ ದಾಳಿಗೆ ಯತ್ನಿಸುತ್ತಿದೆ. ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯಲ್ಲಿನ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನದ ಭಯೋತ್ಪಾದಕರ ಒಳನುಸುಳುವಿಕೆ ಪ್ರಯತ್ನವನ್ನು ಬಿಎಸ್‌ಎಫ್ ವಿಫಲಗೊಳಿಸಿದೆ. ಅಂತಾರಾಷ್ಟ್ರೀಯ ಗಡಿಯನ್ನು ಅಕ್ರಮವಾಗಿ ಪ್ರವೇಶಿಸಲು ಯತ್ನಿಸುತ್ತಿದ್ದಾಗ ಬಿಎಸ್‌ಎಫ್‌ ಯೋಧರು ರಣಹೇಡಿ ಉಗ್ರರಿಗೆ ಗುಂಡಿಕ್ಕಿ ಕೊಂದಿದ್ದಾರೆ ಈ ಮಾಹಿತಿಯನ್ನು ಬಿಎಸ್‌ಎಫ್‌ ತಿಳಿಸಿದೆ. ಜೈಶ್-ಎ-ಮೊಹಮ್ಮದ್‌ ಸಂಘಟನೆಯ 7 ಉಗ್ರರನ್ನು ಕೊಲ್ಲಲಾಗಿದೆ ಎಂದು ಬಿಎಸ್‌ಎಫ್‌ ತಿಳಿಸಿದೆ.

ಯುದ್ಧ ವಿಮಾನ, ಮಿಸೈಲ್‌ ಢಮಾರ್..

ಇನ್ನೂ ಇದಲ್ಲದೆ ಜಮ್ಮು, ರಾಜಸ್ಥಾನ ಮತ್ತು ಪಂಜಾಬ್‌ನ ಅಮೃತಸರ ಸೇರಿ ಭಾರತದ 15 ನಗರಗಳನ್ನು ಗುರಿಯಾಗಿಸಿ ಪಾಕಿಸ್ತಾನ ಮಿಸೈಲ್‌, ಡ್ರೋನ್‌ ದಾಳಿ ನಡೆಸಿದೆ. ಇದಕ್ಕೆ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡಿದೆ. ಪಾಕ್‌ನ ಎಲ್ಲಾ ಮಿಸೈಲ್‌ಗಳನ್ನು ಹೊಡೆದುರುಳಿಸಿದೆ. ಪ್ರಮುಖವಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿನ ನಾಗರಿಕರನ್ನು ಗುರಿಯಾಗಿಸಿಕೊಂಡು ಪಾಪಿಸ್ತಾನ ದಾಳಿ ನಡೆಸುತ್ತಿದೆ. ಇದರಿಂದ 10ಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದೆ. ಹೀಗಾಗಿ ಎಲ್ಲರೂ ಸುರಕ್ಷಿತವಾದ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿದೆ. ಅಲ್ಲದೆ ಬಾರಾಮುಲ್ಲಾದಲ್ಲೂ ಹಲವು ಕಟ್ಟಡಗಳಿಗೆ ಹಾನಿಯಾಗಿದೆ. ಅಲ್ಲದೆ ಭಾರತಕ್ಕೆ ಪಾಕಿಸ್ತಾನದಿಂದ ಬರುತ್ತಿದ್ದ ಯುದ್ಧ ವಿಮಾನಗಳು ಹಾಗೂ ಮಿಸೈಲ್‌ಗಳನ್ನು ಭಾರತೀಯ ಸೇನೆಯು ಸಮರ್ಥವಾಗಿ ಹೊಡೆದುರುಳಿಸಿದೆ.

ಪಾಕ್‌ನ ಜೆಟ್‌ ಧ್ವಂಸ..!

ಅಲ್ಲದೆ ಪಠಾಣ್ ಕೋಟ್ ನಲ್ಲಿ ಪಾಕಿಸ್ತಾನದ JF-17 ಜೆಟ್ ದ್ವಂಸ ಜೆ ಎಫ್ ಸೆವೆನ್ ಧ್ವಂಸಗೊಂಡಿದೆ. ಸ್ವದೇಶಿ ನಿರ್ಮಿತ ಭಾರತದ ಆಕಾಶ್ ಮಿಸೈಲ್ ಪಾಕಿಸ್ತಾನದ ಜೆಟ್ ವಿಮಾನವನ್ನು ಹೊಡೆದುರುಳಿಸಿದೆ. ಇಷ್ಟಾದರೂ ಕೂಡ ಪಾಕಿಸ್ತಾನ ನಿರಂತರವಾಗಿ ಭಾರತದ ಮೇಲೆ ದಾಳಿ ಮಾಡುತ್ತಿದೆ.ಅದಕ್ಕೆ ಭಾರತ ಕೂಡ ತಕ್ಕ ಪ್ರತ್ಯುತ್ತರ ನೀಡುತ್ತಿದೆ. ಕೈಯಲ್ಲಾಗದವರು ಮೈ ಪರಚಿಕೊಂಡದೇ ಸೇನೆ ವಿರುದ್ಧ ಸೆಣಸಲಾಗದ ಪಾಕ್‌ ಶೆಲ್ ದಾಳಿ ನಡೆಸಿ ಅಮಾಯಕರನ್ನ ಟಾರ್ಗೆಟ್‌ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಗಡಿ ಜಿಲ್ಲೆಗಳಾದ ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ರಾಜಸ್ಥಾನ, ಹರಿಯಾಣ ಹಾಗೂ ಹಿಮಾಚಲ ಪ್ರದೇಶದಲ್ಲಿ ತುರ್ತು ಪರಿಸ್ಥಿತಿ ಹೇರಲಾಗಿದೆ. ಜಮ್ಮು ಕಾಶ್ಮೀರದಲ್ಲಿ ಬೆಳಗ್ಗಿನವರೆಗೂ ಬ್ಲಾಕ್‌ಔಟ್ ಘೋಷಿಸಲಾಗಿತ್ತು.

ರಾತ್ರಿ ಇಡೀ ಕರೆಂಟ್‌ ಕಟ್..

ಭಾರತದ ಆಪರೇಷನ್ ಸಿಂದೂರ ಮತ್ತು ವಾಯುದಾಳಿಯ ನಂತರ ಹೆಚ್ಚಿದ ಮಿಲಿಟರಿ ಉದ್ವಿಗ್ನತೆಯ ನಡುವೆ , ಪಂಜಾಬ್, ಚಂಡೀಗಢ ಮತ್ತು ಪಂಚಕುಲ, ಅಂಬಾಲ ಮತ್ತು ಸಿರ್ಸಾ ಸೇರಿದಂತೆ ಹರಿಯಾಣದ ಕೆಲವು ಭಾಗಗಳಲ್ಲಿ ಗುರುವಾರ ರಾತ್ರಿ ವ್ಯಾಪಕ ವಿದ್ಯುತ್ ಕಡಿತಗೊಳಿಸಲಾಯಿತು. ಸೈರನ್‌ಗಳು ಮೊಳಗುತ್ತಿದ್ದಂತೆ ಪೊಲೀಸರು ನಿರಂತರವಾಗಿ ಸಾರ್ವಜನಿಕ ಪ್ರಕಟಣೆಗಳನ್ನು ಹೇಳುತ್ತಿದ್ದು, ನಿವಾಸಿಗಳಿಗೆ ದೀಪಗಳನ್ನು ಆರಿಸಿ ಮನೆಯೊಳಗೆ ಇರುವಂತೆ ಸೂಚಿಸಲಾಗುತ್ತಿದೆ. ಅಮೃತಸರ, ಫಿರೋಜ್‌ಪುರ, ತರಣ್ ತರಣ್, ಗುರುದಾಸ್ಪುರ್, ಜಲಂಧರ್, ಕಪುರ್ತಲಾ, ಹೋಶಿಯಾರ್‌ಪುರ್, ಮೊಹಾಲಿ ಮತ್ತು ಫರೀದ್‌ಕೋಟ್ ಜಿಲ್ಲೆಗಳಲ್ಲಿ ಬ್ಲಾಕ್‌ಔಟ್ ಆದೇಶಗಳನ್ನು ನೀಡಲಾಗಿದೆ.

ಪಠಾಣ್‌ಕೋಟ್‌ನಲ್ಲಿ, ವಾಯುದಾಳಿಯ ಎಚ್ಚರಿಕೆಗಳನ್ನು ನೀಡಿದ ಸಮಯಕ್ಕೆ ಸರಿಯಾಗಿ ರಾತ್ರಿ 8:30 ಕ್ಕೆ ವಿದ್ಯುತ್ ಕಡಿತ ಆರಂಭವಾಯಿತು. ಗುರುದಾಸ್‌ಪುರದಲ್ಲಿ ರಾತ್ರಿ 9 ಗಂಟೆಗೆಯಿಂದ ಅನಿರ್ದಿಷ್ಟಾವಧಿಗೆ ವಿಸ್ತರಿಸಲಾಯಿತು. ಆಸ್ಪತ್ರೆಗಳು ಮತ್ತು ಜೈಲುಗಳಲ್ಲಿ ಪ್ರಮುಖ ಸೌಲಭ್ಯಗಳನ್ನು ವಿದ್ಯುತ್ ಕಡಿತದಿಂದ ವಿನಾಯಿತಿ ನೀಡಲಾಯಿತು, ಆದರೂ ಕಿಟಕಿಗಳನ್ನು ಮುಚ್ಚುವಂತೆ ಸೂಚಿಸಲಾಯ್ತು.

- Advertisement -

Latest Posts

Don't Miss