Chanakya Neeti: ನಮ್ಮ ಜೀವನದಲ್ಲಿ ಹಲವರು ಬರುತ್ತಾರೆ. ಕೆಲವರು ಜೀವನದಲ್ಲಿ ಕೊನೆಯವರೆಗೂ ಜೊತೆಯಾಗಿರುತ್ತಾರೆ. ಮತ್ತೆ ಕೆಲವರು ಅರ್ಧಕ್ಕೆ ಹೊರಟು ಹೋಗುತ್ತಾರೆ. ಇದರಲ್ಲೂ ಕೆಲವರು ಹಾಗೇ ಹೋಗುತ್ತಾರೆ. ಮತ್ತೆ ಕೆಲವರು ಮೋಸ ಮಾಡಿ, ಪಾಠ ಕಲಿಸಿ ಹೋಗುತ್ತಾರೆ. ಹಾಗಾಗಿ ಚಾಣಕ್ಯರು ಯಾರನ್ನಾದರೂ ನಂಬುವ ಮುನ್ನ ಕೆಲ ವಿಚಾರಗಳನ್ನು ಗಮನದಲ್ಲಿ ಇರಿಸಿ ಎಂದು ಹೇಳಿದ್ದಾರೆ. ಅದು ಯಾವ ವಿಚಾರ ಅಂತಾ ತಿಳಿಯೋಣ ಬನ್ನಿ.
ಸಹಾಯ ಮಾಡುವ ಗುಣ: ನಿಮಗೆ ಪರಿಚಯವಾಗಿರುವ ವ್ಯಕ್ತಿಗೆ ಸಹಾಯ ಮಾಡುವ ಗುಣ ಇದೆಯಾ ಇಲ್ಲವಾ..? ಆತ ಕೊಂಚವಾದರೂ ದಾನ ಮಾಡುವ ಬುದ್ಧಿ ಹೊಂದಿದ್ದಾನಾ ಅಥವಾ ಕಂಜೂಸು ತನ ಮಾಡುವವನಾ ಅಂತಾ ನೀವು ತಿಳಿದುಕೊಳ್ಳಬೇಕು. ಯಾಕಂದ್ರೆ ಸಹಾಯ ಮನೋಭಾವ ಹೊಂದದ, ನಾನ್ಯಾಕೆ ಇನ್ನೊಬ್ಬರಿಗೆ ಸಹಾಯ ಮಾಡಬೇಕು ಎನ್ನುವ ಜನ ಎಂದಿಗೂ ನಂಬಿಕಸ್ಥರಾಾಗಿರುವುದಿಲ್ಲ.
ವಿನಯತೆ: ನಿಮಗೆ ಪರಿಚಯವಾಗಿರುವ ವ್ಯಕ್ತಿ, ಯಾರ ಬಳಿ ಹೇಗೆ ಮಾತನಾಡುತ್ತಾರೆ. ಯಾರಿಗೆ ಯಾವ ರೀತಿ ಗೌರವಿಸುತ್ತಾನೆ ಅನ್ನೋಜು ತುಂಬಾ ಮುಖ್ಯ. ಕೊಂಕು ಮಾತನಾಡುವ, ಮನಸ್ಸಿಗೆ ನೋವುಂಟು ಮಾಡುವ ರೀತಿ ಮಾತನಾಡುವ ಮತ್ತು ಹಿರಿಯರನ್ನು ಗೌರವಿಸದೇ ಮಾತನಾಡುವ ವ್ಯಕ್ತಿ, ಎಂದಿಗೂ ಉತ್ತಮ ವ್ಯಕ್ತಿಯಾಗಲು ಸಾಧ್ಯವಿಲ್ಲ.
ಪರಿಶ್ರಮ: ಕಠಿಣ ಪರಿಶ್ರಮ ಪಡುವ, ತನ್ನ ಹೆತ್ತವರನ್ನು ಚೆನ್‌ನಾಗಿ ನೋಡಿಕೊಳ್ಳುವ ಗುಣ ಹೊಂಿದರುವ ವ್ಯಕ್ತಿಗಳನ್ನು ನೀವು ಸಾದ ನಂಬಬಹುದು. ಆದರೆ ಹೆತ್ತವರನ್ನು ನೋಡಿಕೊಳ್ಳುದಕ್ಕಿಂತ, ತನ್ನ ಆಸೆ ಆಕಾಂಕ್ಷೆಗೆ ಹೆಚ್ಚು ಬೆಲೆ ಕೊಡುವ, ಜವಾಬ್ದಾರಿ ಇಲ್ಲದವರು ಎಂದಿಗೂ ನಿಮಗೆ ನೆಮ್ಮದಿ ಕೊಡಲಾರರು. ಅಂಥವರು ಸಾಮಾನ್ಯ ಸ್ನೇಹಿತರಾಗಿದ್ದರೆ ಉತ್ತಮ.
ಗುಣ: ನಿಮ್ಮ ಜೊತೆಗಿರುವವರ ಗುಣ ಹೇಗಿದೆ. ಉತ್ತಮ ಗುಣ ಉಳ್ಳವರಾ. ಒಬ್ಬರ ಬಗ್ಗೆ ಇನ್ನೊಬ್ಬರ ಬಳಿ, ಬಣ್ಣ ಬಳಿದು ಮತನಾಡುತ್ತಾರಾ..? ಜಗಳ ಹಚ್ಚುವ, ಹೊಟ್ಟೆಕಿಚ್ಚು ಪಡುವ ಗುಣ ಇವರಿಗಿದೆಯಾ..? ಇತ್ಯಾದಿ ವಿಷಯಗಳನ್ನು ತಿಳಿದುಕೊಳ್ಳಬೇಕು. ಹೆಣ್ಣಾಗಲಿ, ಗಂಡಾಗಲಿ, ಅನುಮಾನ ಪಡುವ, ಹೊಟ್ಟೆಕಿಚ್ಚು ಪಡುವ, ಬಣ್ಣ ಬಣ್ಣದ ಮಾತುಗಳನ್ನಾಡುವ ಜನರಿಂದ ದೂರವಿರಬೇಕು. ಇಂಥವರು ಎಂದಾದರೂ ಮೋಸ ಮಾಡೇ ಮಾಡುತ್ತಾರೆ.