Tuesday, May 30, 2023

Latest Posts

‘ವಿಶ್ವಾಸಮತ ನಿರ್ಣಯ ಮಂಡನೆಯಾಗಿದೆ- ಈ ವಿಚಾರ ಸದನದ ಸ್ವತ್ತು’- ಸಿದ್ದರಾಮಯ್ಯ

- Advertisement -

ಬೆಂಗಳೂರು: ವಿಶ್ವಾಸಮತ ಯಾಚನೆ ಕುರಿತಂತೆ ಮೈತ್ರಿ ಸದಸ್ಯರು ಉದ್ದೇಶಪೂರ್ವಕವಾಗಿ ಮುಂದೂಡಿಕೆ ಕಾಲಹರಣ ಮಾಡುತ್ತಿದ್ದಾರೆ ಅನ್ನೋ ಬಿಜೆಪಿ ಆರೋಪಕ್ಕೆ ಪುಷ್ಠಿ ನೀಡುವಂತೆ ಸಿಎಲ್ ಪಿ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ವಿಶ್ವಾಸಮತ ಯಾಚನೆ ಮತಕ್ಕೆ ಹಾಕುವಂತೆ ಸದನದಲ್ಲಿ ಪದೇ ಪದೇ ಬಿಜೆಪಿ ಸದಸ್ಯರು ಒತ್ತಾಯ ಮಾಡುತ್ತಿದ್ದರೆ, ಇದಕ್ಕೆ ಕ್ಯಾರೆ ಎನ್ನದ ಮೈತ್ರಿ ಸದಸ್ಯರು ತಮ್ಮದೇ ರಾಗ ಹಾಡುತ್ತಿದ್ದಾರೆ. ನಮ್ಮ ಮೇಲಿರೋ ಆರೋಪಗಳ ಬಗ್ಗೆ ಚರ್ಚೆಯಾಗಬೇಕು, ನಾವು ರಾಜ್ಯದಲ್ಲಿ ಏನೇನು ಮಾಡಿದ್ದೇವೆ ಅನ್ನೋದನ್ನು ಜನರಿಗೆ ತಿಳಿಸಬೇಕು ಅಂತಿದ್ದ ಮೈತ್ರಿ ಸದಸ್ಯರು ಇದೀಗ ಅತೃಪ್ತ ಶಾಸಕರ ವಿಪ್ ಕುರಿತು ಇತ್ಯರ್ಥವಾಗಿಲ್ಲ, ಹೀಗಾಗಿ ನಾವು ವಿಶ್ವಾಸ ಮತ ಯಾಚಿಸೋ ಪ್ರಶ್ನೆಯೇ ಇಲ್ಲ ಅಂತ ಕಾರಣ ಹೇಳ್ತಿದ್ದಾರೆ.

ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಸಿಎಲ್ ಪಿ ನಾಯಕ ಸಿದ್ದರಾಮಯ್ಯ ತಮ್ಮ ಜಾಣತನವನ್ನ ಪ್ರದರ್ಶಿಸಿದ್ದಾರೆ. ಈಗಾಗಲೇ ವಿಶ್ವಾಸ ಮತ ಮಂಡನೆಯ ನಿರ್ಣಯವನ್ನು ಸದನದಲ್ಲಿ ಮಂಡಿಸಲಾಗಿದೆ. ಹಾಗಾಗಿ ಈ ವಿಚಾರ ಸದನದ ಸ್ವತ್ತು. ಸದನಕ್ಕೆ ಸಂಬಂಧಿಸಿದ ವಿಚಾರದಲ್ಲಿ ಮಾನ್ಯ ಸಭಾಧ್ಯಕ್ಷರೇ ಸರ್ವೋಚ್ಚರು. ಚರ್ಚೆ ಮತ್ತು ಅಭಿಪ್ರಾಯ ಮಂಡನೆ ಸೇರಿದಂತೆ ಇತರೆ ವಿಚಾರಗಳಲ್ಲಿ ಸಭಾಧ್ಯಕ್ಷರಿಗೆ ಸೂಚನೆ ನೀಡುವ ಅಧಿಕಾರ ರಾಜ್ಯಪಾಲರಿಗಿಲ್ಲ ಅಂತ ಟ್ವೀಟ್ ಮಾಡೋ ಮೂಲಕ ವಿಶ್ವಾಸಮತ ಯಾಚನೆ ಸದ್ಯಕ್ಕೆ ಮಾಡೋದಿಲ್ಲ ಅನ್ನೋದನ್ನು ರಾಜ್ಯಕ್ಕೆ ತಿಳಿಸಿದ್ದಾರೆ.

- Advertisement -

Latest Posts

Don't Miss