Spiritual: ಕಷ್ಟಕಾಲ ಎನ್ನುವುದು ಎಲ್ಲರಿಗೂ ಬರುತ್ತದೆ. ದೇವರು ಪ್ರತಿಯೊಬ್ಬರಿಗೂ ಕಷ್ಟ ಕೊಟ್ಟೇ ಕೊಡುತ್ತಾನೆ. ಏಕೆಂದರೆ, ಸುಖದಲ್ಲಿ ಇರುವವರು ದೇವರನ್ನು ಅಷ್ಟು ಸುಲಭವಾಗಿ ನೆನೆಸಿಕೊಳ್ಳುವುದಿಲ್ಲ. ಅದೇ ರೀತಿ ನಾವು ಕಷ್ಟ ಬಂದಾಗ, ಕೆಲವರ ಬಳಿ ಸಹಾಯ ಕೇಳಲೇಬಾರದು ಅಂತಾರೆ ಚಾಣಕ್ಯರು. ಹಾಗಾದ್ರೆ ನಾವು ಕಷ್ಟ ಬಂದಾಗ, ಯಾರ ಬಳಿ ಸಹಾಯ ಕೇಳಬಾರದು ಅಂತಾ ತಿಳಿಯೋಣ ಬನ್ನಿ.
ಸೋಮಾರಿ ವ್ಯಕ್ತಿಗಳ ಬಳಿ ಸಹಾಯ ಕೇಳಬೇಡಿ: ಸೋಮಾರಿಗಳು ತಮ್ಮ ಜೀವನವನ್ನೇ ತಾವು ನಿಭಾಯಿಸಿಕೊಳ್ಳಲು ಸಾಧ್ಯವಿಲ್ಲ. ಅಂಥದರಲ್ಲಿ ಅವರು ಇನ್ನೊಬ್ಬರಿಗೆ ಸಹಾಯ ಮಾಡಲು ಹೇಗೆ ಸಾಧ್ಯ..? ಅಲ್ಲದೇ, ಅವರು ಒಮ್ಮೆ ಸಹಾಯ ಮಾಡಿದರೂ, ಅದರ ಬದಲಾಗಿ ಹಲವು ಬಾರಿ ಲಾಭ ಪಡೆಯುವ ಸಾಧ್ಯತೆ ಇರುತ್ತದೆ. ಆಗ ನಿಮಗೇ ಯಾಕಾದರೂ ಅಂಥವರ ಬಳಿ ಸಹಾಯ ಕೇಳಿದೆನೋ ಎಂದು ಅನ್ನಿಸುತ್ತದೆ. ಹಾಗಾಗಿ ಸೋಮಾರಿಗಳ ಬಳಿ ಎಂದಿಗೂ ಸಹಾಯ ಕೇಳಬೇಡಿ.
ಹಂಗಿಸುವ ಮನಸ್ಥಿತಿ ಉಳ್ಳವರು: ಯಾರು ಕೊಂಕು ಮಾತನಾಡುವ, ಹಂಗಿಸುವ ಸ್ವಭಾವ ಉಳ್ಳವರಾಗಿರುತ್ತಾರೋ, ಅಂಥವರ ಬಳಿ ಎಂದಿಗೂ ಸಹಾಯ ಕೇಳಬೇಡಿ. ಇಂಥವರು ನಗು ನಗುತ್ತಲೇ ಸಹಾಯ ಮಾಡುತ್ತಾರೆ. ಬಳಿಕ ಇತರರ ಎದುರು, ನಿಮ್ಮನ್ನು ಆಡಿಕೊಳ್ಳುತ್ತಾರೆ. ಅಲ್ಲದೇ, ದುಡ್ಡು ಪಡೆದಲ್ಲಿ, ಅದನ್ನು ಹಿಂದಿರುಗಿಸುವುದು ಸ್ವಲ್ಪ ತಡವಾದರೂ, ಹಂಗಿಸಿ, ನಿಮ್ಮ ಮನಸ್ಸಿಗೆ ನೋವಾಗುವಂತೆ ಮಾತನಾಡುತ್ತಾರೆ.
ಮೂರ್ಖ ಜನರು: ಮೂರ್ಖರ ಬಳಿ ಎಂದಿಗೂ ಸಹಾಯ ಪಡೆಯಬಾರದು ಎಂದು ಚಾಣಕ್ಯರು ಹೇಳಿದ್ದಾರೆ. ಮೂರ್ಖರು ಎಂದರೆ, ಅಜ್ಞಾನಿಗಳು, ಅವಿದ್ಯಾವಂತರು. ಕೆಟ್ಟ ಜನರ ಸಹಾಯ ಮಾಡುವುದಕ್ಕೂ ಯೋಚಿಸದ ಜನರು. ಇಂಥವರ ಬಳಿ ನೀವು ಸಹಾಯ ಪಡೆದರೆ, ಮುಂದೆ ಕೆಟ್ಟದಾಗಿರುವ ದಿನವನ್ನು ಎದುರು ನೋಡಬೇಕಾಗುತ್ತದೆ ಅಂತಾರೆ ಚಾಣಕ್ಯರು.