Monday, December 23, 2024

Latest Posts

Sonu Sood ಉಕ್ರೇನ್‌ನಲ್ಲಿರುವ ಭಾರತೀಯ ವಿದ್ಯಾರ್ಥಿಗಳಿಗೆ ಸಹಾಯ..!

- Advertisement -

ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳ (Indian students) ಸಹಾಯಕ್ಕೆ ಬಾಲಿವುಡ್ ನಟ ಸೋನುಸೂದ್ (Sonu Sood) ಮುಂದಾಗಿದ್ದಾರೆ. ಉಕ್ರೇನ್ (Ukraine) ಮೇಲೆ ರಷ್ಯಾ ದಾಳಿ ಸತತ ಒಂದು ವಾರದಿಂದ ನಡೆಯುತ್ತಲೇ ಇದೆ, ಇದರಿಂದಾಗಿ ಸಾವಿರಾರು ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ, ಉಕ್ರೇನ್‌ನಲ್ಲಿರುವ ನಮ್ಮ ವಿದ್ಯಾರ್ಥಿಗಳು ಸಂಕಷ್ಟದಲ್ಲಿದ್ದು, ಈ ಕಠಿಣ ಸಮಯದಲ್ಲಿ ಅದೃಷ್ಟವಶಾತ್ ನಾವು ಅನೇಕ ವಿದ್ಯಾರ್ಥಿಗಳನ್ನು ಗಡಿ ದಾಟಿಸಿ ಸುರಕ್ಷಿತ ಪ್ರದೇಶಕ್ಕೆ ಕರೆದುಕೊಂಡು ಹೋಗಲು ಸಹಾಯ ಮಾಡಿದ್ದೇವೆ, ಹೀಗೆ ಸಹಾಯ ಮಾಡಲು ಪ್ರಯತ್ನ ಮಾಡೋಣ, ಅವರಿಗೆ ನಮ್ಮ ಅವಶ್ಯಕತೆ ಇದೆ ಎಂದು ಹೇಳಿದ್ದಾರೆ ಇದರ ನಡುವೆ ನಟ ಸೋನುಸೂದ್ ವಿದ್ಯಾರ್ಥಿಗಳ ರಕ್ಷಣೆಗೆ ಮುಂದಾಗಿದ್ದಾರೆ. ಸೋನು ಸೂದ್ ಚಾರಿಟಿ ಫೌಂಡೇಶನ್ (Sonu Sood Charity Foundation) ವತಿಯಿಂದ ಸಹಾಯ ಪಡೆದಿರುವ ಬಗ್ಗೆ ವಿದ್ಯಾರ್ಥಿಗಳು ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ರಷ್ಯಾ ಮತ್ತು ಉಕ್ರೇನ್ ಯುದ್ಧ 8ನೇ ದಿನಕ್ಕೆ ಕಾಲಿಟ್ಟಿದೆ. ಉಕ್ರೇನ್​ರಾಜಧಾನಿ ಕೀವ್ ಮೇಲೆ ರಷ್ಯಾ ವೈಮಾನಿಕ ದಾಳಿ ನಡೆಸುವ ಸೂಚನೆ ಸಿಕ್ಕಿದ ಬೆನ್ನಲ್ಲೇ ಅಲ್ಲಿನ ನಿವಾಸಿಗಳಿಗೆ ಸುರಕ್ಷಿತ ಪ್ರದೇಶಗಳಿಗೆ ತೆರಳಲು ಸೂಚನೆ ನೀಡಲಾಗಿದೆ. ಕೀವ್, ಮೈಕೊಲೈವ್, ಎಲ್ವಿವ್, ಝೈಟೊಮಿರ್, ಇವಾನೊ-ಫ್ರಾಂಕಿವ್ಸ್ಕ್, ಚೆರ್ನಿಹಿವ್ ಮತ್ತು ಚೆರ್ನಿಹಿವ್ ಒಬ್ಲಾಸ್ಟ್, ವೊಲಿನ್ ಒಬ್ಲಾಸ್ಟ್, ಚೆರ್ಕಾಸಿ ಒಬ್ಲಾಸ್ಟ್, ಕಿರೊವೊಹ್ರಾಡ್ ಒಬ್ಲಾಸ್ಟ್, ಪೋಲ್ಟವಾ ಒಬ್ಲಾಸ್ಟ್, ನಗರಗಳಲ್ಲಿ ರಷ್ಯಾ ವೈಮಾನಿಕ ದಾಳಿ ನಡೆಸಬಹುದೆಂದು ಮುಂಚಿತವಾಗಿ ತಿಳಿಸಲಾಗಿದೆ. ಕೀವ್​ನಲ್ಲಿ ವಾಯುದಾಳಿ ಎಚ್ಚರಿಕೆ. ನಿವಾಸಿಗಳು ಹತ್ತಿರದ ಸುರಕ್ಷಿತ ಆಶ್ರಯಗಳಿಗೆ ತೆರಳಬೇಕು’ ಎಂದು ದಿ ಕೀವ್​ ಇಂಡಿಪೆಂಡೆಂಟ್ ಟ್ವೀಟ್ (The Kiev Independent Tweet) ಮಾಡಿದೆ. ಕೀವ್ ಮಾತ್ರವಲ್ಲದೆ ಮೈಕೊಲೈವ್, ಎಲ್ವಿವ್, ಝೈಟೊಮಿರ್, ಇವಾನೊ-ಫ್ರಾಂಕಿವ್ಸ್ಕ್, ಚೆರ್ನಿಹಿವ್ ಮುಂತಾದ ನಗರಗಳಲ್ಲಿ ದಾಳಿ ನಡೆಯಬಹುದೆಂದು ಮುನ್ನೆಚ್ಚರಿಕೆ ನೀಡಲಾಗಿದೆ. ಈ ಮಧ್ಯೆ ಉಕ್ರೇನ್‌ನ ಈಶಾನ್ಯ ನಗರ ಸುಮಿಯಲ್ಲಿರುವ ಸುಮಿ ಸ್ಟೇಟ್ ಯೂನಿವರ್ಸಿಟಿಯ ಅಧ್ಯಾಪಕರ ಕಟ್ಟಡದ ಮೇಲೆ ಇಂದು ಬೆಳಗ್ಗೆ ರಷ್ಯಾದ ಪಡೆಗಳು ಶೆಲ್ ದಾಳಿ ನಡೆಸಿವೆ ಎಂದು ಸುಮಿ ಪ್ರಾದೇಶಿಕ ಮಿಲಿಟರಿ ಆಡಳಿತದ ಮುಖ್ಯಸ್ಥ ಡಿಮಿಟ್ರೋ ಝೈವಿಟ್ಸ್ಕಿ ಹೇಳಿದ್ದಾರೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಉಕ್ರೇನ್​ ಮೇಲೆ ರಷ್ಯಾ ಆಕ್ರಮಣದ ವಿಚಾರವಾಗಿ ವೋಟಿಂಗ್ ನಡೆದಿದೆ. 141 ರಾಷ್ಟ್ರಗಳು ಉಕ್ರೇನ್‌ ಮೇಲಿನ ರಷ್ಯಾ ದಾಳಿಯ ವಿರುದ್ಧ ಮತ ಚಲಾಯಿಸಿದರೆ, ಐದು ರಾಷ್ಟ್ರಗಳು ರಷ್ಯಾ ಪರವಾಗಿ ಮತ ಚಲಾಯಿಸಿವೆ. ಇನ್ನು ಭಾರತ ಸೇರಿ 35 ರಾಷ್ಟ್ರಗಳು ಮತದಾನದಿಂದ ದೂರ ಉಳಿದಿವೆ.



- Advertisement -

Latest Posts

Don't Miss