Bigboss News:
ಬಿಗ್ ಬಾಸ್ ಇದೀಗ ಪ್ರಾರಂಭವಾಗಿ 3 ವಾರಗಳು ಕಳೆದಿವೆ. ಎಲಿಮಿನೇಷನ್ ಕೂಡಾ ನಡೆಯುತ್ತಿದ್ದು ಇದೀಗ ಕೆಲವರು ಮನೆಯಿಂದ ಹೊರನಡೆದಿದ್ದಾರೆ. ಮನೆ ಒಳಾಂಗಣದಲ್ಲಿ ದಿನಕ್ಕೊಂದು ಟಾಸ್ಕ್ ಸ್ಪರ್ಧಿಗಳನ್ನು ಇನ್ನಷ್ಟು ಬಲವಾಗಿಸುತ್ತಿದೆ. ಇನ್ನೇನು ಎಲಿಮಿನೇಷನ್ ಆಗ್ತಾರೆ ಅಂದವರು ಸೇಫಾಗಿ ಉಳಿದು ಮತ್ಯಾರೋ ಹೊರ ನಡೆಯುತ್ತಿದ್ದಾರೆ. ಜನಾಭಿಪ್ರಾಯವೇ ಇಲ್ಲಿ ಅಂತಿಮ ನಿದರ್ಶನವಾಗುತ್ತಿದೆ.
ಸೋನು ಗೌಡ ವಿಚಾರವಾಗಿಯೂ ಇದೇ ನಡೆದಿದ್ದು. ಬಿಗ್ ಬಾಸ್ ಆರಂಭವಾದಾಗಿನಿಂದಲೂ ನಿರಂತರ ಸೋನು ಸುದ್ದಿಯಲ್ಲಿದ್ದಾರೆ. ಹಾಗೆಯೇ ಅಡುಗೆ ಮನೆಯಲ್ಲೂ ಇವರೇ ಕಂಡಿದ್ದು ವಾರಗಳ ನಂತರ ಜವಾಬ್ದಾರಿಗಳು ನಿರಂತರ ಬದಲಾಗುತ್ತಿತ್ತು. ಇದೀಗ ಸೋನು ಗೌಡ ಗೆ ಅಡುಗೆ ಮನೆ ಮತ್ತೆ ಆಹ್ವಾನ ನೀಡಿದೆ. ಹೌದು ಅಡುಗೆ ಯಾರು ಮಾಡಬೇಕೆಂಬ ಓಟ್ ಆಟದಲ್ಲಿ ಜನರು ಸೋನು ಗೌಡ ಗೆ ಅಧಿಕ ಓಟ್ ನೀಡಿ ಮತ್ತೆ ಸೋನು ಗೌಡ ಅಡುಗೆ ಮನೆಯಲ್ಲಿರುವಂತೆ ಮಾಡಿದ್ದಾರೆ. ಸೋನು ಗೌಡ ಯಾವುದು ಬೇಡ ಅನ್ನುತ್ತಿದ್ದರೋ ಅದೇ ಜವಾಬ್ದಾರಿ ಸಿಕ್ಕಿತು ಎಂದಿದ್ದಾರೆ. ಇನ್ನು ನನಗೆ ಅಡುಗೆ ಮಾಡಲು ಬರುವುದಿಲ್ಲ ಟೊಮೆಟೋ ಗೊಜ್ಜು ಮಾತ್ರ ಮಾಡ್ತೀನಿ ಎಂದು ಗೊಜ್ಜು ಮಾಡಿಕೊಟ್ಟಿದ್ದಾರೆ. ಮನೆಯವರು ಇದನ್ನು ಮೆಚ್ಚಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ‘ಕೋಬ್ರಾ’ ಕ್ರೇಜ್.. ಚಿಯಾನ್ ವಿಕ್ರಮ್ ನೋಡಲು ಮುಗಿಬಿದ್ದ ಫ್ಯಾನ್ಸ್