Monday, December 23, 2024

Latest Posts

ಶಿರಸಿಯಲ್ಲಿ ನ.೨೮ ಕ್ಕೆ ಅಪ್ಪು ನುಡಿ ನಮನ

- Advertisement -

ಶಿರಸಿ : ಕದಂಬ ಕಲಾ ವೇದಿಕೆ ಶಿರಸಿ, ಶಿರಸಿ ಕರೋಕೆ ಸ್ಟುಡಿಯೊ ಹಾಗೂ ಅರುಣೋದಯ ಟ್ರಸ್ಟ್ ಸಂಯುಕ್ತ ಆಶ್ರದಲ್ಲಿ ನ.೨೮ ರಂದು ಸಂಜೆ ೫ ಘಂಟೆಯಿAದ ನಗರದ ಹೊಟೆಲ್ ಸುಪ್ರಿಯಾ ಇಂಟರ್ನ್ಯಾಷನಲ್‌ನ ಸಭಾಭವನದಲ್ಲಿ ಮರಣೋತ್ತರ ಕರ್ನಾಟಕ ರತ್ನ ಗೌರವಕ್ಕೆ ಭಾಜನರಾದ ಮರೆಯಲಾಗದ ನಟ ಪುನೀತ್ ರಾಜ್ ಕುಮಾರ್ ಅವರಿಗೆ ನಮನ, `ಕರ್ನಾಟಕ ರತ್ನ ನುಡಿ ನಮನ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ನುಡಿನಮನವನ್ನು ಚಿಂತಕ ಪ್ರೊ.ಕೆ.ಎನ್.ಹೊಸ್ಮನಿ ಹಾಗೂ ಪತ್ರಕರ್ತ ರಾಘವೇಂದ್ರ ಬೆಟಕೊಪ್ಪ ಜಂಟಿಯಾಗಿ ಉದ್ಘಾಟಿಸುವರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೋಟರಿ ಸತೀಶ್ ನಾಯ್ಕ ವಹಿಸುವರು. ಅತಿಥಿಗಳಾಗಿ ಶಿರಸಿ ಶಾಮಿಯಾನ ಡೆಕೋರೇಶನ್ ಸಂಘದ ಅಧ್ಯಕ್ಷ ಕೃಷ್ಣ ಗುಡಿಗಾರ್ ಹಾಗೂ ಕರೋಕೆ ಸ್ಟುಡಿಯೋ, ಕದಂಬ ವೇದಿಕೆಯ ನಿರ್ದೇಶಕಿ ಗೀತಾ ಸಂತೋಷ್ ಭಾಗವಹಿಸಲಿದ್ದಾರೆ. ನಂತರ ಕರೋಕೆ ಕ್ಲಬ್ ಹಾಗೂ ಕದಂಬ ಕಲಾ ವೇದಿಕೆಯ ಗಾಯಕರಿಂದ ಗಾನ ನಮನ ನಡೆಯಲಿದೆ ಎಂದು ಸಂಘಟಕ ಗಾಯಕ ಶಿರಸಿ ರತ್ನಾಕರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Latest Posts

Don't Miss