ಮೇಕೆದಾಟು ಪಾದಯಾತ್ರೆ (Mekedatu) ಕೊರೊನಾ (corona) ಕಾರಣದಿಂದ ಅರ್ಧಕ್ಕೆ ನಿಂತಿತ್ತು. ಈಗ ಕಾಂಗ್ರೆಸ್ (Congress) ನಾಯಕರ ಪಾದಯಾತ್ರೆಯನ್ನು ಮತ್ತೆ ನಿನ್ನೆಯಿಂದ ಆರಂಭಿಸಿದ್ದಾರೆ. ಜನವರಿ 9 ರಿಂದ ಶುರುವಾಗಿದ್ದ ಮೇಕೆದಾಟು ಪಾದಯಾತ್ರೆ ಅರ್ಧಕ್ಕೆ ನಿಲ್ಲಿಸಲಾಗಿತ್ತು. ರಾಮನಗರದಲ್ಲಿ ನಿಂತಿದ್ದ ಮೇಕೆದಾಟು ಪಾದಯಾತ್ರೆಗೆ ನಿನ್ನೆ ಚಾಲನೆ ಸಿಕ್ಕಿದೆ. 2ನೇ ಹಂತದ ಪಾದಯಾತ್ರೆ ಮಾರ್ಚ್ 3ನೇ ತಾರೀಕು ಬೆಂಗಳೂರಿನ ನ್ಯಾಷನಲ್ ಕಾಲೇಜ್ ಮೈದಾನ (National College grounds) ತಲುಪಲಿದೆ. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಈ ಪಾದಯಾತ್ರೆ ಸಾಗುತ್ತಿದೆ. ಮಾಧ್ಯಮದವರು ಕೆ.ಎಸ್ ಈಶ್ವರಪ್ಪನವರ (KS Eshwarappanavar) ಬಗ್ಗೆ ಕೇಳಿದಾಗ ಸಚಿವ ಕೆ.ಎಸ್ ಈಶ್ವರಪ್ಪನವರ ಬಗ್ಗೆ ಹೇಳಬೇಡಿ, ಅವರು ಸಾರ್ವಜನಿಕ ಜೀವನದಲ್ಲಿ ಇರೋದಕ್ಕೆ ನಾಲಾಯಕ್ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಪಾದಯಾತ್ರೆ ಐದು ದಿನಗಳ ಕಾಲ ನಿರಂತರವಾಗಿ ನಡೆಯುತ್ತದೆ. ನಾಳೆ ಬೆಂಗಳೂರಿನಲ್ಲಿ ನಡೆಯುತ್ತದೆ. ಬಿಬಿಎಂಪಿ (BBMP) ಕಮಿಷನರ್ ಗೆ ಪಾದಯಾತ್ರೆ ಬಗ್ಗೆ ತಿಳಿಸಿದ್ದೇವೆ. ಯಾವುದೆ ಹೋರಾಟ ಮಾಡಿದಾಗ ಪ್ರಚಾರ ಆಗುತ್ತದೆ. ಬಿಜೆಪಿಯವರು ಸುಳ್ಳು ಹೇಳಿ ಜನರ ದಾರಿ ತಪ್ಪಿಸುತ್ತಿದ್ದಾರೆ. ನಾವು ನಿಜ ಹೇಳುತ್ತಿದ್ದೇವೆ. ಕೂಡಲೇ ಯೋಜನೆಗೆ ಕೇಂದ್ರಸರ್ಕಾರ ಅನುಮತಿ ನೀಡಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಈಶ್ವರಪ್ಪ ವಿರುದ್ಧ ಗರಂ ಆಗಿದ್ದಾರೆ. ಇನ್ನೂ ಡಿ.ಕೆ.ಶಿವಕುಮಾರ್ (DK Shivakumar) ಮಾತನಾಡಿ ಕೆ.ಎಸ್.ಈಶ್ವರಪ್ಪನಿಗೆ ಸ್ವಲ್ಪ ತೊಂದರೆ ಇದೆ. ಮೆಂಟಲ್ ಆಸ್ಪತ್ರೆಗೆ ಸೇರಿಸಲು ಬೆಡ್ ಹುಡುಕುತ್ತಿದ್ದೇನೆ. ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆ ಚೆನ್ನಾಗಿ ಇದೆ. ಅದು ಇಲ್ಲ ಅಂದರೆ ಬೇರೆ ಆಸ್ಪತ್ರೆಗೆ ಸೇರಿಸೋಣ ಅಂತ ಬಿಡದಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದ್ದಾರೆ.




