Sunday, July 6, 2025

Latest Posts

Shivamogga: ಸಿಗಂದೂರು ಸೇತುವೆ ಉದ್ಘಾಟನೆ ವಿಚಾರ: ಸಂಸದ ಬಿ.ವೈ.ರಾಘವೇಂದ್ರ ಸುದ್ದಿಗೋಷ್ಠಿ

- Advertisement -

Shivamogga: ಬಹು ನಿರೀಕ್ಷಿತ ದೇಶದ ಎರಡನೇ ಅತಿ ಉದ್ದದ ಸಿಗಂಧೂರು ಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಲೋಕಾರ್ಪಣೆಗೆ ಮಹೂರ್ತ ನಿಗದಿಯಾಗಿದೆ.

ಇಂದು ಶಿವಮೊಗ್ಗ ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಜನಪ್ರಿಯ ಸಂಸದ ಅಭಿವೃದ್ಧಿ ಅಧಿಕಾರ ಶ್ರೀ ಬಿ.ವೈ.ರಾಘವೇಂದ್ರ ರವರು ಇದೇ ಜು.14ರಂದು ಸೇತುವೆ ಲೋಕಾರ್ಪಣೆಯನ್ನು ಕೇಂದ್ರ ಸಚಿವ ಶ್ರೀ ನಿತಿನ್ ಗಡ್ಕರಿಯವರು ಮಾಡಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಸೇತುವೆಗೆ.

ಶ್ರೀಕ್ಷೇತ್ರ ಸಿಗಂಧೂರು ದೇವಸ್ಥಾನಕ್ಕೆ ರಾಜ್ಯದ ವಿವಿಧೆಡೆಯಿಂದ ಭಕ್ತರು ಆಗಮಿಸುತ್ತಾರೆ. ದೇವಸ್ಥಾನಕ್ಕೆ ತೆರಳುವ ಭಕ್ತರು ಶರಾವತಿ ನದಿಯನ್ನು ಲಾಂಚ್ ಮೂಲಕ ತೆರಳಬೇಕಿತ್ತು. ಸಾರ್ವಜನಿಕರಿಗೆ ಭಕ್ತರಿಗೆ ಅನುಕೂಲವಾಗಲು ದೇಶದ ಅತಿ ಉದ್ದದ ತೂಗು ಸೇತುವೆ ನಿರ್ಮಾಣವಾಗಿದ್ದು ಇದೇ ಜು.14ರಂದು ಲೋಕಾರ್ಪಣೆಯಾಗಲಿದೆ.

ಐತಿಹಾಸಿಕ ಸೇತುವೆಗೆ ಹೆಸರನ್ನು ಪತ್ರಿಕಾಗೋಷ್ಠಿಯಲ್ಲಿ ಸಂಸದ ಶ್ರೀ ಬಿವೈ ರಾಘವೇಂದ್ರ ಪ್ರಸ್ತಾಪ ಮಾಡಿದ್ದಾರೆ.
ಸೇತುವೆಗೆ ಸಿಗಂಧೂರು ಚೌಡೇಶ್ವರಿ ಸೇತುವೆ ಹೆಸರು ಅಂಕಿತ ಮಾಡಲು ರಾಜ್ಯ ಸರ್ಕಾರಕ್ಕೆ ಸಂಸದ ಶ್ರೀ ಬಿ ವೈ ರಾಘವೇಂದ್ರ ಒತ್ತಾಯ ಮಾಡಿದ್ದು ಇದಕ್ಕೆ ಬೇಕಾದ ಕ್ಲಿಯರೆನ್ಸ್ ರಾಜ್ಯ ಸರ್ಕಾರ ಬೇಗನೆ ನೀಡಲಿ ಎಂದು ತಿಳಿಸಿದ್ದಾರೆ,ಈ ಸಂದರ್ಭದಲ್ಲಿ ಶಾಸಕರಾದ ಶ್ರೀ ಆರಗ ಜ್ಞಾನೇಂದ್ರರವರು,ಶ್ರೀ ಚನ್ನಬಸಪ್ಪರವರು, ವಿಧಾನ ಪರಿಷತ್ ಶಾಸಕರಾದ ಶ್ರೀ ಧನಂಜಯ ಸರ್ಜಿ ರವರು,ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ಶ್ರೀ ಹೆಚ್ ಹಾಲಪ್ಪನವರು, ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಶ್ರೀ ಜಗದೀಶ್ ರವರು, ರಾಜ್ಯ ಪ್ರಕೋಷ್ಟ ಸಂಯೋಜಕರಾದ ಶ್ರೀ ಎಸ್ ದತ್ತಾತ್ರಿ ರವರು, ಮಾಜಿ ಶಾಸಕರಾದ ಶ್ರೀ ಕೆಜಿ ಕುಮಾರಸ್ವಾಮಿರವರು,ಶ್ರೀ ಎಸ್ಎಸ್ ಜ್ಯೋತಿಪ್ರಕಾಶ್ ರವರು,ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಹರಿಕೃಷ್ಣರವರು, ಶ್ರೀ ಮಾಲತೇಶ್ ರವರು ಸೇರಿದಂತೆ ಪ್ರಮುಖರು ಹಾಜರಿದ್ದರು.

- Advertisement -

Latest Posts

Don't Miss