- Advertisement -
ಹುಬ್ಬಳ್ಳಿ: ಸಾಮಾಜಿಕ ಜಾಲತಾಣದಲ್ಲಿ ಏಳು ನಕಲಿ ಖಾತೆಗಳನ್ನ ತೆರೆದು ಶಾಸಕ ವಿನಯ ಕುಲಕರ್ಣಿ ಹಾಗೂ ಕಾಂಗ್ರೆಸ್ ಪಕ್ಷದ ಬಗ್ಗೆ ಅವಹೇಳನ ಮಾಡುತ್ತಿದ್ದವರ ಮೇಲೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನ ಆರಂಭಿಸಿದ್ದಾರೆ.
ರಾಹುಲ್ ಪಾಟೀಲ್, ಸಚಿನ ಹೆಗ್ಗೇರಿ, ಕಾಂಗ್ರೆಸ್ ಕಳ್ಳೆಕಾಯಿ, ಶ್ರವಣಕುಮಾರ ಪಿ, ಮೋದಿ ಅಭಿಮಾನಿ, ಧರ್ಮದ ಹೆಸರಿನಲ್ಲಿ ಅಧರ್ಮ ಎಂಬ ಹೆಸರಿನಡಿ ನಕಲಿ ಖಾತೆ ತೆರೆಯಲಾಗಿದೆ ಎಂಬ ದೂರು ದಾಖಲಾಗಿದೆ.
ಧಾರವಾಡದ ಮಿಲಿಂದ ಇಚ್ಚಂಗಿ ಎಂಬುವವರು ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೋಟೊಗಳನ್ನ ಎಡಿಟ್ ಮಾಡಿ, ಅಶ್ಲೀಲವಾಗಿ ಬಳಕೆ ಮಾಡಿದ್ದಾರಂತೆ. ನಕಲಿ ಖಾತೆಗಳ ಹಿಂದೆ ಯಾರಿದ್ದಾರೆ ಎಂಬುದನ್ನ ಪತ್ತೆ ಹಚ್ಚಿ, ಕಾನೂನು ಕ್ರಮ ಜರುಗಿಸಲು ವಿನಂತಿಸಿದ್ದಾರೆ.
Yash : ಯಶ್ 19 ಚಿತ್ರದ ಅಪ್ಡೇಟ್ ಗಾಗಿ ಗಣೆಶನ ಮೊರೆ ಹೋದ ಅಭಿಮಾನಿಗಳು..!
- Advertisement -