ಹುಬ್ಬಳ್ಳಿಯಲ್ಲಿ ಆಪರೇಶನ್ ಹಸ್ತಕ್ಕೆ ಶೆಟ್ಟರ್ ಟೀಂ ಪ್ಲಾನ್: ಓರ್ವ ಸದಸ್ಯನಿಗೆ ಎಷ್ಟು ಅಮೌಂಟ್ ಗೊತ್ತಾ..?

Hubballi News: ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಸಮೀಪಿಸುತ್ತಿದ್ದಂತೆ, ಬಿಜೆಪಿ ನಾಯಕರನ್ನು ದಾಂಡೇಲಿ ರೆಸಾರ್ಟ್‌ಗೆ ಕರೆದೊಯ್ಯಲಾಗಿದೆ. ಇಂದಿಗೆ ಮೂರನೇ ದಿನವಾಗಿದ್ದು, ಹು-ಧಾ ಮಹಾನಗರ ಪಾಲಿಕೆಯ ಸದಸ್ಯರ ರೆಸಾರ್ಟ್ ರಾಜಕೀಯ ಮುಂದುವರೆದಿದೆ.

ಮಾಜಿ ಸಿಎಂ ಜಗದೀಶ್ ಶೆಟ್ಟರ್‌ಗೆ ಡಿಸಿಎಂ ಡಿಕೆಶಿ ಟಾಸ್ಕ್ ನೀಡಿದ್ದು, ಆಪರೇಶನ್ ಹಸ್ತ ಭಯದಿಂದಲೇ ಬಿಜೆಪಿ ಪಾಲಿಕೆ ಸದಸ್ಯರನ್ನು ಬಿಜೆಪಿ ನಾಯಕರು, ದಾಂಡೇಲಿ ರೆಸಾರ್ಟ್‌ನಲ್ಲೇ ಉಳಿಯುಂತೆ ಮಾಡಿದ್ದಾರೆ. ಕಾಂಗ್ರೆಸ್ ನಾಯಕರು ಶತಾಯ ಗತಾಯ ಪ್ರಯತ್ನ ಪಟ್ಟು, ಪಾಲಿಕೆ ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಪ್ರಯತ್ನದಲ್ಲಿದ್ದಾರೆ.

ಇದೇ ಮೇ 20ರಂದು ಪಾಲಿಕೆ ಮೇಯರ್ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್, ಬಿಜೆಪಿ ಸದಸ್ಯರಿಗೆ 50 ರಿಂದ 75 ಲಕ್ಷ ಆಫರ್ ಮಾಡಿದೆ. ಜಗದೀಶ್ ಶೆಟ್ಟರ್ ನೈತೃತ್ವದಲ್ಲಿ ಈ ಆಫರ್ ನೀಡಿ, ಆಪರೇಷನ್ ಹಸ್ತ ಮಾಡಿ, ಬಿಜೆಪಿ ನಾಯಕರನ್ನು ತನ್ನತ್ತ ಸೆಳೆದುಕೊಳ್ಳಲು ಕಾಂಗ್ರೆಸ್ ಪ್ರಯತ್ನ ನಡೆಸಿದೆ.

ಈ ಆಫರ್‌ಗೆ ಭಯಭೀತರಾಗಿರುವ ಬಿಜೆಪಿ ನಾಯಕರು, ದಾಂಡೇಲಿ ರೆಸಾರ್ಟ್‌ನಲ್ಲೇ ಬಿಜೆಪಿ ಸದಸ್ಯರನ್ನಿರಿಸಿದ್ದು, ಚುನಾವಣೆವರೆಗೆ ಅಲ್ಲೇ ಇರುವ ಸಾಧ್ಯತೆ ಇದೆ. ಬಿಜೆಪಿ 39, ಕಾಂಗ್ರೆಸ್ 33 , ಪಕ್ಷೇತರ 6 , ಎಐಎಂಐಎಂ 3 ಹಾಗೂ ಜೆಡಿಎಸ್ 1 ಸ್ಥಾನದ ಸದಸ್ಯ ಬಲ ಹೊಂದಿರೋ‌ ಹು-ಧಾ ಮಹಾನಗರ ಪಾಲಿಕೆ. ಮೇಯರ್ ಉಪಮೇಯರ್ ಆಯ್ಕೆಗೆ 42 ಮ್ಯಾಜಿಕ್ ನಂಬರ್ ಬೇಕಿದೆ. ಈ‌ ಮ್ಯಾಜಿಕ್‌ಗಾಗಿ ಬಿಜೆಪಿ ಸದಸ್ಯರಿಗೆ ಕಾಂಗ್ರೆಸ್ ನಾಯಕರು ಗಾಳ ಹಾಕಿದ್ದಾರೆ.

ಸತತ ಎರಡು ದಶಕಗಳ ಕಾಲ ಪಾಲಿಕೆಯನ್ನ ತನ್ನ ತೆಕ್ಕೆಗೆ ತೆಗೆದುಕೊಂಡಿರೋ ಬಿಜೆಪಿಗೇ ಆಪರೇಶನ್ ಮಾಡಲು ಕಾಂಗ್ರೆಸ್‌ ಸರ್ಕಾರ ಮುಂದಾಗಿದ್ದು, ರೆಸಾರ್ಟ್‌ನಲ್ಲೇ ಕುಳಿತಿರುವ ಕೇಸರಿ ಪಡೆ ಮತ್ತೊಮ್ಮೆ ಪಾಲಿಕೆ ಚುಕ್ಕಾಣಿ ಹಿಡಿಯಲು ರಣತಂತ್ರ ಹೆಣೆದಿದೆ.

‘ಗ್ಯಾರಂಟಿ ಭ್ರಮೆ ಹುಟ್ಟಿಸಿದ್ದು ನೋಡಿದ್ರೆ ಸರಕಾರದ ಜನಪ್ರಿಯತೆ ಬಹಳ ದಿನ ಉಳಿಯಲ್ಲ’

‘ನಮ್ಮಂಥವರ ಸಲಹೆ ಇಂದಿನ ಸಚಿವರು, ಅಧಿಕಾರಿಗಳು ಕೇಳಬೇಕು. ನಮ್ಮಂಥರಿಗೆ ಸಾಕಷ್ಟು ಜ್ಞಾನ ಇದೆ.’

ಹಟ್ಟಿಗೆ ನುಗ್ಗಿ 15 ಕುರಿಗಳನ್ನು ಬಲಿ ಪಡೆದ ತೋಳಗಳು..

About The Author