Monday, December 23, 2024

Latest Posts

Indiansಗೆ ಉಕ್ರೇನ್ ಸಿಬ್ಬಂದಿ ಹೊಡೆಯುತ್ತಿದ್ದಾರೆ ವಿದ್ಯಾರ್ಥಿನಿ ಶಾಕಿಂಗ್ ಹೇಳಿಕೆ..!

- Advertisement -
ಉಕ್ರೇನ್​ನಲ್ಲಿ (Ukraine) ಭಾರತೀಯರ (Indias) ಮೇಲಾಗುತ್ತಿರುವ ದಬ್ಬಾಳಿಕೆ, ಕಿರುಕುಳದ ಕುರಿತು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಉಕ್ರೇನ್​ನಲ್ಲಿ ಸಿಲುಕಿರುವ ಭಾರತೀಯರ ಪರಿಸ್ಥಿತಿ ಬಗ್ಗೆ ಆಘಾತಕಾರಿ ಹೇಳಿಕೆ ನೀಡಿರುವ ಆಕೆ, ಉಕ್ರೇನ್ ಮೇಲೆ ದಾಳಿ ನಡೆಸಿರುವ ರಷ್ಯಾ (Russia) ಸೇನೆಯಿಂದ ಹಾಗೂ ಯುದ್ಧ ವಲಯದಿಂದ ಪಲಾಯನ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿಗಳನ್ನು ಉಕ್ರೇನ್ ಗಾರ್ಡ್​ಗಳು (guards of Ukraine) ಥಳಿಸುತ್ತಿದ್ದರು ಎಂದು ಹೇಳಿದ್ದಾರೆ. ಉಕ್ರೇನ್​ನ ಭದ್ರತಾ ಅಧಿಕಾರಿಯೊಬ್ಬರು ವಿದ್ಯಾರ್ಥಿಗೆ ಹೊಡೆಯುವ ವೀಡಿಯೊಗಳು ವೈರಲ್ ಆದ ಬೆನ್ನಲ್ಲೇ ಇವಾನೊ ನ್ಯಾಷನಲ್ ಮೆಡಿಕಲ್ ಯೂನಿವರ್ಸಿಟಿಯ ಮೂರನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿ ಶ್ರುತಿ ನಾಯಕ್ ಅವರ ಈ ಹೇಳಿಕೆಯು ಆತಂಕ ಮೂಡಿಸಿದೆ. ಏರ್ ಇಂಡಿಯಾ ವಿಮಾನದ ಮೂಲಕ ಉಕ್ರೇನ್​ನಿಂದ ಭಾರತಕ್ಕೆ ಮರಳಿದ ಶ್ರುತಿ ಗುನಾದಲ್ಲಿರುವ ತನ್ನ ಮನೆಗೆ ತಲುಪಿದ್ದಾರೆ. ಯುದ್ಧ ವಲಯದಿಂದ ಪಲಾಯನ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿಗಳಿಗೆ ಉಕ್ರೇನಿಯನ್ ಸಿಬ್ಬಂದಿ ಕಿರುಕುಳ ನೀಡುತ್ತಿದ್ದರು ಮತ್ತು ಅವರನ್ನು ಥಳಿಸಿದ್ದಾರೆ” ಎಂದು ಶ್ರುತಿ ನಾಯಕ್ ಹೇಳಿದ್ದಾರೆ. ಶ್ರುತಿ ನಾಯಕ್ ಅವರು ಫೆಬ್ರವರಿ 16ಕ್ಕೆ ಉಕ್ರೇನ್​ನಿಂದ ರಿಟರ್ನ್ ಟಿಕೆಟ್ ಬುಕ್ ಮಾಡಿದ್ದರು. ಆದರೆ ಆ ವಿಮಾನ ರದ್ದಾಗಿತ್ತು. ನಂತರ ಅವರು ಮಾರ್ಚ್ 3ಕ್ಕೆ ಟಿಕೆಟ್ ಕಾಯ್ದಿರಿಸಿದ್ದರು. ಆದರೆ ಅದು ಸಹ ರದ್ದುಗೊಂಡಿತ್ತು ಎಂದು ಅವರು ಹೇಳಿದ್ದಾರೆ. ಶ್ರುತಿ ನಾಯಕ್ ನಂತರ ಫೆಬ್ರವರಿ 26ರಂದು ರೊಮೇನಿಯಾ ತಲುಪಲು ಬಸ್‌ನಲ್ಲಿ 400 ಕಿಮೀ ಪ್ರಯಾಣಿಸಿದರು. ಅಲ್ಲಿನ ಸರ್ಕಾರವು ಭಾರತೀಯ ವಿದ್ಯಾರ್ಥಿಗಳಿಗೆ ಸಹಾಯ ಮಾಡಿದೆ ಎಂದು ಅವರು ಹೇಳಿದರು.

- Advertisement -

Latest Posts

Don't Miss