Spiritual: ವಿವಾಹವಾದ ಬಳಿಕ ಒಂದಲ್ಲ ಒಂದು ಸಮಸ್ಯೆ ಬಂದೇ ಬರುತ್ತದೆ. ಆರ್ಥಿಕ ಪರಿಸ್ಥಿತಿ, ಸುಖ ದಾಂಪತ್ಯ, ನೆಮ್ಮದಿ ಹೀಗೆ ಎಲ್ಲ ವಿಷಯದಲ್ಲೂ ಒಂದಲ್ಲ ಒಂದು ರೀತಿಯಲ್ಲಿ ಕಷ್ಟ ಬರುತ್ತದೆ. ಈ ಕಷ್ಟ ಬರಲು ಕಾರಣವೇನು ಅಂದ್ರೆ, ಗೊತ್ತಿಲ್ಲದೇ ಪತ್ನಿ ಮಾಡುವ ತಪ್ಪು. ಹಾಗಾದ್ರೆ ಮಹಿಳೆಯರು ಮಾಡಬಾರದ ತಪ್ಪುಗಳು ಅಂದ್ರೆ ಯಾವುದು ಅಂತಾ ತಿಳಿಯೋಣ ಬನ್ನಿ.
ಮೊದಲನೇಯ ತಪ್ಪು ಸೌಂದರ್ಯದ ಹೆಸರಿನಲ್ಲಿ ಹೆಣ್ಣು ಮಕ್ಕಳು ಉದ್ದೂದ್ದ ಉಗುರು ಬೆಳೆಸಬಾರದು. ಸೂರ್ಯಾಸ್ತದ ಬಳಿಕ ತಲೆಗೂದಲು ಬಾಚಬಾರದು. ಎಣ್ಣೆ ಹಚ್ಚಬಾರದು. ಕಸ ಗುಡಿಸಬಾರದು. ನಿದ್ರಿಸಬಾರದು. ಜಗಳವಾಡಬಾರದು. ಕಣ್ಣೀರು ಹಾಕಬಾರದು. ಕೆಟ್ಟ ಕೆಟ್ಟ ಪದಗಳನ್ನು ಬೈಯ್ಯಬಾರದು. ಇವೆಲ್ಲವೂ ಮನೆಗೆ ದರಿದ್ರ ತರುವ ಸಂಗತಿ. ಇನ್ನು ಪುರುಷರು ಕೂಡ ಹೆಣ್ಣು ಮಕ್ಕಳು ಕಣ್ಣೀರು ಹಾಕುವಂತೆ, ಮನಸ್ಸಿಗೆ ಬೇಸರವಾಗುಂತೆ ನಡೆದುಕೊಳ್ಳಬಾರದು.
ಎರಡನೇಯ ತಪ್ಪು ಹೆಣ್ಣು ಮಕ್ಕಳು ಹೆಚ್ಚು ಆಲಸ್ಯ ಹೊಂದಿರಬಾರದು. ಯಾವ ಹೆಣ್ಣು ಮಕ್ಕಳು ಹೆಚ್ಚು ಆಲಸ್ಯ ಹೊಂದಿರುತ್ತಾರೋ, ಅಂಥ ಮನೆಯಲ್ಲಿ ಸದಾ ಜಗಳವಾಗುತ್ತಿರುತ್ತದೆ. ಹೆಚ್ಚು ನಿದ್ರಿಸುವುದು. ಕೆಲಸ ಮಾಡದಿರುವುದು. ಬೇಕಾದ ಹಾಗೆ ಅನವಶ್ಯಕ ವಸ್ತುಗಳಿಗಾಗಿ ಖರ್ಚು ಮಾಡುವುದು ಇತ್ಯಾದಿ ಕೆಲಸಗಳಿಂದಲೇ ಮನೆಯ ನೆಮ್ಮದಿ ಹಾಳಾಗುತ್ತದೆ.
ಮೂರನೇಯ ತಪ್ಪು ರಾತ್ರಿ ಹೊತ್ತು ಬಟ್ಟೆ ಒಗೆಯಬಾರದು. ಬೆಳಿಗ್ಗೆ ಸೂರ್ಯೋದಯವಾದ ಬಳಿಕ ನಾವು ಬಟ್ಟೆ ಒಗೆದು ಒಣಗಿಸಲು ಹಾಕಬೇಕು. ಸೂರ್ಯನ ಬೆಳಕು, ಕಿರಣ ತಾಕಿಯೇ ಬಬಟ್ಟೆ ಒಣಗಬೇಕು. ಆಗಲೇ, ಬಟ್ಟೆಯಲ್ಲಿ ಕೀಟಾಣುಗಳ ಸಂಖ್ಯೆ ಕಡಿಮೆಯಾಗುತ್ತದೆ. ಅಲ್ಲದೇ, ಮನೆಯಲ್ಲಿ ವಾತಾವರಣ ಆರೋಗ್ಯಕರವಾಗಿರುತ್ತದೆ. ರಾತ್ರಿ ಹೊತ್ತು ಬಟ್ಟೆ ಒಗೆದು ಒಣಗಿಸಿದರೆ, ನಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚಾಗುತ್ತದೆ. ಮನೆಯಲ್ಲಿ ಕಲಹ, ಆರೋಗ್ಯ ಹಾನಿ, ನೆಮ್ಮದಿ ಹಾಳಾಗುವುದೆಲ್ಲ ಆಗುತ್ತದೆ.
ನಾಲ್ಕನೇಯ ತಪ್ಪು ಪೂಜೆ ಮಾಡುವ ಸಮಯದಲ್ಲಿ ತಪ್ಪು ಮಾಡಬಾರದು. ಮುಟ್ಟಾದ ಸಮಯದಲ್ಲಿ ದೇವರ ಕೋಣೆಗೆ ಹೋಗುವುದು, ಪೂಜೆಯಲ್ಲಿ ಭಾಗವಹಿಸುವುದೆಲ್ಲ ಮಾಡಬಾರದು. ಅಲ್ಲದೇ, ಮಂಗಳವಾರ ಶುಕ್ರವಾರದ ಸಮಯದಲ್ಲಿ, ದೀಪ ಹಚ್ಚಿನ ಬಳಿಕ ಕಣ್ಣೀರು ಹಾಕಬಾರದು. ಇದರಿಂದ ಮನೆಯ ನೆಮ್ಮದಿಯ ಜೊತೆಗೆ, ಆರ್ಥಿಕ ಪರಿಸ್ಥಿತಿ ಹದಗೆಡುತ್ತದೆ.