Thursday, May 1, 2025

Latest Posts

ಬಾಹ್ಯಾಕಾಶ ಬಂಧನದಿಂದ ಭೂಮಿಗೆ ಬಂದಿಳಿದ ಸೀತೆ ಸುನಿತೆ : ಭೂಮಿಗೆ ಹತ್ತಿರವಿಲ್ಲದಿದ್ದ ಆ ದಿನಗಳು

- Advertisement -

Special Story: ಕೇವಲ 9 ದಿನಗಳ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದ್ದ ಬುಚ್‌ ವಿಲ್ಮೋರ್‌ ಹಾಗೂ ಭಾರತೀಯ ಮೂಲದ ಗಗನಯಾತ್ರಿ ಸುನಿತಾ ವಿಲಿಯಮ್ಸ್‌ ಕೊನೆಗೂ ಸೇಫ್‌ ಆಗಿ ಭೂಮಿಗೆ ಬಂದಿಳಿದಿದ್ದಾರೆ. ಸುದೀರ್ಘ 9 ತಿಂಗಳುಗಳ ಕಾಲ ಬಾಹ್ಯಾಕಾಶ ಬಂಧನದಲ್ಲಿದ್ದ ಗಗನಯಾತ್ರಿಗಳಿಗೆ ಕೊನೆಗೂ ಮುಕ್ತಿ ಸಿಕ್ಕಿದೆ. ಜೀವದ ಹಂಗನ್ನೇ ತೊರೆದು ನನ್ನವರು, ತನ್ನವರು ಎನ್ನದೆ ಭೂಮಿಯಿಂದ ದೂರ ಉಳಿದಿದ್ದವರು ಅನೇಕ ಸಂಕಷ್ಟಗಳನ್ನು ಎದುರಿಸಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಅವರ ಆಗಮನದಿಂದ ಇಡೀ ವಿಶ್ವವೇ ಸಂತಸದಲ್ಲಿದೆ. ಅಷ್ಟಕ್ಕೂ ಸುನಿತಾ ವಿಲಿಯಮ್ಸ್‌ ಇಷ್ಟೊಂದು ದಿನಗಳ ಕಾಲ ಬಾಹ್ಯಾಕಾಶ ನಿಲ್ದಾಣದಲ್ಲಿ ಉಳಿಯಲು ಏನು ಕಾರಣ..? ಅಲ್ಲಿದ್ದಾಗ ಅವರು ಹೇಗೆ ಕಾಲ ಕಳೆಯುತ್ತಿದ್ದರು..? ಇನ್ನೂ ಭೂಮಿಗೆ ಬಂದ ಬಳಿಕ ಅವರಿಗೆ ಯಾವ್ಯಾವ ಸಮಸ್ಯೆಗಳು ಕಾಡಲಿವೆ..? ಬಾಹ್ಯಾಕಾಶ ಯಾಣ ಮುಗಿಸಿದ ಬಳಿಕ ಈಗ ಇವರ ಜೀವನ ಹೇಗಿರಲಿದೆ ಅನೋ ಇನ್ನಷ್ಟು ಕುತೂಹಲಕಾರಿ ಮಾಹಿತಿ ಇಲ್ಲಿದೆ ನೋಡಿ.

ಕೇವಲ ಬೆರಳೆಣಿಕೆ ದಿನಗಳಷ್ಟು ಅಧ್ಯಯನಕ್ಕೆಂದು ತೆರಳಿದ್ದ ಸುನಿತಾ ವಿಲಿಯಮ್ಸ್‌ ಹಾಗೂ ತಂಡ ಅಂದುಕೊಂಡಂತೆ ಬಾಹ್ಯಾಕಾಶ ನಿಲ್ದಾಣದಿಂದ ಭೂಮಿಗೆ ಬಂದಿಳಿದಿದ್ದಾರೆ. ಕಳೆದ 9 ತಿಂಗಳಿನಿಂದ ಬಾಹ್ಯಾಕಾಶ ನಿಲ್ದಾಣದಲ್ಲೇ ಸಿಲುಕಿದ್ದ ಗಗನಯಾತ್ರಿ ಸಾಕಷ್ಟು ಸಂಕಟಗಳನ್ನು ಅನುಭವಿಸಿದ್ದರು. ಅಲ್ದೆ ತಮ್ಮನ್ನು ಹೊತ್ತು ಹೋಗಿದ್ದ ಬೋಯಿಂಗ್‌ ಸ್ಟಾರ್‌ ಲೈನರ್‌ ನೌಕೆಯಲ್ಲಿ ಉಂಟಾಗಿದ್ದ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿತ್ತು. ನೌಕೆಯಲ್ಲಿನ ಹೀಲಿಯಂ ಸೋರಿಕೆಯು ದೊಡ್ಡ ಸವಾಲಾಗಿ ಹೋಗಿತ್ತು. ಅದರಲ್ಲಿನ 4 ಕ್ಲಸ್ಟರ್‌ಗಳು ಸರಿಯಾಗಿ ಕೆಲಸಮಾಡುತ್ತಿರಲಿಲ್ಲ. ಇನ್ನೂ ಮುಖ್ಯವಾಗಿ ಈ ಸಮಸ್ಯೆಗೆ ಪರಿಹಾರ ಹುಡುಕುವಲ್ಲಿ ಬೋಯಿಂಗ್‌ ಸ್ಟಾರ್‌ ಲೈನರ್‌ ಸಂಸ್ಥೆಯು ಕೂಡ ಸಫಲತೆ ಕಂಡಿರಲಿಲ್ಲ. ಆದರೆ ಅಂತಿಮವಾಗಿ
ಸುನಿತಾ ವಿಲಿಯಮ್ಸ್‌ ಅವರನ್ನ ಅಲ್ಲಿಯೇ ಬಿಟ್ಟು ಸ್ಟಾರ್‌ ಲೈನರ್‌ ನೌಕೆಯು ವಾಪಸ್ಸಾಗಿತ್ತು. ಗಟ್ಟಿ ಧೈರ್ಯ ಮಾಡಿ ಅವರು ಅಲ್ಲಿಯೇ ಉಳಿಯಲು ನಿರ್ಧರಿಸಿ ಬಿಟ್ಟಿದ್ದರು. ಇನ್ನೂ ಈ ನೌಕೆಯು ಕೈಕೊಟ್ಟಿದ್ದು, ಅಮೆರಿಕದ ಬಾಹ್ಯಾಕಾಶ ಸಂಸ್ಥೆಯಾಗಿರುವ ನಾಸಾಗೆ ತೀವ್ರ ಹಿನ್ನಡೆಯೂ ಆಗುವಂತೆ ಮಾಡಿತ್ತು.

ಇಬ್ಬರೂ ಗಗನಯಾತ್ರಿಗಳು ಕಳೆದ ಜೂನ್‌ ತಿಂಗಳಲ್ಲಿ ಬೋಯಿಂಗ್‌ ಸ್ಟಾರ್‌ ಲೈನರ್‌ ಮೂಲಕ ಬಾಹ್ಯಾಕಾಶವನ್ನು ತಲುಪಿದ್ದರು. ಆದರೆ ಅದರಲ್ಲಿನ ತಾಂತ್ರಿಕ ತೊಂದರೆಯಿಂದಾಗಿ ಅವರು ಭೂಮಿಗೆ ವಾಪಸ್‌ ಆಗಲು ಸಾಧ್ಯವಾಗಿರಲಿಲ್ಲ. ಅಂದಹಾಗೆ 284 ದಿನಗಳನ್ನು ಬಾಹ್ಯಾಕಾಶದಲ್ಲಿಯೇ ಕಳೆದಿರುವ ಅವರು ಕೇವಲ 8 ದಿನಗಳಲ್ಲಿ ಭೂಮಿಗೆ ಮರಳಬೇಕಾಗಿತ್ತು. ಆದರೆ 9 ತಿಂಗಳು ಅಲ್ಲೇ ಸಿಲುಕಿಕೊಳ್ಳುವಂತಾಗಿತ್ತು. ಸಾಮಾನ್ಯವಾಗಿ ಭೂಮಿಯ ಮೇಲೇನೆ ನಮಗೆ ಪ್ರಯಾಣದಲ್ಲಿ ತೊಂದರೆಗಳಾದ್ರೆ ನಾವು ನೀರಿನಿಂದ ತೆಗೆದ ಮೀನಿನಂತೆ ಚಟಪಡಿಸುತ್ತೇವೆ. ಯಾವಾಗ ಈ ಸಮಸ್ಯೆ ಸರಿ ಆಗುತ್ತದೋ.. ಅಥವಾ ಇಲ್ವೋ..? ಅನ್ನೋ ಚಿಂತೆಯಲ್ಲಿಯೇ ಅರ್ಧ ಸೋತು ಹೋಗಿರುತ್ತೇವೆ. ಅಂಥದ್ರಲ್ಲಿ ಎಲ್ಲಿನ ಭೂಮಿ, ಇನ್ನೆಲ್ಲಿಯ ಬಾಹ್ಯಾಕಾಶ ನಿಲ್ದಾಣ.. ಯಾರೊಬ್ಬರೂ ಸಹಾಯಕ್ಕೆ ಬರಲಾರರು, ಮೊದಲನೆಯದಾಗಿ ಅಲ್ಲಿ ಯಾರೂ ಇಲ್ಲದೇ ಇರುವುದು ಕೇವಲ ಒಬ್ಬಂಟಿಯ ಜೀವನ ಊಹಿಸಿಕೊಳ್ಳಲು ಕಷ್ಟವೇ.. ಆದರೂ ಕೈಕೊಟ್ಟ ನೌಕೆಯ ಕಡೆ ಗಮನ ಹರಿಸದೆ ಸುನಿತಾ ವಿಲಿಯಮ್ಸ್‌ ಈ ಎಲ್ಲ ಟಾಸ್ಕ್‌ಗಳನ್ನ ಅತ್ಯಂತ ಯಶಸ್ವಿಯಾಗಿಯೇ ನಿಭಾಯಿಸಿ ಸೈ ಎನ್ನಿಸಿಕೊಂಡ ಗಟ್ಟಿಗಿತ್ತಿಯಾಗಿದ್ದಾರೆ.

ಆದರೆ ಮೊದಲ ಬಾರಿಗೆ ಸ್ಪೇಸ್‌ ಜಗತ್ತಿಗೆ ಕಾಲಿಟ್ಟಿದ್ದ ಬೋಯಿಂಗ್ ಸ್ಟಾರ್‌ ಲೈನರ್‌‌ ವಿಫಲತೆಯನ್ನ ಕಂಡು ನಾಸಾ ಕೂಡ ಶಾಕ್‌ಗೆ ಒಳಗಾಗಿತ್ತು. ಅಲ್ದೆ ಸುನಿತಾ ವಿಲಿಯಮ್ಸ್‌ ಅವರನ್ನ ಭೂಮಿಗೆ ಕರೆಯಿಸಿಕೊಳ್ಳುವ ಹೊಣೆಗಾರಿಕೆಯು ನಾಸಾ ಮೇಲಿತ್ತು. ಹೀಗಾಗಿ ಅಮೆರಿಕದ ಎಲಾನ್‌ ಮಸ್ಕ್‌ ನೇತೃತ್ವದ ಸ್ಪೇಸ್‌ ಎಕ್ಸ್‌ನ ಜೊತೆಯಾಗಿ ನಾಸಾ ಬಾಹ್ಯಾಕಾಶ ನಿಲ್ದಾಣದಲ್ಲಿ ತ್ರಿಶಂಕು ಸ್ಥಿತಿಯಲ್ಲಿದ್ದ ಸುನಿತಾ ವಿಲಿಯಮ್ಸ್‌ ಅವರನ್ನ ಧರೆಗೆ ಕರೆತರಲು ಜಂಟಿ ಯೋಜನೆ ರೂಪಿಸಲಾಗಿತ್ತು. ಆದ್ರೆ ಇದಕ್ಕೆ ಸ್ವಲ್ಪ ದಿನಗಳ ಕಾಲಾವಕಾಶ ಬೇಕು ಅನ್ನೋ ಮಾತಗಳನ್ನ ಮಸ್ಕ್‌ ಈ ಹಿಂದೆ ಹೇಳಿದ್ದರು. ಅದರೆ ಅಂತಿಮವಾಗಿ ಮಾರ್ಚ್‌ 15ರಂದು ಕೆನಡಾದ ಫಾಲ್ಕನ್‌ 9 ರಾಕೆಟನ್ನೂ ಸಹ ಉಡಾವಣೆ ಮಾಡಲಾಗಿತ್ತು. ಅಲ್ದೆ ಉಡಾವಣೆಗೊಂಡ ಬಳಿಕ ಅಂದರೆ ಮಾರ್ಚ್‌ 16ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಸ್ಪೇಸ್‌ ಎಕ್ಸ್‌ನ ನೌಕೆಯು ತಲುಪಿದೆ. ಕ್ರೂ-10 ಮಿಷನ್ ಭಾಗವಾಗಿ ಡ್ರ್ಯಾಗನ್ ಕ್ಯಾಪ್ಸುಲ್ ಎಂಬ ಬಾಹ್ಯಾಕಾಶ ನೌಕೆ ಇದಾಗಿತ್ತು. ಇನ್ನೂ ಇದರಲ್ಲಿಯೇ ಸುನಿತಾ ವಿಲಿಯಮ್ಸ್ ಮತ್ತು ಬುಚ್‌ವಿಲ್ಮೋರ್‌ ಮತ್ತು ಇವರಿಬ್ಬರನ್ನ ಕರೆತರಲು ನಾಸಾ ಗಗನಯಾತ್ರಿ ಹೇಗ್ ಮತ್ತು ರಷ್ಯಾದ ಗಗನಯಾತ್ರಿ ಅಲೆಕ್ಸಾಂಡರ್ ಗೋರ್ಬುನೋವ್ ಅವರು ತೆರಳಿದ್ದರು.

ಬಳಿಕ ಮಾರ್ಚ್‌ 19ರ ಬೆಳಗಿನ ಜಾವ ಅಂದರೆ ನಮ್ಮ ಭಾರತೀಯ ಕಾಲಮಾನ 3ಗಂಟೆ 25ನಿಮಿಷಕ್ಕೆ ಫ್ಲೋರಿಡಾ ಕರಾವಳಿಯಲ್ಲಿ ಸ್ಪೇಸ್‌ಎಕ್ಸ್‌ನ ಡ್ರ್ಯಾಗನ್ ಕ್ರಾಫ್ಟ್ ಬಾಹ್ಯಾಕಾಶ ನೌಕೆಯು ಡ್ರ್ಯಾಗನ್‌ ಸ್ಪೇಸ್‌ ಕ್ರಾಫ್ಟ್‌ ದಿ ಕ್ರ್ಯೂ-9 ಭೂಮಿಯ ಗುರುತ್ವಾಕರ್ಷಣೆಗೆ ಒಳಪಡುತ್ತಿದ್ದಂತೆಯೇ ವೇಗ ಕಡಿಮೆಮಾಡಿಕೊಂಡಿತು. ನೌಕೆ ಸಮುದ್ರದತ್ತ ಧಾವಿಸುವಾಗ ಪ್ಯಾರಾಚೂಟ್‌ಗಳು ತೆರೆದುಕೊಂಡವು. ಮೊದಲಿಗೆ ಸ್ಪೇಸ್ ಎಕ್ಸ್‌ಡ್ರ್ಯಾಗನ್ ನೌಕೆಯನ್ನ ಸ್ಥಿರಗೊಳಿಸಲು ಎರಡು ಡ್ರೋಗ್ ಪ್ಯಾರಾಚೂಟ್‌ಗಳನ್ನ ತೆರೆದವು. ಆ ಬಳಿಕ ಲ್ಯಾಡಿಂಗ್ ಆಗಲೆಂದು ನೌಕೆಯ ವೇಗ ಮತ್ತಷ್ಟು ಕಡಿಮೆಮಾಡಲು ಮೇನ್ ಆಗಿದ್ದ ನಾಲ್ಕು ಪ್ಯಾರಾಚೂಟ್‌ಗಳನ್ನ ಓಪನ್‌ ಮಾಡಲಾಗಿತ್ತು. ಇನ್ನೂ ಇದಾದ ಕೆಲವೇ ಕ್ಷಣಗಳಲ್ಲಿ ನೌಕೆ ಅತ್ಯಂತ ನಯವಾಗಿ, ಸುರಕ್ಷಿತವಾಗಿ ಸಮುದ್ರಕ್ಕೆ ಅಪ್ಪಳಿಸಿತ್ತು. ಸಮುದ್ರಕ್ಕೆ ಬೀಳುತ್ತಿದ್ದಂತೆಯೇ ಸ್ಪೇಸ್ ಎಕ್ಸ್‌ ಕ್ರ್ಯೂಸ್‌ನ ಕ್ಯಾಪ್ಸುಲ್‌ ನೀರಿನ ತೇಲಲು ಪ್ರಾರಂಭ ಮಾಡಿ ಬೆರಗು ಮೂಡಿಸಿತ್ತು. ಬಳಿಕ ಸುನಿತಾ ವಿಲಿಯಮ್ಸ್‌ ಸೇರಿದಂತೆ ಗಗನಯಾತ್ರಿಗಳನ್ನ ಸ್ಟ್ರೇಚರ್‌ ಮೂಲಕ ಕರೆತರಲಾಯಿತು. ಬಳಿಕ ಅವರು ಅಲ್ಲಿಂದ ಸ್ವಪ್ಲ ಹೊತ್ತು ವಿಶ್ರಾಂತಿ ಪಡೆದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನ ಭೇಟಿಯಾಗಿದ್ದರು.

ಇನ್ನೂ ಜೀವದ ಹಂಗು ತೊರೆದು ಬಾಹ್ಯಾಕಾಶ ನಿಲ್ದಾಣದಲ್ಲಿ 9 ತಿಂಗಳ ಕಾಲ ಜೀವನ ಕಳೆದ ಸುನಿತಾ ವಿಲಿಯಮ್ಸ್‌ ಅವರಿಗೆ ಅಮೆರಿಕದ ನಾಸಾ ನೀಡುವ ಸಂಭಾವನೆಯು ತೀರ ಕಡಿಮೆ ಎನ್ನುವಂತಾಗಿದ್ದು, ಇದಕ್ಕೆ ವಿಶ್ವದೆಲ್ಲೆಡೆ ಸಾರ್ವಜನಿಕ ವಲಯದಲ್ಲಿಯೂ ವ್ಯಾಪಕ ಅಸಮಾಧಾನ ಮಾತುಗಳು ಕೇಳಿ ಬರುತ್ತಿವೆ.

ಸುನಿತಾಗೆ ಇಷ್ಟೇನಾ ಸಂಬಳ..?

ಅಮೆರಿಕದ ಬಾಹ್ಯಾಕಾಶ ಸಂಸ್ಥೆಯಾಗಿರುವ ನಾಸಾದಲ್ಲಿ ಜಿಎಸ್-15‌ ಗ್ರೇಡ್‌ನ ಹೊಂದಿರುವ ಸರ್ಕಾರಿ ನೌಕರರಾಗಿರುವ ಸುನಿತಾ ವಿಲಿಯಮ್ಸ್‌ ಹಾಗೂ ಬುಚ್‌ ವಿಲ್ಮೋರ್‌ ಅವರು ವಾರ್ಷಿಕವಾಗಿ 1.08 ಕೋಟಿ ರೂಪಾಯಿಗಳಿಂದ 1.41 ಕೋಟಿ ರೂಪಾಯಿಗಳವರೆಗೆ ವೇತನ ಪಡೆಯುತ್ತಾರೆ. ಆದರೆ ಈಗ ಅವರು ಐಎಸ್‌ಎಸ್‌ ಅಂದರೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಹೆಚ್ಚುವರಿಯಾಗಿ 9 ತಿಂಗಳುಗಳನ್ನು ಕಳೆದಿರುವುದರಿಂದ ಇಬ್ಬರಿಗೂ 81 ಲಕ್ಷ ರೂಪಾಯಿಗಳಿಂದ 1.05 ಕೋಟಿ ರೂಪಾಯಿಗಳವರೆಗೆ ವೇತನ ಸಿಗುವ ಸಾಧ್ಯತೆ ಇದೆ ಎಂದು ನಾಸಾದ ನಿವೃತ್ತ ಗಗನಯಾತ್ರಿಗಳು ತಿಳಿಸಿದ್ದಾರೆ. ಅಲ್ಲದೆ ಗುರುತ್ವಾಕರ್ಷಣೆಗೆ ಒಳಪಟ್ಟ ಬಳಿಕ ಅದರಲ್ಲೂ ಭೂಮಿಗೆ ಬಂದ ಬಳಿಕ ಸುನಿತಾ ವಿಲಿಯಮ್ಸ್‌ ಹಾಗೂ ಬುಚ್‌ ವಿಲ್ಮೋರ್‌ ಅವರಿಗೆ ಸಾಕಷ್ಟು ಆರೋಗ್ಯ ಸಮಸ್ಯೆಗಳು ಕಾಡಲಿವೆ. ಅಂಥಹ ಸಮಸ್ಯೆಗಳು ಏನಂತಾ ನೋಡೊದಾದ್ರೆ…

ಭೂಮಿಗೆ ಬಂದ ಬಳಿಕ ಕಾಡಲಿವೆ ಆರೋಗ್ಯ ಸಮಸ್ಯೆಗಳು..

ಪ್ರಮುಖವಾಗಿ ಭೂಮಿಯ ಗುರುತ್ವಾಕರ್ಷಣೆ ಹಾಗೂ ಬಾಹ್ಯಾಕಾಶದ ಗುರುತ್ವಾಕರ್ಷಣೆಯಲ್ಲಿ ತುಂಬಾ ವ್ಯತ್ಯಾಸ ಇರಲಿದೆ. ಭೂಮಿಯ ವಾತವರಣಕ್ಕೆ ಒಗ್ಗಿಕೊಳ್ಳುವಾಗ ಇಬ್ಬರು ಗಗನಯಾತ್ರಿಗಳು ಆರೋಗ್ಯದ ಸಮಸ್ಯೆಗೆ ಒಳಗಾಗಲಿದ್ದಾರೆ. ವಿಲಿಯಮ್ಸ್, ವಿಲ್ಮೋರ್ ಇಬ್ಬರ ಪಾದಗಳು ಮಗುವಿನ ಪಾದಗಳಂತೆ ಆಗಿರುತ್ತವೆ. ಇಷ್ಟು ದಿನ ತೇಲಾಡಿಕೊಂಡೆ ಇದ್ದಿದ್ರಿಂದ ಭೂಮಿಗೆ ಬಂದಾಗ ಅದೇ ಅನುಭವವಾಗುತ್ತೆ. ಇನ್ನೂ ದೇಹಕ್ಕೆ ಭಾರವಿಲ್ಲ ಎನ್ನುವಂತೆ ಅವರಿಗೆ ಅನಿಸುತ್ತದೆ. ಜೊತೆಗೆ ಅವರ ದೇಹದ ಚರ್ಮ ಮೊದಲಿನಂತೆ ಇರುವುದಿಲ್ಲ. ಅದು ಸಹಜ ಸ್ಥಿತಿಗೆ ಬರಬೇಕು ಎಂದರೆ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ. ಗಗನಯಾತ್ರಿಗಳ ದೇಹದ ಮೇಲೆ ಭೂಮಿಯ ಗುರುತ್ವಾಕರ್ಷಣೆಯ ಕೊರತೆಯಿಂದ ಮೂಳೆಯ ಸಾಂದ್ರತೆ ಮತ್ತು ಸ್ನಾಯು ಕ್ಷೀಣತೆ ಅನುಭವಿಸುತ್ತಾರೆ. ಅಲ್ಲದೆ ಇದನ್ನ ವ್ಯಾಯಾಮದ ಮೂಲಕ ಮರಳಿ ಪಡೆಯಬಹುದಾಗಿದೆ. ಅಲ್ದೆ ಮತ್ತೆ ಸಾಮಾನ್ಯರಂತೆ ಆಗಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಇದಕ್ಕೆ ತಕ್ಕಂತೆ ಇಬ್ಬರು ನಿತ್ಯ ಆರೋಗ್ಯದ ನಿಯಮಗಳನ್ನು ಪಾಲಿಸಲೇಬೇಕು.

ಪರಿಶ್ರಮ ಏನೆಂದು ಸುನಿತಾ ತೋರಿಸಿದ್ದಾರೆ..

ಇನ್ನೂ ಸುನಿತಾ ವಿಲಿಯಮ್ಸ್‌ ಅವರಿಗೆ ಸ್ವಾಗತ, ಈ ಭೂಮಿ ನಿಮ್ಮನ್ನ ಮಿಸ್ ಮಾಡಿಕೊಂಡಿತ್ತು. ಇದು ಧೈರ್ಯ, ಮತ್ತು ಅಪಾರ ಮಾನವ ಚೈತನ್ಯದ ಪರೀಕ್ಷೆಯಾಗಿದೆ. ಸುನೀತಾ ವಿಲಿಯಮ್ಸ್ ಮತ್ತು ಕ್ರ್ಯೂ9 ಗಗನಯಾತ್ರಿಗಳು ಮತ್ತೊಮ್ಮೆ ಪರಿಶ್ರಮ ಎಂದರೆ ಏನು ಎಂದು ನಮಗೆ ತೋರಿಸಿದ್ದಾರೆ. ಅಜ್ಞಾತವಾಸದ ವಿಶಾಲತೆಯ ಮುಂದೆ ಅವರ ಅಚಲ ದೃಢಸಂಕಲ್ಪವು ಲಕ್ಷಾಂತರ ಜನರಿಗೆ ಶಾಶ್ವತವಾಗಿ ಸ್ಫೂರ್ತಿ ನೀಡುತ್ತೆ. ಬಾಹ್ಯಾಕಾಶ ಪರಿಶೋಧನೆಯು ಮಾನವ ಸಾಮರ್ಥ್ಯದ ಮಿತಿಗಳನ್ನ ವಿಸ್ತರಿಸುವ, ಕನಸು ಕಾಣುವ ಧೈರ್ಯ ಮತ್ತು ಆ ಕನಸುಗಳನ್ನ ವಾಸ್ತವಕ್ಕೆ ತಿರುಗಿಸುವ ಗಟ್ಟಿತನವನ್ನ ಹೊಂದಿದೆ. ಒಬ್ಬ ಮಾರ್ಗದರ್ಶಕ ಮತ್ತು ಐಕಾನ್ ಆಗಿರುವ ಸುನೀತಾ ವಿಲಿಯಮ್ಸ್ ತಮ್ಮ ವೃತ್ತಿಜೀವನದುದ್ದಕ್ಕೂ ಈ ಮನೋಭಾವವನ್ನ ಪ್ರದರ್ಶಿಸಿದ್ದಾರೆ. ಅವರ ಸುರಕ್ಷಿತ ಮರಳುವಿಕೆಗೆ ದಣಿವಿಲ್ಲದೆ ಕೆಲಸ ಮಾಡಿದ ಎಲ್ಲರ ಬಗ್ಗೆ ನಮಗೆ ಹೆಮ್ಮೆಯಿದೆ. ನಿಖರತೆಯು ಉತ್ಸಾಹವನ್ನು ಪೂರೈಸಿದಾಗ ಮತ್ತು ತಂತ್ರಜ್ಞಾನವು ದೃಢತೆಯನ್ನು ಪೂರೈಸಿದಾಗ ಏನಾಗುತ್ತದೆ ಎಂಬುದನ್ನು ಅವರು ಪ್ರದರ್ಶಿಸಿದ್ದಾರೆ ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಮೂಲದ ಅಮೆರಿಕ ಗಗನಯಾನಿ ಸುನೀತಾ ವಿಲಿಯಮ್ಸ್ ಅವರನ್ನ ಸಾಮಾಜಿಕ ಜಾಲತಾಣದ ಮೂಲಕ ಸ್ವಾಗತಿಸಿದ್ದರು.

ಬೈಡನ್‌ ಆಸಕ್ತಿ ತೋರಿಸಿರಲಿಲ್ಲ..

ಇನ್ನೂ ಸುನಿತಾ ವಿಲಿಯಮ್ಸ್ ದೀರ್ಘಕಾಲ ಬಾಹ್ಯಾಕಾಶದಲ್ಲಿ ಉಳಿಯಲು ಬೈಡನ್‌ ನಿರಾಸಕ್ತಿ ಕಾರಣವಾಗಿತ್ತು ಎಂದು ಸ್ಪೇಸ್‌ ಎಕ್ಸ್‌ ಮುಖ್ಯಸ್ಥ ಎಲಾನ್‌ ಮಸ್ಕ್‌ ಆರೋಪಿಸಿದ್ದಾರೆ. ಸುನೀತಾ ವಿಲಿಯಮ್ಸ್‌ ಅವರನ್ನ ಭೂಮಿಗೆ ಕರೆತರಲು ಮಾಜಿ ಅಧ್ಯಕ್ಷ ಜೋ ಬೈಡನ್‌ ತೀವ್ರ ನಿರಾಸಕ್ತಿ ತೋರಿದ್ದರು. ಈ ಕುರಿತು ಸಂದರ್ಶನವೊಂದರಲ್ಲಿ ಮಾತನಡಿರುವ ಎಲಾನ್‌ ಮಸ್ಕ್‌, ಐಎಸ್‌ಎಸ್‌ನಲ್ಲಿ ಸಿಲುಕಿಕೊಂಡಿದ್ದ ಗಗನಯಾತ್ರಿಗಳನ್ನ ಭೂಮಿಗೆ ಕರೆತರುವ ನಮ್ಮ ಪ್ರಯತ್ನಗಳಿಗೆ ಮಾಜಿ ಅಧ್ಯಕ್ಷ ಜೋ ಬೈಡನ್‌ ಆಡಳಿತ ಬೆಂಬಲ ನೀಡಲಿಲ್ಲ ಎನ್ನುವ ಮೂಲಕ ಮಸ್ಕ್ ಗಗನಯಾತ್ರಿಗಳ ವಿಚಾರದಲ್ಲೂ ರಾಜಕೀಯವನ್ನ ಎಳೆದು ತರುವ ಪ್ರಯತ್ನ ಮಾಡಿದ್ದಾರೆ.

ಒಟ್ನಲ್ಲಿ.. ಬೋಯಿಂಗ್‌ ಪ್ರತಿಸ್ಪರ್ಧಿಯಾದ ಸ್ಪೇಸ್‌ ಎಕ್ಸ್‌ ಕಂಪನಿಯು ಈ ಇಬ್ಬರು ಗಗನಯಾನಿಗಳು 2025ರ ಫೆಬ್ರುವರಿಯಲ್ಲಿ ಕರೆತರಲಿದೆ ಎಂದು ನಾಸಾ ಹೇಳಿತ್ತು. ಆದರೆ ಈ ಕಾರ್ಯಕ್ಕಾಗಿ ಹೊಸ ಬಗೆಯ ನೌಕೆಯನ್ನ ಸ್ಪೇಸ್‌ ಎಕ್ಸ್‌, ಸಿದ್ದಪಡಿಸಿತ್ತು. ಅದರೆ ಇದೀಗ ಅಂತಿಮವಾಗಿ ಗಗನಯಾತ್ರಿಗಳು ಭೂಮಿಗೆ ಬಂದಿಳಿಯುವಂತಾಗಿದೆ. ಆರಂಭದಲ್ಲಿ ಆಘಾತ ಅನುಭವಿಸಿದ್ದ ನಾಸಾ ಇದೀಗ ನಿಟ್ಟುಸಿರು ಬಿಡುವಂತಾಗಿದೆ. ಅಂದುಕೊಂಡಂತೆ ಎಲ್ಲವೂ ಆಗಿದ್ದು, ಆದರೆ ಬಾಹ್ಯಾಕಾಶ ಬಂಧನದಿಂದ ಮರಳಿರುವ ಸುನಿತಾ ವಿಲಿಯಮ್ಸ್‌ ಅವರ ದಾಖಲೆಗಳಿಗೆ ಈ 9 ತಿಂಗಳಿನ ಅವಧಿಯು ಸೇರಿಕೊಳ್ಳಲಿದೆ ಎನ್ನುವುದು ಗಮನಾರ್ಹ… ಅದೇನೆ ಇರಲಿ.. ಭೂಮಿ ಬಿಟ್ಟು ಬಾಹ್ಯಾಕಾಶ ನಿಲ್ದಾಣದಲ್ಲಿದ್ದ ಸುನಿತಾ ವಿಲಿಯಮ್ಸ್‌ ಅಂತಿಮವಾಗಿ ಧರೆಯ ಮೇಲೆ ಕಾಲಿಟ್ಟಿದ್ದಾರೆ. ಅವರ ಮುಂದಿನ ದಿನಗಳು ಇನ್ನಷ್ಟು ಆನಂದದಾಯಕವಾಗಿರಲಿ, ಲವಲವಿಕೆಯಿಂದ ಕೂಡಿರಲಿ ಮೇಲಾಗಿ ಯಾವುದೇ ಅನಾರೋಗ್ಯಕ್ಕೆ ತುತ್ತಾಗದೆ ಆರೋಗ್ಯವಂತರಾಗಿರಲ್ಲಿ ಅನ್ನೋದೆ ನಮ್ಮ ಆಶಯ..

- Advertisement -

Latest Posts

Don't Miss