Dharwad Crime news: ಧಾರವಾಡ: ಮೊನ್ನೆಯಷ್ಟೇ ಧಾರವಾಡದ ಹೊರವಲಯದ ಹಳಿಯಾಳ ರಸ್ತೆಯಲ್ಲಿ ಮಾರಕಸ್ತ್ರಗಳಿಂದ ರಜಾಕ್ ಕವಲಗೇರೆ ಎಂಬುವರನ್ನು ಕೊಚ್ಚಿ ಕೊಲೆ ಮಾಡಿದ ನಾಲ್ವರು ಆರೋಪಿಗಳನ್ನು ಧಾರವಾಡದ ಶಹರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ನಾಲ್ವರು ಅಣ್ಣ,ತಮ್ಮಂದಿರೇ ಸೇರಿಕೊಂಡು ರಜಾಕ್ ನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಈ ಹತ್ಯೆಗೆ ಆಸ್ತಿ ವಿಚಾರವೇ ಕಾರಣ ಎಂದು ಗೊತ್ತಾಗಿದೆ.
ಕೆಇಬಿ ನಲ್ಲಿ ಬಿಲ್ ಕಲೆಕ್ಟರ್ ಆಗಿದ್ದ ಬಾಡ ಗ್ರಾಮದ ರಜಾಕ ಕವಲಗೇರೆ ಮೊನ್ನೆ ತಮ್ಮೂರಿನತ್ತ ಹೋಗುತ್ತಿದ್ದ ಸಂದರ್ಭದಲ್ಲಿ ದಾವಲ್ ಮಲಿಕ್ ಶರೀಫ್ ಸಾಬ್ ಕವಲಗೇರೆ, ದಾದಾ ಕಲಂದರ್ ಶರೀಫ್ ಸಾಬ್ ಕವಲ್ ಗೇರೆ, ಮೆಹಬೂಬ್ ಸಾಬ್ ಶರೀಫ್ ಸಾಬ್ ಕವಲಗೇರೆ ಹಾಗೂ ಬುಡ್ಡೆ ಸಾಬ್ ಶರೀಫ್ ಸಾಬ್ ಕವಲಗೇರೆ ಎಂಬ ನಾಲ್ಕು ಜನ ಸಹೋದರರೇ ಸೇರಿಕೊಂಡು ಅಡ್ಡ ಗಟ್ಟಿ ರಜಾಕನನ್ನು ಬರ್ಬರವಾಗಿ ಹತ್ಯೆ ಮಾಡಿದ್ದರು. ಇದೀಗ ನಾಲ್ಕು ಜನರನ್ನು ಶಹರ ಠಾಣೆ ಪೊಲೀಸರು ಬಂಧಿಸಿದ್ದಾರೆ.
Prajwal deveraj; ಮತ್ತೊಂದು ಸವಾಲಿನ ಪಾತ್ರಕ್ಕೆ ಡೈನಾಮಿಕ್ ಪ್ರಿನ್ಸ್ ಸಿದ್ದ..!
Siddaramaiah : ಏನಿದು ದಸರಾ ರಜೆ ವಿವಾದ? ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಶಿಕ್ಷಕರು ಬರೆದ ಪತ್ರದಲ್ಲಿ ಏನಿದೆ?