Monday, September 9, 2024

Latest Posts

ದೋಸ್ತಿಗಳಿಗೆ ಶಾಕ್ ಮೇಲೆ ಶಾಕ್- ಸಚಿವ ಎಚ್.ನಾಗೇಶ್ ರಾಜೀನಾಮೆ..!

- Advertisement -

ಬೆಂಗಳೂರು: ಆಪರೇಷನ್ ಕಮಲದ ಭೀತಿಯಿಂದ ಪಕ್ಷೇತರ ಶಾಸಕರಾಗಿದ್ದ ಎಚ್. ನಾಗೇಶ್ ರನ್ನು ಸೆಳೆದು ಮಂತ್ರಿಗಿರಿ ನೀಡಿದ ದೋಸ್ತಿಗಳಿಗೆ ಶಾಕ್ ಮೇಲೆ ಶಾಕ್ ಎದುರಾಗ್ತಿದೆ. ಇದೀಗ ಎಚ್.ನಾಗೇಶ್ ದೋಸ್ತಿಗಳಿಗೆ ಗುಡ್ ಬೈ ಹೇಳಿದ್ದಾರೆ.

ಪಕ್ಷೇತರರಿಗೆ ಮಂತ್ರಿಗಿರಿ ನೀಡೋ ಮೂಲಕ ತಮ್ಮತ್ತ ಸೆಳೆಯುವಲ್ಲಿ ಯಶಸ್ವಿಯಾಗಿದ್ದ ದೋಸ್ತಿಗಳಿಗೆ ಇದೀಗ ಮತ್ತೊಂದು ಆಘಾತ ಎದುರಾಗಿದೆ. ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ಸಣ್ಣ ಕೈಗಾರಿಕೆ ಸಚಿವ ಎಚ್.ನಾಗೇಶ್ ಇದೀಗ ರಾಜೀನಾಮೆ ನೀಡಿ ಮೈತ್ರಿ ನಾಯಕರಲ್ಲಿ ಮತ್ತಷ್ಟು ತಲ್ಲಣ ಮೂಡಿಸಿದ್ದಾರೆ. ಹೌದು ಸಾಕಷ್ಟು ಸರ್ಕಸ್ ಮಾಡಿ ಪಕ್ಷೇತರ ಶಾಸಕರನ್ನು ಸೆಳೆದಿದ್ದ ಕೈ ನಾಯಕ ಸಿದ್ದರಾಮಯ್ಯಗೆ ಸಚಿವ ನಾಗೇಶ್ ಕೈ ಕೊಟ್ಟಿದ್ದಾರೆ. ಜೂನ್ 14 ರಂದು ಪ್ರಮಾಣವಚನ ಸ್ವೀಕರಿಸಿದ್ದ ನಾಗೇಶ್ ಗೆ 10 ದಿನಗಳಾದ್ರೂ ಖಾತೆ ಹಂಚಿಕೆಯಾಗಿರಲಿಲ್ಲ. ಖಾತೆ ಹಂಚಿಕೆ ಬಗ್ಗೆ ದೋಸ್ತಿಗಳಲ್ಲೇ ತಿಕ್ಕಾಟ ನಡೆಯುತ್ತಿದ್ದರಿಂದಾಗಿ ಕಡೆಗೆ ನಾಗೇಶ್ ಗೆ ಸಣ್ಣ ಕೈಗಾರಿಕೆ ಖಾತೆ ನೀಡಲಾಗಿತ್ತು. ಆದ್ರೀಗ ಸಚಿವರಾಗಿ ಕೇವಲ 21 ದಿನಗಳಲ್ಲೇ ನಾಗೇಶ್ ದೋಸ್ತಿಗಳಿಗೆ ಗುಡ್ ಬೈ ಹೇಳಿದ್ದು, ಬಿಜೆಪಿ ಸೇರ್ಪಡೆಗೊಳ್ಳೋ ಎಲ್ಲಾ ಸಾಧ್ಯತೆಗಳಿವೆ.

ಇನ್ನು ನಾಗೇಶ್ ಮುಂಬೈನಲ್ಲಿರೋ ರೆಬೆಲ್ ಶಾಸಕರನ್ನು ಭೇಟಿ ಮಾಡಲಿದ್ದು ಅಲ್ಲಿಗೆ ತೆರಳಿಲಿದ್ದಾರೆ ಅಂತ ಹೇಳಲಾಗ್ತಿದೆ.

ನಿಖಿಲ್ ಸ್ಪರ್ಧಿಸಿದ್ರೆ ಅವರನ್ನು ಸೋಲಿಸ್ತೀವಿ ಎಂದ ಕಾಂಗ್ರೆಸ್ ಮುಖಂಡ..! ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=p4eddFtGqK0
- Advertisement -

Latest Posts

Don't Miss