Tuesday, October 14, 2025

Latest Posts

ಯಲಹಂಕ ಶಾಸಕ ವಿಶ್ವನಾಥ್​ ಹತ್ಯೆಗೆ ಕಾಂಗ್ರೆಸ್​ ಮುಖಂಡ ಸ್ಕೆಚ್? ಸಿಸಿಬಿ ಕೈಗೆ ಸಿಕ್ಕಿದೆ ಮಹತ್ವದ ವಿಡಿಯೋ

- Advertisement -

ಬೆಂಗಳೂರು: ಬಿಜೆಪಿಯ ಪ್ರಭಾವಿ ಶಾಸಕನ ಹತ್ಯೆಗೆ ಕಾಂಗ್ರೆಸ್​ ಮುಖಂಡನೊಬ್ಬ ಸ್ಕೆಚ್​ ಹಾಕಿದ್ದರು ಎಂಬ ಆಘಾತಕಾರಿ ವಿಷಯ ಹೊರಬಂದಿದ್ದು, ಎಚ್ಚೆತ್ತ ಸಿಸಿಬಿ ಪೊಲೀಸರು ತಡರಾತ್ರಿವರೆಗೂ ಕಾಂಗ್ರೆಸ್ ಮುಖಂಡನ್ನು ಲಾಕ್​ ಮಾಡಿ ವಿಚಾರಣೆ ನಡೆಸಿದ್ದಾರೆ.

ಇಷ್ಟಕ್ಕೂ ಆ ಬಿಜೆಪಿ ಶಾಸಕ ಯಾರು? ಆ ಶಾಸಕನ ಕೊಲೆಗೆ ಪ್ಲಾನ್ ಮಾಡಿದ್ದು ಯಾರು ಗೊತ್ತಾ?

ಯಲಹಂಕ ಶಾಸಕ ಎಸ್.ಆರ್​. ವಿಶ್ವನಾಥ್ ಅವರನ್ನ ಮುಗಿಸಲು ಕಾಂಗ್ರೆಸ್ ಮುಖಂಡ ಎಂ.ಎನ್. ಗೋಪಾಲಕೃಷ್ಣ ಮಾತುಕತೆ ನಡೆಸಿದ್ದರು ಎನ್ನಲಾದ ಆಡಿಯೋ ಮತ್ತು ವಿಡಿಯೋ ಸಿಸಿಬಿ ಪೊಲೀಸರ ಬಳಿ ಇದೆಯಂತೆ. ಎರಡ್ಮೂರು ತಿಂಗಳ ಹಿಂದೆಯೇ ಹತ್ಯೆಗೆ ಸ್ಕೆಚ್ ಹಾಕಲಾಗಿತ್ತಂತೆ. ಈ ಕುರಿತು ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ಮತ್ತು ಕುಳ್ಳ ದೇವರಾಜ್ ನಡುವೆ ನಡೆದ ಸಂಭಾಷಣೆ ವಿಡಿಯೋದಲ್ಲಿ ಇದೆಯಂತೆ. ಈ ವಿಡಿಯೋ ವಿಶ್ವನಾಥ್​ಗೆ ಸಿಗುತ್ತಿದ್ದಂತೆ ಸಿಸಿಬಿಗೆ ದೂರು ನೀಡಿದ್ದರು. ಮಂಗಳವಾರ ರಾತ್ರಿ, ಗೋಪಾಲಕೃಷ್ಣ ಅವರನ್ನ ಸತತ 5 ತಾಸು ವಿಚಾರಣೆ ನಡೆಸಿ ವಾಪಸ್​ ಕಳುಹಿಸಿದ್ದಾರೆ. ಬಳಿಕ ಕುಳ್ಳ ದೇವರಾಜ್​ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದ್ದು, ಇದೀಗ ಈ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ.

ವಿಶ್ವನಾಥ್ ವಿರುದ್ಧ ಗೋಪಾಲಕೃಷ್ಣ‌ನನ್ನು ಪ್ರಚೋದಿಸಿ ಮಾತನಾಡಿಸಿ ಅದನ್ನು ವಿಡಿಯೋ ಮಾಡಿದ್ದು ಕುಳ್ಳ ದೇವರಾಜ್​ ಅಂತೆ! ಇದೇ ಕಾರಣಕ್ಕೆ ಕುಳ್ಳ ದೇವರಾಜ್​ನನ್ನು ವಶಕ್ಕೆ ಪಡೆದು ಸಿಸಿಬಿ ವಿಚಾರಣೆ ಮಾಡುತ್ತಿದೆ. ವಿಶ್ವನಾಥ್​ಗೆ ಹತ್ತಿರವಾಗಲು ಗೋಪಾಲಕೃಷ್ಣಗೆ ತೋಡಿದ್ದ ಹಳ್ಳಕ್ಕೆ ತಾನೇ ಬೀಳುವ ಆತಂಕದಲ್ಲಿ ಕುಳ್ಳ ದೇವರಾಜ್ ಇದ್ದಾನೆ.

ಒಟ್ಟಿನಲ್ಲಿ ಸತ್ಯಾಸತ್ಯತೆ ಪೊಲೀಸ್​ ತನಿಖೆ ಬಳಿಕ ಹೊರ ಬೀಳಲಿದೆ. ಇನ್ನು ಈ ಪ್ರಕರಣ ಕುರಿತು ಇಂದು ಸಂಜೆ ವೇಳೆಗೆ ಮತ್ತಷ್ಟು ಮಾಹಿತಿ ಲಭ್ಯವಾಗಲಿದೆ. ಶಾಸಕ ವಿಶ್ವನಾಥ್​ ಅವರೇ ಸುದ್ದಿಗೋಷ್ಠಿ ನಡೆಸಿ ಹೇಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

- Advertisement -

Latest Posts

Don't Miss