Saturday, June 21, 2025

Latest Posts

Recipe: ಸ್ಪೆಶಲ್ ವೆಜ್ ದಮ್ ಬಿರಿಯಾನಿ ರೆಸಿಪಿ

- Advertisement -

Recipe: ಇವತ್ತು ನಾವು ಸ್ಪೆಶಲ್ ವೆಜ್ ದಮ್ ಬಿರಿಯಾನಿ ಹೇಗೆ ಮಾಡೋದು, ಅದನ್ನು ಮಾಡಲು ಏನು ಬೇಕು ಅಂತಾ ತಿಳಿಯೋಣ.

ಬೇಕಾಗುವ ಸಾಮಗ್ರಿ: ಕ್ಯಾರೆಟ್, 2 ಈರುಳ್ಳಿ, ಬೀನ್ಸ್, ಬಟಾಣಿ, ಆಲೂಗಡ್ಡೆ, ಕ್ವಾಲಿ ಫ್ಲವರ್, ಪನೀರ್, ಅಕ್ಕಿ, ಚಿಟಿಕೆ ಅರಿಶಿನ, 1 ಸ್ಪೂನ್ ಖಾರದ ಪುಡಿ, ಗರಂ ಮಸಾಲೆ ಪುಡಿ, ಚಾಟ್ ಮಸಾಲೆ ಪುಡಿ, ಶುಂಠಿ ಬೆಳ್ಳುಳ್ಳಿ ಹಸಿಮೆಣಸಿನ ಪೇಸ್ಟ್, ಕಸೂರಿ ಮೇಥಿ, 1 ಕಪ್ ಮೊಸರು, ಕೊಂಚ ಸಕ್ಕರೆ, ತುಪ್ಪ, ಕೊತ್ತೊಂಬರಿ ಸೊಪ್ಪು, ರುಚಿಕೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಮೊದಲು ಒಂದು ಬೌಲ್‌ನಲ್ಲಿ ಕ್ಯಾರೇಟ್, ಬೀನ್ಸ್, ಕ್ವಾಲಿಫ್ಲವರ್, ತುಂಡರಿಸಿ ಕರಿದ ಈರುಳ್ಳಿ, ಬಟಾಣಿ, ಆಲೂಗಡ್ಡೆ, ಎಣ್ಣೆಯಲ್ಲಿ ಹುರಿದ ಪನೀರ್, ಖಾರದ ಪುಡಿ, ಉಪ್ಪು, ಅರಿಶಿನ, ಗರಂ ಮಸಾಲೆ, ಚಾಟ್ ಮಸಾಲೆ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಕಸೂರಿ ಮೇಥಿ, ಕೊತ್ತೊಂಬರಿ ಸೊಪ್ಪು, 1 ಸ್ಪೂನ್ ತುಪ್ಪ ಹಾಕಿ ಮಿಕ್ಸ್ ಮಾಡಿ 15 ನಿಮಿಷ ಹಾಗೆ ಬಿಡಿ.

ಅಲ್ಲಿಯವರೆಗೂ ನೀರು ಕುದಿಸಿ, ಅದಕ್ಕೆ ಪಲಾವ್ ಎಲೆ, ಚಕ್ಕೆ, ಲವಂಗ, ಏಲಕ್ಕಿ, ಜೀರಿಗೆ, ಸೋಂಪು, ಸ್ಟಾರ್ ಮಸಾಲೆ, ಕಾಳು ಮೆಣಸನ್ನು ಸ್ವಲ್ಪ ಕುಟ್ಟಿ ಹಾಕಿ. ಬಳಿಕ ಬಾಸುಮತಿ ಅಕ್ಕಿ ಹಾಕಿ, ಬಿಡಿ ಬಿಡಿಯಾದ ಅನ್ನ ಮಾಡಿಕೊಳ್ಳಿ.

ಬಳಿಕ ಪ್ಯಾನ್‌ಗೆ ತುಪ್‌ಪ ಹಾಕಿ, ಅದಕ್ಕೆ ಮಿಕ್ಸ್ ಮಾಡಿಟ್ಟುಕೊಂಡ ತರಕಾರಿ ಮಿಶ್ರಣ ಹಾಕಿ, ಅದರ ಮೇಲೆ ಅನ್ನ, ಮತ್ತೆ ಅದರ ಮೇಲೆ ಮಸಾಲೆ, ಹೀಗೆ ಲೇಯರ್ ಮಾಡಿ, ಕೊನೆಗೆ ಮೇಲಿನಿಂದ ಕೊತ್ತೊಂಬರಿ ಸೊಪ್ಪು, ಕರಿದ ಈರುಳ್ಳಿ, ಇದ್ದರೆ 2 ಸ್ಪೂನ್ ಕೇಸರಿ ಹಾಲು ಹಾಕಿ, ಬೇಯಲು ಬೇಕಾದಷ್ಟು ಬಿಸಿ ನೀರು ಹಾಕಿ ಮುಚ್ಚಳ ಮುಚ್ಚಿ ಮಂದ ಉರಿಯಲ್ಲಿ 5 ನಿಮಿಷ ಬೇಯಿಸಿದರೆ, ದಮ್ ಬಿರಿಯಾನಿ ರೆಡಿ.

- Advertisement -

Latest Posts

Don't Miss