Bengaluru News: ನನ್ನ ಮುಟ್ಟಬೇಡ, ಬ್ಯೂಟಿ ಹಾಳಾಗುತ್ತದೆ ಎಂದು ಹೆಂಡತಿ ಡಿಮ್ಯಾಂಡ್ ಮಾಡಿದ್ದಳು. 2 ವರ್ಷಗಳು ಕಳೆದರು ಹೆಂಡತಿ ಸಂಸಾರ ನಡೆಸಲು ನೋ ಅಂತಿದ್ದಾಳೆ. ನನಗೀಗ ಮಕ್ಕಳು ಬೇಡ, ದತ್ತು ಮಕ್ಕಳನ್ನು ಸಾಕೋಣ, 60 ವರ್ಷದ ನಂತರ ಮಕ್ಕಳನ್ನು ಮಾಡಿಕೊಳ್ಳೋಣ ಎಂದು ಹೇಳುತ್ತಿದ್ದಾಳೆ. ಹೀಗೆಂದು ಆರೋಪಿಸಿ ಪೊಲೀಸ್ ಠಾಣೆ ಮೆಟ್ಟಿಲೇರಿ ಗಂಡ ಶ್ರೀಕಾಂತ್ ಮಾಡಿದ್ದ ಆರೋಪಕ್ಕೆ ಇದೀಗ ಸ್ವತಃ ಅವನ ಪತ್ನಿ ಬಿಂದುಶ್ರೀ ಟ್ವಿಸ್ಟ್ ಕೊಡುವ ಮೂಲಕ ಪ್ರಕರಣದ ದಿಕ್ಕನ್ನೇ ಬದಲಿಸಿದ್ದಾರೆ.
ಇನ್ನೂ ಶ್ರೀಕಾಂತ್ ಕುಟುಂಬಸ್ಥರು ನನಗೆ ಹೊಡೆಯೋದು, ಬಯ್ಯೋದನ್ನು ಮಾಡುತ್ತಿದ್ದಾರೆ. ಸೊಸೆ ಅಂದ್ರೆ ಕೇವಲ ಕಾಲ ಕಸದ ರೀತಿ ನೋಡಿಕೊಳ್ತಿದ್ದಾರೆ. ಮನೆಯ ಕೆಲಸದವಳಂತೆ ಕಾಣುತ್ತಿದ್ದಾರೆ. ಅಲ್ಲದೆ ಮಾನಸಿಕ ಕಿರುಕುಳ ನೀಡಿ, ವರದಕ್ಷಿಣೆ ಪೀಡಿಸುತ್ತಿದ್ದರು ಈ ಬಗ್ಗೆ ವೈಯಾಲಿಕಾವಲ್ ಪೊಲೀಸರಿಗೆ ಈ ಮೊದಲು ದೂರು ನೀಡಿದ್ದೆ ಎನ್ನುವ ಮೂಲಕ ಬಿಂದುಶ್ರೀ ತನ್ನ ಗಂಡನ ಮನೆಯವರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಇನ್ನೂ ಅವರ ತಾಯಿ ಡೈವರ್ಸ್ ತಗೋ ಎಂದು ಹೇಳುತ್ತಾರೆ, ಅಲ್ಲದೆ ನಮ್ಮ ಬೆಡ್‌ರೂಂನಲ್ಲಿ ಕ್ಯಾಮೆರಾ ಫಿಕ್ಸ್ ಮಾಡು ಎನ್ನುತ್ತಾರೆ. ಅಲ್ಲದೆ ನಾವು ಸಾಮಾನ್ಯ ಜೋಕು ಮಾಡುವುದನ್ನು ವಿಡಿಯೋ ಮಾಡುತ್ತಾರೆ. ಅದನ್ನು ಎಡಿಟ್ ಮಾಡಿ ಎಲ್ಲರಿಗೂ ಕಳುಹಿಸಿದ್ದಾರೆ ಎಂದು ದೂರಿದ್ದಾರೆ.
ಊಟ ಕೊಡೋಕು ಗತಿ ಇಲ್ಲ, ಇನ್ನೆಲ್ಲಿಂದ 5 ಸಾವಿರ ಕೊಡ್ತಾರೆ ಎಂದ ಹೆಂಡತಿ..
ಅಂದಹಾಗೆ ಮನೆಯಲ್ಲಿ ನನಗೆ ಊಟಾನು ಸರಿಯಾಗಿ ಕೊಡುತ್ತಿರಲಿಲ್ಲ, ಮನೆಗೆ ಬೇಕಾದ ದಿನಸಿಗಳನ್ನು ಹಾಗೂ ಅಗತ್ಯ ಸಾಮಾನುಗಳನ್ನು ತಂದು ಕೊಡುತ್ತಿರಲಿಲ್ಲ. ಪರಿಸ್ಥಿತಿ ಹೀಗಿರುವಾಗ ಇನ್ನೆಲ್ಲಿಂದ ಅವರು ನನಗೆ ದಿನಕ್ಕೆ 5 ಸಾವಿರ ಕೊಡುತ್ತಾರೆ ಎಂದು ಬಿಂದುಶ್ರೀ ಪ್ರಶ್ನಿಸಿದ್ದಾರೆ. ಅಲ್ಲದೆ ಮಕ್ಕಳನ್ನು ಮಾಡಿಕೊಳ್ಳಿ ಎಂದು ಅವರ ಅಣ್ಣ ಹೇಳಿದ್ದಾರೆ, ಆದರೆ ನಾನು ಯಾವ ಧೈರ್ಯದ ಮೇಲೆ ಮಕ್ಕಳನ್ನು ಮಾಡಿಕೊಳ್ಳಲು ಸಾಧ್ಯ ಎನ್ನುವ ಮೂಲಕ ಅವರು ತಮ್ಮ ಸ್ಪಷ್ಟನೆ ನೀಡಿದ್ದಾರೆ. ಅಲ್ಲದೆ ಗಂಡನ ಮನೆಯವರು ನನಗೆ ದಿನವೂ ಕಿರುಕುಳ ನೀಡಿದ್ದಾರೆ. ಇಡೀ ಕುಟುಂಬದವರ ಟಾರ್ಚರ್ ತಾಳಲಾರದೆ ನಾನು ನಮ್ಮ ತಾಯಿಯ ಮನೆಗೆ ಹೋಗಿ ಬಿಟ್ಟಿದ್ದೆ, ಬಳಿಕ ಮತ್ತೆ ವಾಪಸ್ ಬಂದಿದೀನಿ. ಡೈವರ್ಸ್‌ನ್ನು ಇಬ್ಬರು ಒಪ್ಪಿಕೊಂಡು ಪಡೆಯೋಣ ಅಂದುಕೊಂಡಿದ್ದೆ, ಆದರೆ ನಮ್ಮ ತಂದೆ ಹಾಗೂ ತಾಯಿ ಕಷ್ಟ ಪಟ್ಟು 40 ಲಕ್ಷ ರೂಪಾಯಿ ಖರ್ಚು ಮಾಡಿ ಮದುವೆ ಮಾಡಿದ್ದಾರೆ. ಅದಕ್ಕೆ ನಾನು ಎಲ್ಲರಂತೆ ನಾನು ಕೇಳಿದ್ದೇನೆ ಎಂದು ಬಿಂದುಶ್ರೀ ಹೇಳಿದ್ದಾರೆ
ತಮಗೆ ಬೇಕಾದ ಹಾಗೆ ವಿಡಿಯೋ ಎಡಿಟ್ ಮಾಡಿದ್ದಾರೆ..
ಶ್ರೀಕಾಂತ್ ಅವರು , ನಾವಿಬ್ಬರೂ ಮದುವೆಯಾಗಿ ಎರಡು ವರ್ಷ ಆಗಿದೆ. ಆದರೆ, ಈಗ ನನ್ನ ಹೆಂಡತಿ ಸಂಸಾರ ಮಾಡಲು ನಿರಾಕರಿಸಿದ್ದಾಳೆ ಎಂದು ಸುಳ್ಳು ಹೇಳಿದ್ದಾರೆ. ತಮಗೆ ಹೇಗೆ ಬೇಕೋ ಹಾಗೆ ಆಡಿಯೋ, ವಿಡಿಯೋ ಎಡಿಟ್ ಮಾಡಿ ಮಾಧ್ಯಮಗಳಿಗೆ ಕೊಟ್ಟಿದ್ದಾರೆ ಎಂದು ಗಂಡನ ವಿರುದ್ಧ ಹೆಂಡತಿ ಬಿಂದುಶ್ರೀ ಆರೋಪಗಳ ಸುರಿಮಳೆ ಸುರಿಸಿದ್ದಾರೆ.
ಊಟಕ್ಕೆ ತಾಯಿ ಮನೆಗೆ ಹೋಗುತ್ತಿದ್ದ, ಗಂಡನ ಮನೆಯ ಕರಾಳತೆ ಬಿಚ್ಚಿಟ್ಟ ಹೆಂಡತಿ..
ಆದರೆ, ಸುಖ ಜೀವನದ ಕನಸಿನಿಂದ ಗಂಡನ ಮನೆಗೆ ಹೋದ ನಂತರ ನನ್ನನ್ನು ಸರಿಯಾಗಿ ನೋಡಿಕೊಂಡಿಲ್ಲ. ದಿನಕ್ಕೆ ಮೂರು ಹೊತ್ತು ಸರಿಯಾಗಿ ಊಟ ನೀಡುವುದಿಲ್ಲ. ಈ ಹಿನ್ನೆಲೆಯಲ್ಲಿ ನಾನು ನನ್ನ ತಾಯಿ ಮನೆಗೆ ಊಟಕ್ಕೆ ಹೋಗಿ ಬರುತ್ತಿದ್ದೆ. ಆದರೆ ನಾನು ಗಂಡನಿಗೆ ಯಾವುದೇ ಕಿರುಕುಳ ಕೊಟ್ಟಿಲ್ಲ. ನೀನು ಸರಿಯಾಗಿ ನಡೆದುಕೊಂಡರೆ ನಾನು ನಿನ್ನ ಜೊತೆ ಸಂಸಾರ ಮಾಡುತ್ತೇನೆ ಎಂದು ಅವರ ಬಳಿ ಹೇಳಿದ್ದೇನೆ. ಒಮ್ಮೆ ನಾನು ತಲೆ ಸುತ್ತಿ ಬಿದ್ದಿದ್ದೆ. ಇದೀಗ ನಾನು ದೂರು ಕೊಟ್ಟ ವೈಯಾಲಿಕಾವಲ್ ಪೊಲೀಸರು ಕರೆದರು ಬರುತ್ತಿಲ್ಲ ಎಂದು ಹೇಳಿದ್ದಾರೆ.
ಕೇವಲ ಅರ್ಧ ಲೀಟರ್ ಹಾಲು ಬಳಸಬೇಕು, ಶ್ರೀಕಾಂತ್ ಮನೆಯವರ ಕಂಜ್ಯೂಸ್‌ತನ ಬಯಲಿಗೆಳೆದ ಬಿಂದುಶ್ರೀ..
ನಮ್ಮ ಅತ್ತೆ ನನಗೆ ತುಂಬಾ ಕಾಟ ಕೊಡುತ್ತಿದ್ದರು. ನಾನು ಸಂಸಾರ ಮಾಡಲು ಹಣಕ್ಕೆ ಬೇಡಿಕೆ ಇಟ್ಟಿಲ್ಲ. ನಾನು ಮ್ಯೂಚುವಲ್ ಡೈವರ್ಸ್‌ಗೆ ರೆಡಿ ಇದ್ದೀನಿ. ಆದರೆ, ಈಗ ಅವರಿಗೆ ಠಾಣೆಗೆ ಕರೆದರೂ ಬರುತ್ತಿಲ್ಲ. ಇದಕ್ಕೆ ನಾನು ದಾಖಲೆಗಳನ್ನು ಕೂಡ ನೀಡುತ್ತೇನೆ ಎಂದು ಬಿಂದುಶ್ರೀ ತಿಳಿಸಿದ್ದಾರೆ. ಇನ್ನೂ ಮನೆಯನ್ನು ಮುನ್ನಡೆಸಿಕೊಂಡು ಸಾಗಲು ಇಡೀ ಮನೆಗೆ ಬರೀ ಅರ್ಧ ಲೀಟರ್ ಹಾಲನ್ನಷ್ಟೇ ಬಳಕೆ ಮಾಡಬೇಕಿತ್ತು. ಅಲ್ಲದೆ ಮನೆಯವರಿಗೆ ಇಂತಿಷ್ಟು ಅಂತ ಅಕ್ಕಿ ಕೊಡುತ್ತಾರೆ. ಅವರು ಹೇಳಿದ್ದಕ್ಕಿಂತ ಸ್ವಲ್ಪ ಅಕ್ಕಿ ಜಾಸ್ತಿ ಹಾಕಿ ಅಡುಗೆ ಮಾಡಿದರೆ ಬಾಯಿಗೆ ಬಂದಂತೆ ಬೈಯ್ಯುತ್ತಿದ್ದರು. ಹೀಗೆ ಮಾಡಿದರೆ ನಾನು ಹೇಗೆ ಅವರ ಮನೆಯಲ್ಲಿ ಜೀವನ ನಡೆಸುವುದು ಎಂದು ಪ್ರಶ್ನೆ ಮಾಡಿದ್ದಾರೆ.
ಅಂದಹಾಗೆ ಅವರ ಮನೆಯಲ್ಲಿ ತರಕಾರಿ ಬಳಸದೆ ಅಡುಗೆ ಮಾಡಬೇಕಿತ್ತು. ಇನ್ನೂ ಕೇವಲ ಎರಡೇ ಎರಡು ಟೊಮೆಟೊ ಹಾಕಿ ಸಾಂಬಾರು ಮಾಡಬೇಕು ಅಂತ ಹೇಳುತ್ತಾರೆ ಎನ್ನುವ ಮೂಲಕ, ತರಕಾರಿ ಇಲ್ಲದಿರುವ ಸಾಂಬಾರ ಫೋಟೋವನ್ನು ಕೂಡ ತೋರಿಸುವ ಮೂಲಕ ಬಿಂದುಶ್ರೀ ಗಂಡನ ಮನೆಯ ಕರಾಳ ಸತ್ಯವನ್ನು ಬಿಚ್ಚಿಟ್ಟಿದ್ದಾರೆ.
ಒಟ್ನಲ್ಲಿ.. ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಎಂಬ ಮಾತಿದೆ, ಆದರೆ ಈ ಶ್ರೀಕಾಂತ್ ಹಾಗೂ ಬಿಂದುಶ್ರೀ ದಂಪತಿಗಳ ಜಗಳ ಪೊಲೀಸ್ ಠಾಣೆ ತನಕ ಎನ್ನುವಂತಾಗಿದೆ. ಆದರೆ ಮದುವೆಯಾದ ಹೆಂಡತಿಯನ್ನು ಚೆನ್ನಾಗಿ, ಗೌರವದಿಂದ ಕಾಣುವುದು, ಅವಳ ಬೇಕು ಬೇಡಗಳನ್ನು ಪೊರೈಸುವುದು ಪ್ರತಿಯೊಬ್ಬ ಗಂಡನ ಜವಾಬ್ದಾರಿಯಾಗಿರುತ್ತದೆ. ಅಲ್ಲದೆ ಹೆಂಡತಿಯು ಅಷ್ಟೇ ಗಂಡನೊಂದಿಗೆ ಅನ್ಯೋನ್ಯವಾಗಿ ಬದುಕಬೇಕು, ಕುಟುಂಬದಲ್ಲಿನ ಎಲ್ಲ ಸದಸ್ಯರೊಂದಿಗೆ ಉತ್ತಮ ಬಾಂಧವ್ಯ ಹೊಂದಿರಬೇಕು. ಅಂದಹಾಗೆ ಗಂಡ ಹಾಗೂ ಹೆಂಡತಿ ಇಬ್ಬರ ನಡುವೆ ಯಾವುದೇ ಮನಸ್ತಾಪಗಳು, ಮುನಿಸು ಕೋಪ, ತಾಪಗಳು ಎದುರಾದರೆ ಅವರಿಬ್ಬರು ಪರಸ್ಪರ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬೇಕು. ಇನ್ನೂ ಗಂಡನ ಕುಟುಂಬದವರೂ ಸಹ, ತನ್ನ ತವರು ಮನೆಯನ್ನು ಬಿಟ್ಟು ಸೊಸೆಯಾಗಿ ಬಂದವಳನ್ನು ಮನೆಯ ಮಗಳಂತೆ ನೋಡಿಕೊಳ್ಳಬೇಕು ಅಂದಾಗ ಮಾತ್ರ ಈ ರೀತಿಯ ಘಟನೆಗಳಿಗೆ ಫುಲ್ ಸ್ಟಾಪ್ ಬೀಳಲು ಸಾಧ್ಯವಾಗುತ್ತದೆ. ಅದೇನೆ ಇರಲಿ.. ಇಷ್ಟ ಪಟ್ಟು ಮದುವೆಯಾಗಿ ಹೆಂಡತಿಯ ಮೇಲೆ ಆರೋಪಗಳನ್ನು ಮಾಡಿದ್ದಲ್ಲದೆ, ಸಂಸಾರದ ಖಾಸಗಿ ವಿಚಾರಗಳ ಗುಟ್ಟನ್ನು ರಟ್ಟು ಮಾಡಿರುವ ಪತಿ ಒಂದು ಕಡೆಯಾದರೆ, ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮದುವೆ ಮಾಡಿಕೊಂಡಿದ್ದರೂ, ಈ ಮನೆಯಲ್ಲಿ ಒಂದು ಹೊತ್ತಿನ ಊಟಕ್ಕೂ ಗತಿ ಇಲ್ಲ ಎಂದು ಗಂಡನ ಮನೆಯವರ ಮೇಲೆ ಗಂಭೀರ ಆರೋಪ ಹೊರಿಸಿರುವ ಸೊಸೆ ಇನ್ನೊಂದೆಡೆ. ಈ ಪ್ರಕರಣದ ಬಗ್ಗೆ ನಾವೆಲ್ಲ ನಮ್ಮದೆ ಆದ ರೀತಿಯಲ್ಲಿ ತರಹೇವಾರಿ ಚರ್ಚೆಗಳನ್ನು ಮಾಡಿದ್ದರೂ ಸಹ ಇವರಿಬ್ಬರಲ್ಲಿ ಯಾರದ್ದು ಸತ್ಯ, ಯಾರದ್ದು ಸುಳ್ಳು ಅನ್ನೋದು ತನಿಖೆಯಿಂದಷ್ಟೇ ಬಯಲಾಗಲಿದೆ.