Thursday, April 25, 2024

Latest Posts

‘ನನ್ನ ಕ್ಷೇತ್ರದ ಅಭಿವೃದ್ಧಿ ಕೆಲಸ ಸಹಿಸಲಾರದೇ ಚುನಾವಣೆ ಗಿಮಿಕ್ ಆರೋಪ’

- Advertisement -

ಹಾಸನ: ನನ್ನ ಕ್ಷೇತ್ರದ ಅಭಿವೃದ್ಧಿ ಕೆಲಸ ಮಾಡಿರುವುದ ಸಹಿಸಲಾರದೇ ಚುನಾವಣೆ ಗಿಮಿಕ್ ಮಾಡಲಾಗಿದ್ದು, ಜನರ ಭಾವನೆಗಳ ಡೈವರ್ಟ್ ಮಾಡುವ ಉದ್ದೇಶದಲ್ಲಿ ನನ್ನ ಮೇಲೆ ಆರೋಪಗಳ ಮಾಡಿದ್ದು, ನಾನು ಅಕ್ರಮ ಎಸಗಿದ್ರೆ ಉನ್ನತ ಮಟ್ಟದಲ್ಲಿ ಬೇಕಾದರೇ ತನಿಖೆ ಮಾಡಲಿ ಎಂದು ಅರಸೀಕೆರೆ ಶಾಸಕ ಶಿವಲಿಂಗೇಗೌಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ತಾಕತ್ ಇದ್ದರೇ ನೀರಾವರಿ ನಿಗಮ ಮೂಲಕ ಆಗಿರುವ ಕಾಮಗಾರಿ ಬಗ್ಗೆ ಹೇಳಲಿ ಎಂದು ಸವಾಲ್ ಹಾಕಿದ್ದಾರೆ.

ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಶಿವಲಿಂಗೇಗೌಡರು, ನನ್ನ ಅರಸೀಕೆರೆ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಕುಂಠಿತ ಮಾಡಲು ಕಾಣದ ಕೈ ಕೆಲಸ ಮಾಡಿದೆ. ಅಭಿವೃದ್ಧಿ ಕೆಲಸ ತಡೆಯಲಾಗದೆ ಚುನಾವಣೆ ಗಿಮಿಕ್ ಮಾಡಲು ಜನರ ಭಾವನೆ ಡೈವೋರ್ಟ್ ಮಾಡಲು, ಮಾರ್ಚ್ ಕೊನೆಯಲ್ಲಿ ಇಂಜಿನಿಯರ್​ ಉಮೇಶ್ ಅವರು ಲಾಡ್ಜ್ ನಲಿ ರೂಂ ಮಾಡಿಕೊಂಡು, ಒತ್ತಡ ತಡೆಯಲು ಬಿಲ್ ತಯಾರಿಗೆ ಸಿಬ್ಬಂದಿ ಜೊತೆ ನಡೆಸಲಾಗಿದೆ.

ಏಳೆಂಟು ಜನರ ಗುಂಪು ಹಲ್ಲೆಮಾಡಿ, ಅಗ್ರಿಮೆಂಟ್ ಎಂಬಿ ಬುಕ್ ಕಿತ್ತು ಹೋಗಿದ್ದಾರೆ. ಮಾರ್ಚ್ ೧೭ ರಂದು, ಎಂಬಿ ಬರೆಯದಿದ್ದರೆ. ಅನುದಾನ ಲ್ಯಾಪ್ಸ್ ಉದ್ದೇಶ, ಪಿ.ಆರ್.ಡಿ. ಲಾಡ್ಜ್ ಗೆ ಏಕೆ ಬಂದು ಹಲ್ಲೆ ಮಾಡಬೇಕಿತ್ತು..? ಸಂತೋಷ ಹತ್ರ ರಾಜಿ ಯಾಕೆ ಮಾಡಿಕೋಬೇಕಿತ್ತು..?. ಕಾಟಿಕೆರೆ ಮೋಹನ್ ಉಮೇಶ್ ೧೧ ಜನರ ವಿರುದ್ಧ ನಿನ್ನೆ ಎಫ್.ಐ.ಆರ್. ಆಗಿದೆ. ಕೆಲಸ ಅಕ್ರಮವಾಗಿದ್ದರೆ ತನಿಖೆ ಬೇಕಾದ್ರೆ ನಡೆಸಲಿ. ಕೆಲಸ ಅಡ್ಡಿ ಮಾಡುವುದು ಇವರ ಏಕಮಾತ್ರ ಉದ್ದೇಶವಾಗಿದ್ದು, ಹಣ ಹೋದರೆ ಯಾರು ಹೊಣೆ? ಎಂದು ಪ್ರಶ್ನಿಸಿದ್ದಾರೆ.

ಎಂಬಿ ಬುಕ್ ಕೊಡಲಿಲ್ಲ .ಸಿಎಸ್ ನೋಟಿಸ್ ಮಾಡಿದ ನಂತರ ದೂರು ಕೊಟ್ಟಿದ್ದಾರೆ ಎಂದರು. ಅವನು ತಿಪಟೂರಿನಿಂದ ಬರುವುದು ಏಕೆ? ಬೇರೆಯವರು ಎಂಬಿ ಬರೆಯಲ್ಲವಾ, ಕೂಡಲೇ ದೂರು ಕೊಡದೇ ಹೋಗಿದ್ದು ತಪ್ಪು, ನನಗೆ ಲಾಸ್. ಕ್ಷೇತ್ರದ ಜನಕ್ಕೆ ಲಾಸ್ ಬಗ್ಗೆ ಏನೇ ಬೇಕಾದ್ರೂ ತನಿಖೆ ಮಾಡಿಸಲಿ, ಉದ್ದೇಶ ಕ್ಷೇತ್ರದ ಅಭಿವೃದ್ಧಿ ತಡೆಯುವುದು ಆಗಿದೆ. ಸುಳ್ಳುಬಿಲ್ ಮಾಡಿದ್ರೆ ಅನುಭವಿಸುತ್ತಾನೆ. ಸಹಾಯಕ ಇಂಜಿನಿಯರ್ ಎಂಬಿ ರೆಕಾರ್ಡ್ ಮಾಡೋನು, ೧೫೦ ಊರು ಬಿಲ್ ಬರೆದಿಲ್ಲ. ತಡೆ ಹಿಡಿಯೋದು ಕಾರಣ ಏನು? ಮೇಲಧಿಕಾರಿ ದೂರು ನೀಡಲಿ ಎಂದು ಒತ್ತಾಯಿಸಿದರು.

​ ​ಅಲ್ಲದೇ, ಇಂತಹ ಕುತಂತ್ರಕ್ಕೆ ನಾನು ಜಗ್ಗುವನಲ್ಲ. ಅಖಾಡದಲ್ಲಿ ಹೊಣೆಗಾರರು ಯಾರು ಹೇಳುವೆ, ಜನರ ಮುಂದೆ ಇಡುವೆನು. ಸರಕಾರಿ ದಾಖಲೆಯನ್ನೆಲ್ಲಾ ಮನೆಯಲ್ಲಿ ಹೇಗೆ ಇಟ್ಟುಕೊಂಡರು..? ಅಧಿಕಾರಿಗಳದ್ದು ತಪ್ಪಿದೆ. ಕಾಂಕ್ರೀಟ್ ರಸ್ತೆ ನಿಂತು ಹೋಗಿದೆ ಹೊಣೆ ಯಾರ ಮಾಡಲಿ..?, ಕ್ಷೇತ್ರಕ್ಕೆ ಲಾಸ್ ಆಗಿದ್ದು, ಮುಂದೆ ಹೇಳುವೆ. ತಪ್ಪು ಮಾಡಿದವನು ಅನುಭವಿಸಿಕೊಳ್ಳುತ್ತಾನೆ. ಮಾರ್ಚ್ ಎಂಡ್ ಒಳ್ಳೆ ಕೆಲಸ ಆಗಿ ಜನರಿಂದ ಪ್ರಶಂಸೆ ಬರಲಿದೆ ಎಂದು ಸಂತೋಷ್​ ಮಾಡಿಸಿದ್ದಾನೆ ಎಂದು ದೂರಿದರು.

ಗ್ರಾಂಟ್ ನಿಲ್ಲಿಸಬೇಡಿ ಮುಂದುವರಿಸಿ ಎಂದು ನಾನು ಸರಕಾರಕ್ಕೆ ಮನವಿ ಮಾಡುತ್ತೇನೆ. ಸ್ಪಿಲ್ ಓವರ್ ಆಗಿ ಮುಂದೆ ಮುಂದುವರಿಸಲಿ, ಕಾನೂನು ಹೋರಾಟ ಮಾಡೋಣ ಎಂದರು. ಲ್ಯಾಪ್ಸ್ ಎಷ್ಟು ಗೊತ್ತಿಲ್ಲ. ಮುಂದೆ ಸ್ಪಿಲ್ ಓವರ್ ಕಟ್ ಮಾಡಬೇಡಿ ಎಂದು ಮನವಿ ಮಾಡವೆ. ಇದೆಲ್ಲಾ ಮಾಡಿರೋದು ಅವನೇ, ಸಂತೋಷ. ೧೦ ಸಾವಿರ ಕೋಟಿಗೂ ಅಧಿಕ ಬಿಜೆಪಿ ಶಾಸಕರು ವಿಶೇಷ ಅನುದಾನ ಪಡೆದು ರಸ್ತೆ ಅಭಿವೃದ್ಧಿ ಮಾಡಿದ್ದಾರೆ. ಒಂದೊಂದು ಕ್ಷೇತ್ರಕ್ಕೆ ನೂರಾರು ಕೋಟಿ ಬರೆಸಿಕೊಂಡಿದ್ದಾರೆ. ನಾನೊಬ್ಬನೇ ಅನ್ನೋದು ಎಷ್ಡು ಸರಿ? ನಾನು ಬಿಟ್ಟಿ ಸಿಕ್ಕಿದ್ದೀನಾ..? ಎಂದು ಶಿವಲಿಂಗೇಗೌಡರು ಪ್ರಶ್ನಿಸಿದ್ದಾರೆ.

ವರ್ಕ್ ಮಂಜೂರು ಮಾಡಿದ್ದು ಯಾರು? ಸಚಿವರು, ಬರೀತಾರೆ, ಸಚಿವರು, ಹಿರಿಯ ಅಧಿಕಾರಿಗಳು ಸರಕಾರ ಯಾರ ಸರ್ಕಾರ ಬಿಜೆಪಿ ಅವರ ಮೇಲೆ ಕೇಸ್ ಹಾಕಿಸಲಿ, ಕಾಮಗಾರಿ ಅನುಮೋದನೆ ಯಾರು ಕೊಟ್ಟಿದ್ದು. ಇದಕ್ಕೆ ಯಾರು ಹೊಣೆ? ಸರ್ಕಾರದ ತಪ್ಪು ಹೇಳಿದ್ರೆ, ಬರೆದವರು ಕ್ರಿಯಾಯೋಜನೆಗೆ ಮಂಜೂರಾತಿ ಕೊಟ್ಟವರು ಯಾರು? ಕಾನೂನಲ್ಲಿ ಅವಕಾಶ ಇಲ್ಲ ಅಂದ್ರೆ ತಿರಸ್ಕಾರ ಮಾಡಬೇಕಿತ್ತು. ನಿಗಮಗಳಲ್ಲಿ ಯಾರು ರಸ್ತೆ ಮಾಡಿಸಿಲ್ವಾ, ಇವನಿಗೆ ತಾಕತ್ತು ಇದ್ರೆ ಬಿಜೆಪಿಯವರ ಮೇಲೆ ಹಾಕಬೇಕಿತ್ತು. ತಾಕತ್ತು ಇದ್ರೆ, ಸಿಬಿಐಗೆ ಕೊಡಲಿ, ಅನುದಾನ ತರಿಸೋದು.​

ಪ್ರೀತಂ ಇಲ್ವಾ, ಬೊಮ್ಮಾಯಿ ಇಲ್ವಾ, ನನ್ನ ಕ್ಷೇತ್ರ ಮಾತ್ರ ಆಗಿರೋದಾ, ಎಷ್ಟು ರಸ್ತೆ ವಿನಿಯೋಗ ಮಾಡಿಲ್ವಾ, ಒಬ್ಬನೇ ಅಪರಾಧ ಮಾಡಿಲ್ಲ. ಎಲ್ಲರ ರೀತಿ ಮಾಡಿದ್ದೀನಿ, ನಂದು ಒಂದು ಕ್ಷೇತ್ರ ಮಾತ್ರ ಗಿಮಿಕ್ ಏಕೆ ಎಂದು ಅಸಮಧಾನವ್ಯಕ್ತಪಡಿಸಿದರು. ಎತ್ತಿನಹೊಳೆಯದು ಪ್ರೀತಂಗೌಡ ತಂದಿಲ್ವಾ. ಅವರ ವಿರುದ್ಧವೂ ದೂರು ಕೊಡಲಿ ನೋಡೋಣ, ಲೋಕಾ ನೋಟಿಸ್ ಬಂದ್ರೆ ಉತ್ತರ ಕೊಡುವೆ, ಏನ್ ತಪ್ಪಿದೆ ಅಂತ. ನನ್ನನ್ನೆ ಏಕೆ ಏ೧ ಮಾಡಿದ್ದಾರೆ ಎಂದು ಪ್ರಶ್ನೆ ಮಾಡಿದರು. ಎತ್ತಿನಹೊಳೆಯ ಎಸ್ಸಿ, ಎಸ್ಟಿ ಕಾಲೋನಿ ರಸ್ತೆ ಮಾಡಿಲ್ಲ ಎಂದ್ರೆ ಶಿಕ್ಷೆಗೆ ಬದ್ಧ, ತಪ್ಪು ಮಾಡಿದ್ರೆ ತನಿಖೆ ಮಾಡಿಸಲಿ, ಚುನಾವಣೆ ಹೊಸ್ತಿಲಲ್ಲಿ ಆಪಾದನೆ ಮಾಡಿಸಿರುವುದು ಸರಿಯಲ್ಲ. ೮೦ ಕೋಟಿ ಮೇಲೆ ಒಂದು ರೂ ಬಂದಿಲ್ಲ . ೧೫೦ ಕೋಟಿ ಎಲ್ಲಿಂದ ಕೊಟ್ಟವರೆ ಯಾವ ತನಿಖೆಗು ನಾನು ಸಿದ್ಧ ಸವಾಲು ಹಾಕಿದರು.

​ ​ ​ ​ ​ ನರೇಗಾದಲ್ಲಿ ೧೫೦ ಕೋಡಿ ಅಂದ್ರು ಆದರೇ ಇದುವರೆಗೆ ೩೨ ಕೋಟಿ ಬಂದಿದೆ, ೭೬ ಕೋಡಿ ಬಂದಿದೆ, ೧೮-೧೯ ರಿಂದ ಪ್ರಧಾನ ಕಾರ್ಯದರ್ಶಿ ಅನುಮೋದನೆ ಮಾಡೋರು, ಬಿಡುಗಡೆ ೬೦ ಜೋಟಿ, ೧೬೦ ಕೋಡಿ ಲೂಟಿ ಅಂದ್ರೆ ಹೇಗೆ, ೫೩೦ ಹಳ್ಳಿ ಕಾಂಕ್ರೀಟ್ ಹಾಕಿಸಿದ್ದೇನೆ. ಬಹಳ ಅಧಿಕಾರಿಗಳ ಹೆದರಿಸಿ ಅಭಿವೃದ್ಧಿ ಕಾಮಗಾರಿಗೆ ಕಂಠಕ ಪ್ರಿಯ ಆಗಿದ್ದಾರೆ. ಅಭಿವೃದ್ಧಿ ಹಾಳು ಮಾಡಬಾರದು, ತನಿಖೆ ಆಗಲಿ. ಈ ಬಗ್ಗೆ ನಾನು ಮಾನನಷ್ಟ ಅಲ್ಲ, ಮುಂದೆ ಏನು ಮಾಡುವೆ ಆಮೇಲೆ ಹೇಳುವೆ ಎಂದು ಎಚ್ಚರಿಸಿದರು. ಕ್ರಿಯಾಯೋಜನೆ ಮಂಜೂರು ನನ್ನದು. ತಾಕತ್ತು ಇದ್ರೆ ನೀರಾವರಿ ನಿಗಮ ಮೂಲಕ ಮಾಡಿಸಿರೋದು ಹೇಳಲಿ ಎಂದು ತಾಕಿತು ಮಾಡಿದರು.

​ ​ ​ ಶೀಘ್ರವೇ ಕಾಂಗ್ರೆಸ್ ಸೇರ್ಪಡೆ ಆಗುವೆ. ಸದ್ಯವೇ ತೀರ್ಮಾನ ಕೈಗೊಳ್ಳುವೆ. ಕಾರ್ಯಕರ್ತರ ಭಾವನೆಗೆ ಸ್ಪಂದಿಸುವೆ. ಯಾರ ಬಗ್ಗೆ ಟೀಕೆ ಮಾಡಲ್ಲ, ಜನ ಉಂಟು ನಾನು ಉಂಟು. ಮೊದಲು ಪಕ್ಷಕ್ಕೆ ರಾಜಿನಾಮೆ ನೀಡಿ ನಂತರ ಸೇರ್ಪಡೆಗೆ ಮುಂದಾಗುವೆನು ಎಂದು ಹೇಳಿದರು.

ಹೊಸ ಪಕ್ಷ ಅಧಿಕಾರಕ್ಕೆ ಬರಲಿದೆ ರಾಜ್ಯದಲ್ಲಿ . ಇನ್ನು ಒಂದುವರೆ ತಿಂಗಳಲ್ಲಿ ಹೊಸ ಸರ್ಕಾರ

ಮೇ 10 ನೇ ತಾರೀಕು ವಿಧಾನಸಭಾ ಚುನಾವಣೆ , ಮೇ 13 ಕ್ಕೆ ಫಲಿತಾಂಶ ಘೋಷಣೆ ಮಾಡಿದ ಆಯುಕ್ತ ರಾಜಿವ್ ಕುಮಾರ್

ಚುನಾವಣಾ ದಿನಾಂಕ ಘೋಷಣೆಯಾದ ಬೆನ್ನಲ್ಲೆ ನೀತಿ ಸಂಹಿತೆ ಜಾರಿಯಾಗಿದ ನಂತರ ಸರ್ಕಾರಿ ವಾಹನಗಳಿಗೆ ಗುಡ್ ಬೈ ಹೇಳಿದ ರಾಜಕಾರಣಿಗಳು

- Advertisement -

Latest Posts

Don't Miss