ಬೆಂಗಳೂರು : ಒಂದು ತಿಂಗಳಿಂದ ರಾಜ್ಯದಲ್ಲಿ ಹಿಜಾಬ್ ವಿವಾದ (Hijab Controversy) ಸುದ್ದಿಯಲ್ಲಿದೆ. ಈಗ ಈ ವಿವಾದ ರಾಜಕೀಯ ಸ್ವರೂಪವನ್ನು ಪಡೆದುಕೊಂಡಿದೆ. ಈ ಕುರಿತು ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ಹಿಜಾಬ್ ಎಂಬುದು ಅವರ ಧಾರ್ಮಿಕ ನಿಯಮ, ಎಷ್ಟೋ ವರ್ಷಗಳಿಂದ ನಡೆದುಕೊಂಡು ಬಂದಿದೆ. ಈಗ ಯಾಕ ವಿರೋಧ ಮಾಡುತ್ತಿದ್ದಾರೆ. ಕೇಸರಿ ಶಾಲು (Saffron shawl) ಮೊದಲಿಂದ ಹಾಕಿದ್ರಾ? ಎಂದು ಪ್ರಶ್ನೆ ಮಾಡಿದ್ದಾರೆ. ಇಂದು ಕುಂದಾಪುರದ ಕಾಲೇಜಿನಲ್ಲಿ ಪ್ರಿನ್ಸಿಪಾಲ್ (Principal at Kundapur College) ಗೇಟ್ ಹಾಕಿ ಜಾಬ್ ಧರಿಸಿರುವ ಮುಸ್ಲಿಂ ಹೆಣ್ಣು ಮಕ್ಕಳನ್ನು ಕಾಲೇಜಿಗೆ ಬರದಂತೆ ತಡೆದಿದ್ದಾರೆ. ಇದು ಸರಿಯೇ ಎಂದು ಪ್ರಶ್ನಿಸಿದ್ದಾರೆ. ಇನ್ನು ವಿದ್ಯಾರ್ಥಿಗಳಿಗೆ ಕೇಸರಿ ಶಾಲು ಧರಿಸಲು ಬಿಜೆಪಿಯವರೇ ಬೇಕೆಂದು ಮಾಡಿದ್ದಾರೆ, ಅವನ್ಯಾರೋ ಶಾಸಕ ರಘುಪತಿ ಭಟ್ (MLA Raghupathi Bhat) ಹೇಳಿದ್ದಾನೆ ಎಂದು ಈ ರೀತಿ ಮಾಡಿದ್ದಾರೆ.ಈ ಪ್ರಕರಣದ ಬಗ್ಗೆ ಕೋರ್ಟ್ ನಲ್ಲಿ ವಿಚಾರಣೆಯಲ್ಲಿದೆ. ನಾನು ಲಾಯರ್, ಪ್ರತಿಪಕ್ಷ ನಾಯಕನಾಗಿಯೇ ಹೇಳ್ತಿದ್ದೇನೆ. ಕೇಸರಿ ಶಾಲು ಹಾಕೋದು ಯಾವಾಗಿಂದ ಬಂತು? ನಿನ್ನೆ, ಮೊನ್ನೆಯಿಂದ ಬಂದಿರೋದು. ಹಿಜಾಬ್ ಹಿಂದಿನಿಂದಲೂ ಇದೆ ಎಂದು ಹೇಳಿದರು.