Friday, April 4, 2025

Latest Posts

Spiritual: ರಾತ್ರಿ ಸಮಯದಲ್ಲೇಕೆ ಅಂತ್ಯಕ್ರಿಯೆ ಮಾಡಬಾರದು ಗೊತ್ತಾ..?

- Advertisement -

Spiritual: ಹಿಂದೂ ಧರ್ಮದಲ್ಲಿ ಹಲವು ಪದ್ದತಿಗಳಿದೆ. ಬೆಳಿಗ್ಗೆ ಎದ್ದಾಗಿನಿಂದ ಹಿಡಿದು, ರಾತ್ರಿ ಮಲಗುವವರೆಗೂ ನಾವು ಹಲವು ನಿಯಮಗಳ ಅನುಸಾರ ಮಾಡಬೇಕು. ಆದರೆ ಇಂದಿನ ಕಾಲದಲ್ಲಿ ಅಷ್ಟೊಂದು ನಿಯಮ ಅನುಸಾರ ಯಾರೂ ಮಾಡುವುದಿಲ್ಲ. ಸಾವಿನ ಸಮಯದಲ್ಲೂ ಕೂಡ ನಾವು ಕೆಲ ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ಇದೇ ಸಮಯದಲ್ಲಿ ಅಂತ್ಯಕ್ರಿಯೆ ಮಾಡಬೇಕು. ಇಂಥ ಸಮಯದಲ್ಲಿ ಅಂತ್ಯಕ್ರಿಯೆ ಮಾಡಬಾರದು ಅಂತೆಲ್ಲ ನಿಯಮಗಳಿದೆ. ಅದರಲ್ಲೂ ರಾತ್ರಿ ಹೊತ್ತು ಅಂತ್ಯಕ್ರಿಯೆ ಮಾಡಬಾರದು ಎಂದು ಹಿಂದೂಗಳಲ್ಲಿ ನಿಯಮವಿದೆ. ಹಾಗಾದ್ರೆ ಯಾಕೆ ರಾತ್ರಿ ಹೊತ್ತು ಅಂತ್ಯಸಂಸ್ಕಾರ ಮಾಡುವುದಿಲ್ಲ ಅಂತಾ ತಿಳಿಯೋಣ ಬನ್ನಿ.

ಹಿಂದೂಗಳಲ್ಲಿ ಮದುವೆ, ಮುಂಜಿ, ಗೃಹಪ್ರವೇಶ ಅಥವಾ ಶ್ರಾದ್ಧ ಕಾರ್ಯ, ಅಂತ್ಯಸಂಸ್ಕಾರ, ಇವೆಲ್ಲವೂ ಸೂರ್ಯ ನಾರಾಯಣನ ನೇತೃತ್ವದಲ್ಲಿ ನಡೆಯಬೇಕು ಎಂದು ಹೇಳಲಾಗುತ್ತದೆ. ಶುಭ ಕಾರ್ಯಗಳು ಸೂರ್ಯ ನಾರಾಯಣನ ನೇತೃತ್ವದಲ್ಲಿ ನಡೆದರೆ, ಮನೆಗೆ ಶುಭವಾಗುತ್ತದೆ. ಅಂತ್ಯಸಂಸ್ಕಾರ ನಡೆದರೆ, ಮೃತನ ಆತ್ಮಕ್ಕೆ ಶಾಂತಿ ಸಿಗುತ್ತದೆ ಅಂತಾ ಹೇಳಲಾಗುತ್ತದೆ. ಇನ್ನು ಇಲ್ಲಿ ಸೂರ್ಯ ನಾರಾಯಣ ಅಂದ್ರೆ ಸೂರ್ಯದೇವ. ಇದರ ಅರ್ಥವೇನೆಂದರೆ ಅಂತ್ಯಸಂಸ್ಕಾರವನ್ನು ಸೂರ್ಯನ ಆಶೀರ್ವಾದದೊಂದಿಗೆ ಸೂರ್ಯಾಸ್ತವಾಗುವುದರೊಳಗೇ ಮಾಡಬೇಕು.

ಅಲ್ಲದೇ ಸೂರ್ಯನ ಆಶೀರ್ವಾದ ಪಡೆದರೆ ಮೃತರ ಆತ್ಮಕ್ಕೆ ಶಾಂತಿ ಸಿಗುತ್ತದೆ. ಮತ್ತು ಅವರು ಮೋಕ್ಷದೆಡೆಗೆ ಹೋಗುತ್ತಾರೆ ಎನ್ನುವ ನಂಬಿಕೆ ಇದೆ. ಅಲ್ಲದೇ ಸೂರ್ಯೋದಯದ ಸಮಯದಲ್ಲಿ ಉತ್ತಮ ಮುಹೂರ್ತ ಕಂಡು, ಅಂತ್ಯ ಸಂಸ್ಕಾರ ಮಾಡಲಾಗುತ್ತದೆ. ಸೂರ್ಯಾಸ್ತದ ಬಳಿಕ ನಕಾರಾತ್ಮಕ ಶಕ್ತಿಗಳ ಪ್ರಭಾವ ಹೆಚ್ಚಾಗುವ ಕಾರಣಕ್ಕೆ, ಸೂರ್‌ಯಾಸ್ತವಾಗುವುದರೊಳಗೆ ಅಂತ್ಯಸಂಸ್ಕಾರ ಮಾಡಬೇಕು.

ಅಲ್ಲದೇ, ಅಗ್ನಿದೇವನ ಪ್ರಭಾವ ಸೂರ್ಯೋದಯವಾಾದ ಬಳಿಕ ಹೆಚ್ಚಾಗುತ್ತದೆ. ಹೀಗಾಗಿ ಅಂತ್ಯಸಂಸ್ಕಾರವನ್ನು ಸೂರ್ಯನ ಬೆಳಕಿನಲ್ಲಿ ಮಾಡಲು ಇದೂ ಒಂದು ಕಾರಣವಾಗಿದೆ.

- Advertisement -

Latest Posts

Don't Miss