Health Tips: ಬೇಸಿಗೆಗಾಲದಲ್ಲಿ ತ್ವಚೆ ಒಣಗಿದಂತಾಗುತ್ತದೆ. ಹಾಗಾಗಿ ಹಲವರು ಸನ್‌ಸ್ಕ್ರೀನ್ ಬಳಸುತ್ತಾರೆ. ಆದರೆ ಸನ್‌ಸ್ಕ್ರೀನ್ ಬರೀ ಬೇಸಿಗೆಯಲ್ಲಿ ಅಷ್ಟೇ ಬಳಸಬೇಕಾ..? ಬೇರೆ ದಿನಗಳಲ್ಲಿ ಬಳಸದಿದ್ದರೂ ಆದೀತಾ ಅನ್ನೋ ಪ್ರಶ್ನೆಗೆ ಡಾ.ದೀಪಿಕಾ ಉತ್ತರಿಸಿದ್ದಾರೆ.
ವೈದ್ಯರು ಹೇಳುವ ಪ್ರಕಾರ, ಸನ್‌ಸ್ಕ್ರೀನ್ ಎಲ್ಲಗಾಲದಲ್ಲೂ ಬಳಸಬಹುದು. ಏಕೆಂದರೆ, ದೇಹಕ್ಕೆ ಸನ್‌ಸ್ಕ್ರೀನ್ ಹಚ್ಚುವುದರಿಂದ ಇದು ಸೂರ್ಯನ ಶಾಖ ತ್ವಚೆಗೆ ತಾಕಿ, ತ್ವಚೆ ಹಾಳಾಗುವುದನ್ನು ತಡೆಯುತ್ತದೆ. ಸನ್‌ಸ್ಕ್ರೀನ್‌ನಲ್ಲಿ ಮೂರ್ನಾಲ್ಕು ವಿಧಗಳಿದೆ. ಜೆಲ್ ಬೇಸ್ಡ್, ಕ್ರೀಮ್ ಬೇಸ್ಡ್, ಲೋಶನ್ ಬೇಸ್ಡ್ ಸನ್‌ಸ್ಕ್ರೀನ್ ಹೀಗೆ ಹಲವು ಬಗೆಯ ಸನ್‌ಸ್ಕ್ರೀನ್ ಇರುತ್ತದೆ.
ಯಾರ ಮುಖ ಆಯ್ಲಿಯಾಗಿರುತ್ತದೆಯೋ ಅಂಥವರಿಗೆ ಜೆಲ್ ಬೇಸ್ಡ್ ಸನ್‌ಸ್ಕ್ರೀನ್ ಬಳಸಲಾಗುತ್ತದೆ. ತ್ವಚೆ ಒಣಗಿದಂತಿದ್ದರೆ, ಅಂಥವರಿಗೆ ಕ್ರೀಮ್ ಬೇಸ್ಡ್ ಸನ್‌ಸ್ಕ್ರೀನ್ ನೀಡಲಾಗುತ್ತದೆ. ಹೀಗೆ ತ್ವಚೆಗೆ ತಕ್ಕ ಹಾಗೆ ಸನ್‌ಸ್ಕ್ರೀನ್ ಬಳಸಬೇಕು. ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ವೀಡಿಯೋ ನೋಡಿ.