ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ವೀಡಿಯೋ ಅಪ್ಲೋಡ್ ಮಾಡಿರುವ ಗಾಯಕ ಸೋನುನಿಗಮ್ ಸುಶಾಂತ್ ಸಿಂಗ್ ಸಾವಿನ ಬಗ್ಗೆ ಶಾಕಿಂಗ್ ನ್ಯೂಸ್ ನೀಡಿದ್ದಾರೆ.
ಇವತ್ತು ಸುಶಾಂತ್ ಸಿಂಗ್ ಸತ್ತಿದ್ದಾನೆ. ನಾಳೆ ಯಾವುದಾದರೂ ಗಾಯಕ, ಕಂಪೋಸರ್ ಸಾವಿನ ಬಗ್ಗೆಯೂ ನೀವೂ ಕೇಳಬಹುದು. ಅಷ್ಟು ಪಾರ್ಷಿಯಾಲಿಟಿ ನಡೆಯುತ್ತಿದೆ ಎಂದು ಸೋನು ನಿಗಮ್ ಮತ್ತೊಂದು ಕರಾಳ ಸತ್ಯ ಬಯಲಿಗೆಳೆದಿದ್ದಾರೆ.
ಬಾಲಿವುಡ್‌ನಲ್ಲಿ ಮ್ಯೂಸಿಕ್ ಇಂಡಸ್ಟ್ರಿಯಲ್ಲೂ ದೊಡ್ಡ ಮಾಫಿಯಾ ನಡೆಯುತ್ತಿದೆ. ಎರಡು ಮ್ಯೂಸಿಕ್ ಕಂಪನಿಯವರು ಈ ಮಾಫಿಯಾ ಆಳುತ್ತಿದ್ದಾರೆ ಎಂದು ಸೋನುನಿಗಮ್ ಆರೋಪಿಸಿದ್ದಾರೆ.
ಈಗಾಗಲೇ ಹಲವು ಯುವ ಗಾಯಕರು ಈ ಬಗ್ಗೆ ಯೋಚಿಸಿ, ಖಿನ್ನತೆಗೆ ಒಳಗಾಗಿದ್ದಾರೆ. ನನ್ನ ಬಳಿ ಬಂದು ತಮ್ಮ ನೋವು ತೋಡಿಕೊಳ್ಳುತ್ತಿದ್ದಾರೆ. ಒಂದು ಹಾಡನ್ನ 9 ಗಾಯಕರ ಬಳಿ ಹಾಡಿಸುತ್ತಾರೆ. ಫಿಲ್ಮ್ ಇಂಡಸ್ಟ್ರಿಯವರ ಮಾತು ಕೇಳಿ ಯುವಗಾಯಕರ ಭವಿಷ್ಯ ಹಾಳು ಮಾಡುತ್ತಿದ್ದಾರೆ ಎಂದು ಸೋನು ನಿಗಮ್ ಆರೋಪಿಸಿದ್ದಾರೆ.
ಅಷ್ಟೇ ಅಲ್ಲದೇ ಬಾಲಿವುಡ್‌ನ ಅತ್ಯುನ್ನತ ಗಾಯಕ ಅರ್ಜಿತ್ ಸಿಂಗ್‌ನನ್ನು ಕೂಡ ದೊಡ್ಡ ಸ್ಟಾರಗಳ ಮಾತು ಕೇಳಿ ಕಡೆಗಣಿಸಲಾಗುತ್ತಿದೆ. ಹೀಗೆ ಮಾಡುವುದರಿಂದ ಉತ್ತಮ ಗಾಯಕರನ್ನ ಬಾಲಿವುಡ್ ಕಳೆದುಕೊಳ್ಳುತ್ತದೆ. ಅರ್ಹತೆ ಇರುವವರಿಗೆ ಅವಕಾಶ ನೀಡಿ ಎಂದು ಸೋನುನಿಗಮ್ ಮನವಿ ಮಾಡಿದ್ದಾರೆ.