Spiritual: ಚಾಣಕ್ಯರು ಯಾರ್ಯಾರ ಸ್ವಭಾವ ಹೇಗಿರುತ್ತದೆ ಎಂಬುವುದರ ಮೇಲೆ, ಅವರ ಜೀವನ ಹೇಗಿರುತ್ತದೆ ಎಂದು ಹೇಳಿದ್ದಾರೆ. ಅದೇ ರೀತಿ ಯಾರು ಸದಾ ಉತ್ತಮ ಆರ್ಥಿಕ ಪರಿಸ್ಥಿತಿ ಹೊಂದಿರುತ್ತಾರೆ ಅನ್ನೋ ಬಗ್ಗೆಯೂ ಚಾಣಕ್ಯರು ಹೇಳಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ..
ಸೌಮ್ಯ ಸ್ವಭಾವದವರು: ಸೌಮ್ಯ ಸ್ವಭಾವದ ವ್ಯಕ್ತಿಗಳು ಸದಾ ಉತ್ತಮ ಆರ್ಥಿಕ ಪರಿಸ್ಥಿತಿ ಹೊಂದಿರುತ್ತಾರೆ ಎಂದು ಹೇಳಿದ್ದಾರೆ. ವಿನಮ್ರತೆಯಿಂದ ಇರುವ ವ್ಯಕ್ತಿ ಎಂದಿಗೂ ಜೀವನದಲ್ಲಿ ಯಶಸ್ಸು ಗಳಿಸುತ್ತಾನೆ. ಇವರ ಈ ವಿನಮ್ರ ಸ್ವಭಾವದಿಂದ ಲಕ್ಷ್ಮೀ ದೇವಿ ಬೇಗ ಒಲಿಯುತ್ತಾಳೆ. ಇತರರು ಇವರ ಸ್ವಭಾವವನ್ನು ಮೆಚ್ಚಿಕೊಳ್ಳುತ್ತಾರೆ. ಹಾಗಾಗಿ ವಿನಮ್ರ ಸ್ವಭಾವದವರು ಸದಾ ಉತ್ತಮ ಸ್ಥಿತಿಯಲ್ಲಿ ಇರುತ್ತಾರೆ ಎಂದು ಚಾಣಕ್ಯರು ಹೇಳುತ್ತಾರೆ.
ನಿಯತ್ತಿನಿಂದ ಇರುವವರು: ಯಾರು ಜೀವನದಲ್ಲಿ ನಿಯತ್ತಿನಿಂದ, ಪ್ರಾಮಾಣಿಕತೆಯಿಂದ ಇರುತ್ತಾರೆ ಅಂಥವರು ಉತ್ತಮ ಆರ್ಥಿಕ ಪರಿಸ್ಥಿತಿ ಹೊಂದಿರುತ್ತಾರೆ ಎಂದಿದ್ದಾರೆ ಚಾಣಕ್ಯರು. ನಿಯತ್ತಿನಿಂದ ಇರುವವರು ಯಾವ ಲಾಭವನ್ನು ಬಯಸದೇ, ಹೊಟ್ಟೆ ಪಾಡಿಗಾಗಿ ದುಡಿಯುತ್ತಾರೆ. ಮತ್ತು ಯಾರು ಯಾವ ಲಾಭವನ್ನೂ ಬಯಸದೇ, ಜೀವನ ನಡೆಸುತ್ತಾರೆ, ಲಕ್ಷ್ಮೀ ದೇವಿ ಅಂಥವರ ಮೇಲೆ ಕೃಪೆ ತೋರಿಸುತ್ತಾಳೆ. ಮತ್ತು ಅಂಥವರಿಗೆ ಬಯಸದೇ ಉತ್ತಮ ಆರ್ಥಿಕತೆ ಲಭ್ಯವಾಗುತ್ತದೆ.
ದುಷ್ಚಟದಿಂದ ದೂರವಿರುವವರು: ಯಾರಿಗೆ ಕುಡಿತ, ಧೂಮಪಾನ ಸೇವನೆ, ಹೆಣ್ಣಿನ ಹುಚ್ಚು ಸೇರಿ, ಬೇರೆ ಬೇರೆ ದುಷ್ಚಟಗಳು ಇರುವುದಿಲ್ಲವೋ, ಅಂಥವರ ಆರ್ಥಿಕ ಪರಿಸ್ಥಿತಿ ಚೆನ್ನಾಗಿರುತ್ತದೆ. ಆತ ಹೆಚ್ಚು ಶ್ರೀಮಂತನಾಗದಿದ್ದರೂ, ಅವನಿಗೆ ದುಡ್ಡಿನ ಕೊರತೆ ಎಂದಿಗೂ ಉಂಟಾಗುವುದಿಲ್ಲ ಎಂದಿದ್ದಾರೆ ಚಾಣಕ್ಯರು.