Tuesday, August 5, 2025

Latest Posts

ವೆರೈಟಿ ವೆರೈಟಿ ಸ್ವೀಟ್ ಕಾರ್ನ್ ತಿನ್ನಬೇಕಾ..? ಹಾಗಾದ್ರೆ ಬೆಂಗಳೂರಿನ ಈ ಫುಡ್ ಅಡ್ಡಾಗೆ ಬನ್ನಿ..

- Advertisement -

Bengaluru Food Adda: ಸ್ವೀಟ್ ಕಾರ್ನ್ ಅಂದ್ರೆ ಹಲವರಿಗೆ ಇಷ್ಟ. ಸ್ವೀಟ್ ಕಾರ್ನ್ ಇಷ್ಟವಾಗಲ್ಲ ಅಂತಾ ಹೇಳುವವರು ಕಡಿಮೆ. ಯಾಕಂದ್ರೆ ಇದು ಆರೋಗ್ಯಕ್ಕೂ ಒಳ್ಳೆಯದು. ರುಚಿಯೂ ಇರುತ್ತದೆ. ಇನ್ನೂ ನಿಮಗೆ ಕಾರ್ನ್‌ನಲ್ಲೇ ಹಲವು ವೆರೈಟಿ, ಟೇಸ್ಟಿಯಾಗಿರುವ ಕಾರ್ನ್ ಸಿಗತ್ತೆ ಅಂದ್ರೆ ಹೇಗಿರತ್ತೆ..? ಬೆಂಗಳೂರಿನಲ್ಲಿ ಹೀಗೊಂದು ಫುಡ್ ಅಡ್ಡಾ ಪರಿಚಯವನ್ನ ಇಂದು ನಾವು ಮಾಡಲಿದ್ದೇವೆ.

ಪ್ರತಿದಿನವೂ ಬೆಂಗಳೂರಿನ ಫುಡ್ ಅಡ್ಡಾವನ್ನ ಪರಿಚಯ ಮಾಡಿಕೊಡುವ ಕರ್ನಾಟಕ ಟಿವಿ, ಇಂದು ರಾಜಾಜಿನಗರದ ಸೆಕೆಂಡ್ ಬ್ಲಾಕ್‌ನಲ್ಲಿರುವ ಮಿಸ್ಟರ್ ಆ್ಯಂಡ್‌ ಮಿಸಸ್ ಕಾರ್ನ್ ಶಾಪ್‌ಗೆ ವಿಸಿಟ್ ಮಾಡಿತ್ತು. ಇಲ್ಲಿ ಸಿಗುವ ವೆರೈಟಿ ಕಾರ್ನ್‌ಗಳು ಸಖತ್ ಟೇಸ್ಟಿಯಾಗಿರತ್ತೆ. ಹಾಗಾಗಿ ಇಲ್ಲೇ ಹತ್ತಿರದಲ್ಲಿರುವ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹೆಚ್ಚಾಗಿ ಇಲ್ಲಿ ಬಂದು ಕಾರ್ನ್ ಟೇಸ್ಟ್ ಮಾಡತ್ತಾರೆ.

ಕ್ರಿಸ್ಪಿ ಮಸಾಲಾ ಕಾರ್ನ್, ಕ್ರಿಸ್ಪಿ ಪೆರಿ ಪೆರಿ ಮೇಯೋ, ಕ್ರಿಸ್ಪಿ ಪೆರಿ ಪೆರಿ ಕಾರ್ನ್ ಸೇರಿ ಇನ್ನೂ ಹಲವು ವೆರೈಟಿ ಕಾರ್ನ್ ಇಲ್ಲಿ ಸಿಗತ್ತೆ. ಈ ಬಗ್ಗೆ ಅನಿಸಿಕೆ ಹಂಚಿಕೊಂಡಿರುವ ಇಲ್ಲಿನ ಗ್ರಾಹಕರು, ಟೇಸ್ಟ್ ಚೆನ್ನಾಗಿರುತ್ತದೆ. ನಾವು ಇಲ್ಲಿ ಹಲವು ಬಾರಿ ಬಂದಿದ್ದೇವೆ. ಬರುತ್ತಿರುತ್ತೇವೆ ಎಂದಿದ್ದಾರೆ. ಅಲ್ಲದೇ ಇಲ್ಲಿಗೆ ಬರುವ ಗ್ರಾಹಕರ ಹಾಟ್ ಫೇವರಿಟ್ ಫುಡ್ ಅಂದ್ರೆ, ಕ್ರಿಸ್ಪಿ ಪೆರಿ ಪೆರಿ ಕಾರ್ನ್. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೋ ನೋಡಿ..

ಕಿರಾಣಿ ಸಾಮಾನು, ಹಣ್ಣು- ಹಂಪಲು ಖರೀದಿಗೆ ಹೋದಾಗ ಯಾವ ತಪ್ಪನ್ನು ಮಾಡಬಾರದು..?

ಬರೀ ಕೆಲವೇ ಕೆಲವು ಜನ ಜೀವನದಲ್ಲಿ ಸಫಲರಾಗಲು ಕಾರಣವೇನು..?

ನಿಮ್ಮ ಇಚ್ಛಾಶಕ್ತಿ (Will Power) ಹೆಚ್ಚಿಸುವುದು ಹೇಗೆ..?

- Advertisement -

Latest Posts

Don't Miss