Hubli News: ನಾಡಿನಾದ್ಯಂತ ಇಂದು ಶಿವರಾತ್ರಿ ಹಬ್ಬವನ್ನು ಸಡಗರ ಸಂಭ್ರಮದಿಂದ ಮಾಡಲಾಗುತ್ತಿದ್ದು, ವಾಣಿಜ್ಯ ನಗರಿ ಹುಬ್ಬಳ್ಳಿಯುಲ್ಲೂ ಶಿವರಾತ್ರಿ ಸಂಭ್ರಮ ಜೋರಾಗಿದೆ. ಶ್ರೀ ಈಶ್ವರ ದೇವಸ್ಥಾನ ಶಿವಲಿಂಗುಗೆ ಭಕ್ತರು ಹಾಲಿ ಅಭಿಷೇಕ ಮಾಡುವ ಮೂಲಕ ತಮ್ಮಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥನೆ ಮಾಡಿಕೊಂಡರು.
ಹುಬ್ಬಳ್ಳಿ ರೈಲ್ವೇ ಸ್ಟೇಷನ್ ರಸ್ತೆಯ ಶ್ರೀ ಈಶ್ವರ ದೇವಸ್ಥಾನಲ್ಲಿ ಮುಂಜಾನೆಯೇ ಶಿವಲಿಂಗು ಸೇರಿ ಶಿವನ ಮೂರ್ತಿಗೆ ವಿಶೇಷ ಪೂಜಾ ಕೈಂಕರ್ಯಗಳು ಜರುಗುತ್ತಿದ್ದು, ಭಕ್ತರು ಕೂಡಾ ಶಿವಲಿಂಗುಗೆ ಕ್ಷೀರಾಭಿಷೇಕ ಮಾಡಿ ಶಿವರಾತ್ರಿ ಆಚರಣೆ ಮಾಡಿದರು. ಮುಂಜಾನೆಯಿಂದ ದೇವಸ್ಥಾನಕ್ಕೆ ಭಕ್ತರು ದಂಡು ಹರಿದು ಬರುತ್ತಿದ್ದು, ಸರದಿ ಸಾಲಿನಲ್ಲಿ ನಿಂತು ಕುಟುಂಬ ಸಮೇತವಾಗಿ ಭಕ್ತರು ಶ್ರೀ ಶಿವನ ಮೂರ್ತಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ಬಳಿಕ ಶಿವಲಿಂಗುಗೆ ಹಾಲಿನ ಅಭಿಷೇಕ ಮಾಡಿದ ಭಕ್ತರು ತಮ್ಮಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥನೆ ಮಾಡಿಕೊಂಡರು. ಇನ್ನೂ ವೇಳೆ ಶಿವ ನಾಮ ಸ್ಮರಣೆ ಮಾಡುವ ಮೂಲಕ ಭಕ್ತರು ದೇವರ ಕೃಪೆಗೆ ಪಾತ್ರರಾದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಭಕ್ತರ ಆಗಮನ ಸೇರಿ ನಿರ್ಗಮನಕ್ಕೆ ದೇವಸ್ಥಾನ ಕಮಿಟಿ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿದ್ದು, ಭಕ್ತರ ಮೆಚ್ಚುಗೆಗೆ ಪಾತ್ರರಾದರು.
ಒಟ್ಡಿನಲ್ಲಿ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಶಿವರಾತ್ರಿ ಸಂಭ್ರಮ ಎಲ್ಲೆಯಡಿಯು ಮನೆ ಮಾಡಿದೆ. ನಗರದ ಹಲವು ದೇವಸ್ಥಾನಗಳಿಗೆ ಭಕ್ತರು ಕುಟುಂಬ ಸಮೇತರಾಗಿ ತೆರಳಿ ವಿಶೇಷ ಪೂಜೆ ಪ್ರಾರ್ಥನೆಯಲ್ಲಿ ಬ್ಯೂಸಿಯಾಗಿರೋ ದೃಶ್ಯಗಳು ಸಾಮಾನ್ಯವಾಗಿವೆ.