Friday, October 17, 2025

Latest Posts

ಪ್ರಜ್ವಲ್‌ಗೆ ಎಸ್‌ಐಟಿ ಕಸ್ಟಡಿ ಅಂತ್ಯ: ಪರಪ್ಪನ ಅಗ್ರಹಾರಕ್ಕೆ ಮಾಜಿ ಸಂಸದ ಶಿಫ್ಟ್

- Advertisement -

Political News: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ. ಇಷ್ಟು ದಿನ ಎಸ್‌ಐಟಿ ವಿಟಾರಣೆ ನಡೆಸಿತ್ತು. ಇಷ್ಟು ದಿನ ಪ್ರಜ್ವಲ್ ಎಸ್‌ಐಟಿ ಕಸ್ಟಡಿಯಲ್ಲಿದ್ದು, ಹಾಸನಕ್ಕೆ ಹೋಗಿ, ಅಧಿಕಾರಿಗಳು ವಿಚಾರಣೆ ನಡೆಸಿದ್ದು, ಅಲ್ಲದೇ, ಸ್ಥಳ ಮಹಜರು ಕೂಡ ಮಾಡಿದ್ದರು. ಇದೀಗ ಎಸ್‌ಐಟಿ ಕಸ್ಟಡಿ ಅಂತ್ಯವಾಗಿದ್ದು, ಪ್ರಜ್ವಲ್‌ರನ್ನು ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಲಾಗಿದೆ.

ಪ್ರಕರಣ ಬೆಳಕಿಗೆ ಬಂದ ಸಂದರ್ಭದಲ್ಲಿ ಪ್ರಜ್ವಲ್ ವಿದೇಶ ಪ್ರವಾಸದಲ್ಲಿದ್ದರು. 1 ತಿಂಗಳ ಕಾಲ ಹಲವು ಬಾರಿ, ಭಾರತಕ್ಕೆ ಬರಲು ಟಿಕೇಟ್ ಬುಕ್ ಮಾಡಿ, ಬಳಿಕ ಕ್ಯಾನ್ಸಲ್ ಮಾಡಿದ್ದರು. 1 ತಿಂಗಳ ಬಳಿಕ ವೀಡಿಯೋ ಹರಿಬಿಟ್ಟಿದ್ದ ಪ್ರಜ್ವಲ್, ಪ್ರಕರಣದ ಆರೋಪ ಬಂದದ್ದು ಕೇಳಿ, ನಾನು ಡಿಪ್ರೆಶನ್‌ಗೆ ಹೋಗಿದ್ದೆ. ಇಷ್ಟು ದಿನ ಭಾರತಕ್ಕೆ ಬರದೇ ಇದ್ದುದ್ದಕ್ಕೆ ಕ್ಷಮಿಸಿ, ನಾನು ಇನ್ನು ಕೆಲ ದಿನಗಳಲ್ಲೇ ಭಾರತಕ್ಕೆ ಬರುತ್ತೇನೆ ಎಂದು ಹೇಳಿದ್ದರು.

ಅದರಂತೆ ಪ್ರಜ್ವಲ್ ಭಾರತಕ್ಕೆ ಬಂದು, ಎಸ್‌ಐಟಿ ವಿಚಾರಣೆಗೆ ಹಾಜರಾಗಿದ್ದರು. ಈ ವೇಳೆ ಕೋರ್ಟ್ ಗೆ ಪ್ರಜ್ವಲ್‌ರನ್ನು ಹಾಜರುಪಡಿಸಲಾಗಿದ್ದು, ಪ್ರಜ್ವಲ್‌ರನ್ನು 14 ದಿನ ಎಸ್‌ಐಟಿ ಕಸ್ಟಡಿಯಲ್ಲಿಡಬೇಕು ಎಂದು ಕೋರ್ಟ್ ಆದೇಶ ನೀಡಿದ್ದು, ಇದೀಗ ಕಸ್ಟಡಿ ಅಂತ್ಯವಾಗಿದ್ದು, ಪರಪ್ಪನ ಅಗ್ರಹಾರಕ್ಕೆ ಪ್ರಜ್ವಲ್ ಅವರನ್ನು ಶಿಫ್ಟ್ ಮಾಡಲಾಗಿದೆ. ಮತ್ತೆ ಎಸ್‌ಐಟಿ ವಿಚಾರಣೆಗಾಗಿ ಪ್ರಜ್ವಲ್ ಅವರನ್ನು ಕಸ್ಟಡಿಗೆ ಪಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.

Political News: ಕಾರ್ಯಕರ್ತರ ಮುಂದೆ ಭಾವುಕರಾದ ಡಿ.ಕೆ.ಸುರೇಶ್

Sandalwood News: ಯುವ ರಾಜ್​ಕುಮಾರ್ ವಿಚ್ಛೇದನ- ಪತ್ನಿ ಶ್ರೀದೇವಿ ಸ್ಫೋಟಕ ಹೇಳಿಕೆ

ನಾವು ಸೋತರೂ ಒಳ್ಳೆ ಫೈಟ್ ಕೊಟ್ಟಿದ್ದೇವೆ: ಕಾಂಗ್ರೆಸ್ ಸೋಲಿನ ಬಗ್ಗೆ ಸಂತೋಷ್ ಲಾಡ್ ಮಾತು

- Advertisement -

Latest Posts

Don't Miss