Siddapura News: ವಸತಿ ನಿಲಯದಲ್ಲಿ ನಡೆದಿದ್ದ ಆತ್ಮಹ*ತ್ಯೆ ಕೇಸ್‌ಗೆ ಟ್ವಿಸ್ಟ್: ಹಿಂದಿ ಶಿಕ್ಷಕನ ಬಂಧನ..

Uttara Kannada News: ಉತ್ತರ ಕನ್ನಡ: ಕಳೆದ ಕೆಲ ದಿನಗಳ ಹಿಂದೆ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕಾನಸೂರು ಇಂದಿರಾ ಗಾಂಧಿ ವಸತಿ ಶಾಲೆ ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕ“ಂಡಿದ್ದ. ಆದರೆ ಅವನ ಆತ್ಮಹತ್ಯೆಗೆ ಕಾರಣವೇನು ಎಂದು ತಿಳಿದಿರಲಿಲ್ಲ.

ಇದೀಗ ವಿದ್ಯಾರ್ಥಿಯ ತಾಯಿ ನೀಡಿದ ದೂರಿನ ಆಧಾರದ ಮೇಲೆ ಶಿಕ್ಷಕನನ್ನು ಬಂಧಿಸಲಾಗಿದೆ. ಕೆಲ ದಿನಗಳ ಹಿಂದೆ ಕಾನಸೂರು ವಸತಿ ಶಾಲೆಯಲ್ಲಿ ಗೋಕುಲ್ ಗೌಡ ಎಂಬ ವಿದ್ಯಾರ್ಥಿ ನೇಣಿಗೆ ಶರಣಾಗಿದ್ದ. ಈ ಬಗ್ಗೆ ವಿದ್ಯಾರ್ಥಿಯ ತಾಯಿ, ಶಾಲೆಯ ಹಿಂದಿ ಶಿಕ್ಷಕ ಅಬ್ಬು ತಲಹ ಎಂಬಾತನನ್ನು ಬಂಧಿಸಲಾಗಿದೆ.

ಈತ ಗೋಕುಲ್ ಗೌಡನ ಮೇಲೆ ಹಲ್ಲೆ ನಡೆಸಿದ್ದು, ಇದರಿಂದ ಬೇಸರಗ“ಂಡ ಗೋಕುಲ್ ನೇಣಿಗೆ ಶರಣಾಗಿದ್ದಾನೆಂದು ಆರೋಪಿಸಲಾಗಿದೆ. ಜೂನ್ 9ರಂದು ನಡೆದ ಪ್ರಕರಣದಲ್ಲಿ ಮೂವರು ಪೊಲೀಸ್ ಅಧಿಕಾರಿಗಳಿಂದ ತನಿಖೆ ನಡೆದಿದ್ದು,  ಕಾರವಾರ ಡಿ.ಎಸ್.ಪಿ.ಗಿರೀಶ್ ಶಿಕ್ಷಕನನ್ನು ಬಂಧಿಸಿದ್ದಾರೆ. ಸದ್ಯ ಅಬ್ಬು ತಲಹನನ್ನು ಪೋಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. ತನಿಖೆ ಬಳಿಕ ಸಂಪೂರ್ಣ ಮಾಹಿತಿ ಸಿಗಲಿದೆ.

About The Author