sandalwood News: ಗೆಳತಿ ಪವಿತ್ರಾಗೌಡಗಾಗಿ ನಟ ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನವಾಗಿದ್ದಾರೆ. ಇದರ ಬೆನ್ನಲ್ಲೇ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರ ನಡೆ ದಿನದಂದಿ ದಿನಕ್ಕೂ ಕುತೂಹಲ ಮೂಡಿಸಿದೆ.
ದರ್ಶನ್ ಅರೆಸ್ಟ್ ಆದ ಬೆನ್ನಲ್ಲೇ ತುಂಬಾ ಬೇಸರದಲ್ಲಿರುವ ವಿಜಯಲಕ್ಷ್ಮಿ ಅವರು, ತಮ್ಮ ಇನ್ಸ್ಟಾ ಖಾತೆಯನ್ನು ಡಿ-ಆಕ್ಟಿವೇಟ್ ಮಾಡಿದ್ದಾರೆ. ಬುಧವಾರ ಇನ್‌ಸ್ಟಾದಲ್ಲಿ ದರ್ಶನ್ ಅವರನ್ನು ಪತ್ನಿ ವಿಜಯಲಕ್ಷ್ಮಿ ಅನ್ಫಾಲೋ ಮಾಡಿದ್ದರು. ದರ್ಶನ್ ಫ್ಯಾನ್ ಪೇಜ್ ಅನ್ನು ಕೂಡ ಅನ್ಫಾಲೋ ಮಾಡಿ ಇನ್ಸ್ಟಾಗೆ ಇದ್ದ ಡಿಪಿ ಫೋಟೋವನ್ನು ತೆಗೆದು ಹಾಕಿದ್ದರು. ಇದರಿಂದ ಇನ್ಸ್ಟಾಗ್ರಾಂ ಖಾತೆಯ ಡಿಪಿ ಬ್ಲಾಂಕ್ನಲ್ಲಿತ್ತು. ಇದೆಲ್ಲರ ನಡುವೆ ಇದೀಗ ತಮ್ಮ ಇನ್ಸ್ಟಾ ಖಾತೆಯನ್ನು ವಿಜಯಲಕ್ಷ್ಮಿ ಅವರು ಡಿ-ಆ್ಯಕ್ಟಿವೇಟ್ ಮಾಡಿದ್ದು, ಕುತೂಹಲಕ್ಕೆ ಕಾರಣವಾಗಿದೆ.
ಕೊಲೆ ಕೇಸ್ನಲ್ಲಿ ಆರೋಪಿಯಾಗಿ ಜೈಲು ಸೇರಿರುವ ನಟ ದರ್ಶನ್ ಅವರಿಂದ ವಿಜಯಲಕ್ಷ್ಮಿ ಅಂತರ ಕಾಯ್ದುಕೊಂಡರೆ ಎನ್ನುವ ಪ್ರಶ್ನೆಯೂ ಮೂಡಿದೆ. ಪ್ರಕರಣಕ್ಕೆ ಸಂಬಂಧ ವಿಜಯಲಕ್ಷ್ಮೀ ಅವರು ಮೌನ ವಹಿಸಿದ್ದು, ಯಾವುದೇ ಹೇಳಿಕೆಗಳನ್ನು ನೀಡಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಗೆಳತಿ ಪವಿತ್ರಾಗೌಡ ವಿಚಾರದಲ್ಲಿ ಡಿಬಾಸ್ ಪದೇ ಪದೇ ಎಡವಟ್ಟುಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಈ ಬಾರಿಯೂ ಪವಿತ್ರಾ ವಿಚಾರವಾಗಿ ದರ್ಶನ್ ಬಂಧನವಾಗಿದ್ದು, ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಇದು ಸಹಜವಾಗಿಯೇ ವಿಜಯಲಕ್ಷ್ಮಿಯವರಿಗೆ ಪವಿತ್ರಾ ಗೌಡ ಮೇಲೆ ಕೆಟ್ಟ ಕೋಪ ಬರುವಂತೆ ಮಾಡಿರುತ್ತದೆ. ಆದರೂ ತಾಳ್ಮೆ ವಹಿಸಿಕೊಂಡು ಮೌನಕ್ಕೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ. ಕಳೆದ ಎರಡ್ಮೂರು ತಿಂಗಳ ಹಿಂದೆ ದರ್ಶನ್ ಪತ್ನಿ ವಿಜಯಲಕ್ಷ್ಮಿಯರು ಇನ್‌ಸ್ಟಾದಲ್ಲಿ ಪವಿತ್ರಾ ಗೌಡ ಪತಿ ಹಾಗೂ ಮಗಳ ಬಗ್ಗೆ ಫೋಟೋಗಳನ್ನು ಶೇರ್ ಮಾಡಿ ಮಾತಿನ ದಾಳಿ ನಡೆಸಿದ್ದರು. ಆ ಬಳಿಕ ದರ್ಶನ್ ಅಭಿಮಾನಿಗಳಲ್ಲೇ ಎರಡು ಬಣವಾಯ್ತು.
ಒಂದಿಷ್ಟು ಅಭಿಮಾನಿ ಬಳಗ ದರ್ಶನ್ ಹಾಗೂ ವಿಜಯಲಕ್ಷ್ಮೀ ಅವರನ್ನು ಇಷ್ಟಪಡುತ್ತಿತ್ತು. ಮತ್ತೊಂದು ಅಭಿಮಾನಿಗಳು ಪವಿತ್ರಾಗೌಡ ಅವರನ್ನು ಅತ್ತಿಗೆ ಎಂದು ಕರೆಯುತ್ತಿತ್ತು. ಹಾಗೆಯೇ, ಇನ್ನು ಕೆಲವರು ದರ್ಶನ್ ಹಾಗೂ ವಿಜಯಲಕ್ಷ್ಮೀ ಜೀವನದಲ್ಲಿ ಪವಿತ್ರಾಗೌಡ ಎಂಟ್ರಿ ಆಗ್ತಿರೋದನ್ನು ವಿರೋಧಿಸಿದ್ದರು. ಹತ್ಯೆಯಾದ ರೇಣುಕಾಸ್ವಾಮಿ ಕೂಡ ಪವಿತ್ರಾಗೌಡ ಪೋಸ್ಟ್‌ಗೆ ಬೇಸರದಿಂದ ಕಾಮೆಂಟ್ ಮಾಡುತ್ತಿದ್ದರು. ಇದೀಗ ದರ್ಶನ್ ಅವರು ಪವಿತ್ರಾಗಾಗಿ ಕೊಲೆ ಮಾಡಿದರು ಎನ್ನುವ ಆರೋಪ ಹೊತ್ತಿರೋದು ವಿಜಯಲಕ್ಷ್ಮಿ ಅವರಿಗೆ ಸಾಕಷ್ಟು ಶಾಕಿಂಗ್ ಎನಿಸಿದೆ. ಜೊತೆಗೆ ಬೇಸರ ಕೂಡ ಮೂಡಿಸಿದೆ.
ಇನ್ನೂ, ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ದರ್ಶನ್ಗೆ ಇದೀಗ ಕೆಟ್ಟ ಮೇಲೆ ಬುದ್ಧಿ ಬಂದಿದೆ. ಕೈಗೆ ಕೋಳ ಬಿದ್ದ ಮೇಲೆ ಜ್ಞಾನೋದಯವಾಗಿದ್ದು, ಪೊಲೀಸರ ಮುಂದೆ ನಾನೇಣು ತಪ್ಪು ಮಾಡಿಲ್ಲ ಎಂದು ಪಶ್ಚಾತ್ತಾಪದ ಮಾತುಗಳನ್ನಾಡಿದ್ದಾರೆ.
ಯಡಿಯೂರಪ್ಪ ವಿರುದ್ಧ ಪೋಕ್ಸೋ ಕೇಸ್: ವಿಚಾರಣೆಗೆ ಹಾಜರಾಗುವಂತೆ ಸಿಐಡಿ ನೋಟಿಸ್
Sandalwood News: ಪವಿತ್ರಾ ಮೊಬೈಲ್‌ಗೆ ಮರ್ಮಾಂಗದ ಚಿತ್ರ ಕಳಿಸಿದ್ದ ರೇಣುಕಾಸ್ವಾಮಿ!