ಚಿಕನ್ ಪಾರ್ಟಿ ನೆಪದಲ್ಲಿ ಅಳಿಯನ ಬರ್ಬರ ಹತ್ಯೆ!

ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ದಂಡೀಪುರ ಗ್ರಾಮದಲ್ಲಿ ಅತ್ತೆಯೇ ಮಗಳ ಪ್ರಿಯಕರನ ಜೊತೆಗೂಡಿ ಅಳಿಯನ ಹತ್ಯೆಗೈದಿರುವ ಘಟನೆ ಬೆಳಕಿಗೆ ಬಂದಿದೆ.

ಮೃತನನ್ನು ನರಸಿಂಹಮೂರ್ತಿ ಎಂದು ಗುರುತಿಸಲಾಗಿದೆ. ಮೂರು ವರ್ಷಗಳ ಹಿಂದೆ ಸುಜಾತಾಳನ್ನು ಮದುವೆಯಾಗಿದ್ದನು. ಬಳಿಕ ಸುಜಾತಾ ಗಾರ್ಮೆಂಟ್ಸ್ ಕೆಲಸದ ವೇಳೆ ಅಮರ್ ಎಂಬ ವ್ಯಕ್ತಿಯೊಂದಿಗೆ ಸಂಬಂಧ ಬೆಳೆದಿತ್ತು ಎನ್ನುವ ಮಾಹಿತಿ ಇದೆ. ಈ ಸಂಬಂಧವೇ ಕೊಲೆಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ.

ಸುಜಾತಾ ಅನಾರೋಗ್ಯದಿಂದ ಎರಡು ತಿಂಗಳ ಹಿಂದೆ ಮೃತಪಟ್ಟಿದ್ದರೂ, ಅಮರ್ ಮನೆ ಸಂಪರ್ಕ ಮುಂದುವರಿಸಿದ್ದನು. ಚಿಕನ್ ಪಾರ್ಟಿ ನೆಪದಲ್ಲಿ ನರಸಿಂಹಮೂರ್ತಿಯನ್ನು ಕರೆಸಿ ಹತ್ಯೆಗೈದಿದ್ದಾರೆ ಎಂದು ಆರೋಪಿಸಲಾಗಿದೆ.

ಆಸ್ಪತ್ರೆಗೆ ಕರೆದೊಯ್ಯುವ ವೇಳೆ ದೇಹದ ಮೇಲೆ ಅನುಮಾನಾಸ್ಪದ ಗುರುತುಗಳು ಕಂಡು ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತನಿಖೆಯಲ್ಲಿ ಘಟನೆ ಬಯಲಾಗಿದೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ. ಮೃತನ ಕುಟುಂಬಸ್ಥರು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದ್ದಾರೆ.

About The Author