National News: ಆಧ್ಯಾತ್ಮದ ಬಗ್ಗೆ ಮಾತನಾಡುತ್ತ, ಹಲವು ರಾಜ್ಯ, ದೇಶಗಳನ್ನು ಸುತ್ತಿ ಪ್ರಚಾರ ಮಾಡುವ ಆಧ್ಯಾತ್ಮಕ ಪ್ರಚಾರಕಿ ಜಯಾ ಕಿಶೋರಿ, ಕಾಸ್ಟ್ಲೀ ಬ್ಯಾಗ್ ಬಳಸಿ, ಟ್ರೋಲ್ ಆಗಿದ್ದಾರೆ.
ಅವರು 2 ಲಕ್ಷಕ್ಕೂ ಹೆಚ್ಚಿನ ಮೌಲ್ಯದ ಬ್ಯಾಗ್ ಬಳಸಿದ್ದು, ಇದು ದುಬಾರಿ ಡಿಯೋ ಹ್ಯಾಂಡ್ ಬ್ಯಾಗ್ ಆಗಿದೆ. ಏರ್ಪೋರ್ಟ್‌ನಲ್ಲಿ ಜಯಾಕಿಶೋರಿ ಈ ಬ್ಯಾಗ್ ಹಿಡಿದು, ಪಾಪರಾಜಿಗಳಿಗೆ ಪೋಸ್ ಕೊಟ್ಟಿದ್ದು, ಫೋಟೋ ವೈರಲ್ ಆಗುತ್ತಿದ್ದಂತೆ, ಟ್ರೋಲ್ ಆಗಿದ್ದಾರೆ.
ಆದ್ರೆ ಜಯಾ ಕಿಶೋರಿ ಟ್ರೋಲ್ ಆಗಲು ಕಾರಣವೇನು..? ಅವರು ದುಬಾರಿ ಬ್ಯಾಗ್ ಹಾಕಿದರೆ, ಏನು ತಪ್ಪು ಅನ್ನೋ ಪ್ರಶ್ನೆಗೆ ಉತ್ತರ, ಈ ಹ್ಯಾಂಡ್ ಬ್ಯಾಗ್‌ನಲ್ಲಿ ಪ್ರಾಣಿಯ ಚರ್ಮವನ್ನು ಬಳಸಲಾಗಿದೆ. ಜಯಾ ಕಿಶೋರಿ ಏರ್ವ ಆಧ್ಯಾತ್ಮಿಕ ಪ್ರಚಾರಕಿಯಾಗಿದ್ದಾರೆ. ಅಲ್ಲದೇ, ಸರಳ ಜೀವನದ ಬಗ್ಗೆ ಮಾತನಾಡುತ್ತಾರೆ. ಅಂಥವರೇ ಈ ರೀತಿ ದುಬಾರಿ, ಪ್ರಾಣಿಯ ಚರ್ಮ ಬಳಸಿ ಮಾಡಿದ ಬ್ಯಾಗ್ ಬಳಸುತ್ತಾರೆ ಅಂತಾ ಜಯಾ ಟ್ರೋಲ್ ಆಗಿದ್ದಾರೆ.
ಈ ಬ್ಯಾಗ್‌ನನ್ನು ಕರುವಿನ ಚರ್ಮ ಮತ್ತು ರೇಷ್ಮೆ ಹತ್ತಿಯಿಂದ ಮಾಡಲಾಗುತ್ತದೆಯಂತೆ. ಇಂಥ ಬ್ಯಾಗ್ ಬಳಸುವ ಜಯಾ ಕಿಶೋರಿ ತಮ್ಮನ್ನು ತಾವು ಶ್ರೀಕೃಷ್ಣನ ಭಕ್ತೆ ಎಂದು ಹೇಳಿಕೊಳ್ಳುತ್ತಾರೆ. ಅಲ್ಲದೇ, ಅಹಿಂಸೆ ಬಗ್ಗೆ ಮಾತನಾಡುತ್ತಾರೆ. ಆದರೆ ಅವರು ಬಳಸುವ ಬ್ಯಾಗ್ ಪ್ರಾಣಿಯ ಚರ್ಮದ್ದು ಎಂದು ಟ್ರೋಲ್ ಆಗಿದ್ದಾರೆ.