Spiritual: ಚಾಣಕ್ಯರು ಜೀವನಕ್ಕೆ ಬೇಕಾದ ಎಲ್ಲ ವಿಷಯಗಳ ಬಗ್ಗೆ ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಅದೇ ರೀತಿ ನಾವು ಹೇಗೆ ಜೀವಿಸುತ್ತೇವೆ. ನಮ್ಮ ಮನಸ್ಥಿತಿ ಹೇಗಿರುತ್ತದೆ. ಅದರ ಮೇಲೆ ನಮ್ಮ ಜೀವನ ಅವಲಂಬಿತವಾಗಿದೆ ಅಂತಲೂ ಚಾಣಕ್ಯರು ಹೇಳುತ್ತಾರೆ. ಅದರಲ್ಲೂ ನಾವು ಕೆಲಸವನ್ನು ಗೌರವಿಸಿದರೆ, ನಮಗೆ ಯಶಸ್ಸು, ಹಣ, ಎಲ್ಲೂ ಸಿಗುತ್ತದೆ ಅಂತಾರೆ ಚಾಣಕ್ಯರು. ಹಾಾಗಾದ್ರೆ ಯಾರಿಗೆ ನಾವು ಗೌರವಿಸಬೇಕು ಅಂತಾ ತಿಳಿಯೋಣ ಬನ್ನಿ.
ಹೆಣ್ಣು ಮಕ್ಕಳನ್ನು ನಾವು ಗೌರವಿಸುವುದರಿಂದ ನಾವು ಜೀವನದಲ್ಲಿ ಹೆಚ್ಚು ಯಶಸ್ಸು, ಹಣ, ಗೌರವ ಎಲ್ಲವನ್ನೂ ಪಡೆಯುತ್ತೇವೆ. ಮೊದಲನೇಯದಾಗಿ ತಾಯಿ, ತಂಗಿ, ಪತ್ನಿ, ಮಗಳು. ಒಬ್ಬಳು ನಿಮ್ಮನ್ನು ಹೆತ್ತಿರುತ್ತಾಳೆ. ಇನ್ನೊಬ್ಬಳು ನಿಮ್ಮ ಒಡ ಹುಟ್ಟಿದವಳಾಗಿರುತ್ತಾಳೆ. ತಾಯಿಯ ಬಳಿಕ, ಆಕೆಯೇ ನಿಮ್ಮನ್ನು ತಾಾಯಿಯಂತೆ ಕಾಳಜಿ ಮಾಡುವವಳು. ಮತ್ತೊಬ್ಬಳು ನಿಮ್ಮನ್ನೇ ನಂಬಿ, ತನ್ನವರನ್ನು ಬಿಟ್ಟು ಬಂದಿರುತ್ತಾಳೆ. ನಾಲ್ಕನೇಯದಾಗಿ ನೀವು ಹೆತ್ತಿರುವ ಮಗಳು. ಇವರೆಲ್ಲರನ್ನೂ ನೀವು ಗೌರವಿಸಿ, ಪ್ರೀತಿಸಿ, ಕಾಳಜಿ ವಹಿಸಿದರೆ ಮಾತ್ರ, ನೀವು ಜೀವನದಲ್ಲಿ ಯಶಸ್ವಿಯಾಗಿ, ನೆಮ್ಮದಿಯಿಂದ ಇರುತ್ತೀರಿ.
ಎರಡನೇಯದಾಗಿ ಗುರುವಿನ ಪತ್ನಿಯನ್ನು ಗೌರವಿಸಿ. ಗುರು ನಿಮಗೆ ವಿದ್ಯೆಯನ್ನು ಧಾರೆ ಎರೆದಿರುತ್ತಾರೆ. ಎಷ್ಟೋ ಗುರು ಪತ್ನಿಯರು ತಮ್ಮ ವಿದ್ಯಾರ್ಥಿಗಳನ್ನು ತಾಯಿಯಂತೆ ಕಾಳಜಿ ಮಾಡುತ್ತಾರೆ. ಪ್ರೀತಿ ಮಾಡುತ್ತಾರೆ. ಅಂಥ ಮಾತೆಯರನ್ನು ನಾವು ಗೌರವದಿಂದ ಕಾಣಬೇಕು ಅಂತಾರೆ ಚಾಣಕ್ಯರು.
ಮೂರನೇಯದಾಗಿ ಸ್ನೇಹಿತನ ಪತ್ನಿಯನ್ನು ಗೌರವಿಸಿ. ಸ್ನೇಹ ಅನ್ನೋದು ಎಲ್ಲರಿಗೂ ಸಿಗುವ ಸ್ವತ್ತಲ್ಲ. ಒಂದು ವಕ್ರದೃಷ್ಟಿಯಿಂದ ಬಾಂಧವ್ಯ ಹಾಳಾಗಲು ಬಿಡಬಾರದು. ಹಾಗಾಗಿ ಸ್ನೇಹಿತನ ಪತ್ನಿಯನ್ನು ನೀವು ಗೌರವಿಸಬೇಕು ಅಂತಾರೆ ಚಾಣಕ್ಯರು.
ನಾಲ್ಕನೇಯದಾಗಿ ರಾಜನ ಪತ್ನಿಯನ್ನು ಗೌರವಿಸಿ. ರಾಜ ತನ್ನ ಪ್ರಜೆಗಳನ್ನು ಮಕ್ಕಳಂತೆ ಕಾಣುತ್ತಾನೆ. ಅದೇ ರೀತಿ ಪ್ರಜೆಗಳು ರಾಜ ಮತ್ತು ರಾಣಿಯನ್ನು ತಂದೆ ತಾಯಿಯಂತೆ ಗೌರವಿಸಬೇಕು ಅಂತಾರೆ ಚಾಣಕ್ಯರು. ಇಷ್ಟು ಜನರಲ್ಲಿ ನೀವು ಯಾವುದೇ ಹೆಣ್ಣಿಗೆ ಅಗೌರವ ತೋರಿದರೂ, ಅದು ನಿಮ್ಮ ಜೀವನದ ಕಪ್ಪು ಚುಕ್ಕೆಯಾಗುತ್ತದೆ. ಮತ್ತು ನಿಮ್ಮ ಗೌರವ, ಯಶಸ್ಸು ಎಲ್ಲವನ್ನೂ ಕಿತ್ತುಕೊಳ್ಳುತ್ತದೆ.